ತಲೆನೋವಿನ ಡೈರಿ
‘ತಲೆನೋವಿನ ಡೈರಿ’ಯನ್ನು ಮೈಗೇನ್‌ನಿಂದ ಬಳಲುತ್ತಿರುವ ಪ್ರತಿಯೊಬ್ಬರೂ ಕಾಪಿಡಬೇಕು. ಪ್ರತಿ ಬಾರಿ ತಲೆನೋವು ಬಂದಾಗ ದಿನ, ಸಮಯ, ತಲೆನೋವು ಇದ್ದ ಅವಧಿ – ಇವನ್ನು ಈ ಪುಸ್ತಕದಲ್ಲಿ ಬರೆಯಬೇಕು. ಹಾಗೆಯೇ ಮುಖ್ಯವಾದದ್ದು, ಅದು ಬರುವುದಕ್ಕೆ ಮುಂಚೆ ಏನಾದರೂ ಕಾರಣಗಳು (Triggers) ಇವೆಯೇ ಎಂಬುದು. ಬಿಸಿಲಿಗೆ ಹೋಗಿದ್ದೆ ಅಥವಾ ತಣ್ಣೀರಿನಲ್ಲಿ ತಲೆಸ್ನಾನ ಮಾಡಿದೆ ಅಥವಾ ಮನಸ್ಸಿಗೆ ತುಂಬಾ ನೋವಾಗಿ ಅತ್ತಿದ್ದೆ – ಹೀಗೆ ಬೇರೆ ಬೇರೆ ಕಾರಣಗಳಿರಬಹುದು. ಚಿಕಿತ್ಸೆ ನೀಡುವುದಕ್ಕೆ ಮತ್ತು ನಂತರದಲ್ಲಿ ರೋಗಿ ಹೇಗೆ ಗುಣಮುಖರಾಗಿದ್ದಾರೆ ಎಂದು ತಿಳಿದುಕೊಳ್ಳುವುದಕ್ಕೆ ಈ ತಲೆನೋವಿನ ಡೈರಿ ತುಂಬಾ ಸಹಕಾರಿ.