ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಇಂದು ಸಾಕಷ್ಟು ಮಹಿಳೆಯರು ಗರ್ಭವತಿಯಾಗಲು ಕಷ್ಟಪಡುವಂತಾಗಿದೆ. ಸಾಕಷ್ಟು ಚಿಕಿತ್ಸೆಗಳಿಗೆ ಒಳಗಾಗುತ್ತಿದ್ದರೂ ಸಹ ಗರ್ಭಧರಿಸಲು ಸಾಧ್ಯವಾಗದ ಸಾಕಷ್ಟು ದಂಪತಿ ನೋವು ಅನುಭವಿಸುತ್ತಿದ್ದಾರೆ. ಇಂಥವರಿಗಾಗಿಯೇ ಇನ್ವಿಟ್ರೊ ಫರ್ಟಿಲೈಸೇಶನ್ (IVF) ಭರವಸೆ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ವಿಧಾನ ಹೆಚ್ಚು ಪ್ರಚಲಿತದಲ್ಲಿದ್ದು ಸಾಕಷ್ಟು ದಂಪತಿಗಳಿಗೆ ಆಶಾಕಿರಣವಾಗಿದೆ. ಪ್ರತಿ ವರ್ಷ ಜುಲೈ 25ರಂದು ವಿಶ್ವ ಐವಿಎಫ್ ದಿನವನ್ನು ಆಚರಿಸಲಾಗುತ್ತದೆ. ಹಾಗಿದ್ದರೆ ಏನಿದು ಐವಿಎಫ್, ಇದರಿಂದ ಮಕ್ಕಳ ಪಡೆಯುವುದು ಹೇಗೆ ಸೇರಿದಂತೆ ಐವಿಎಫ್ನ ಕುರಿತು ಒಂದಷ್ಟು ಮಾಹಿತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ.

ಏನಿದು ಐವಿಎಫ್?

ಸಹಜ ಪ್ರಕ್ರಿಯಿಂದ ಗರ್ಭ ಧರಿಸಲು ಸಾಧ್ಯವಾಗದೇ ಇರುವ ದಂಪತಿಗಳಿಗೆ ಕೃತಕವಾಗಿ ಇನ್ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧಾರಣೆ ಮಾಡಲು ಸಾಧ್ಯವಿದೆ. ಈ ವಿಧಾನದ ಮೂಲಕ, ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣುಗಳನ್ನು ತೆಗೆದು ಪ್ರಯೋಗಾಲಯದಲ್ಲಿ ಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡುವ ಕ್ರಿಯೆಯೇ ಐವಿಎಫ್.

ಯಾರಿಗೆ ಐವಿಎಫ್ ಸೂಕ್ತ:

ಐವಿಎಫ್ ವಿಧಾನದಿಂದ ಎಂಥವರೂ ಕೂಡ ಮಕ್ಕಳು ಪಡೆಯಬಹುದು ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇದಕ್ಕೂ ಕೆಲವು ಆಯಕಟ್ಟುಗಳಿವೆ. 35 ವರ್ಷ ಒಳಗಿರುವವರು ಇದರ ಸಂಪೂರ್ಣ ಫಲವನ್ನು ಪಡೆಯಬಹುದು. ಇದಾದ ಬಳಿಕ ಯಶಸ್ವಿ ಪ್ರಮಾಣ ಕಡಿಮೆ ಇರಲಿದೆ. ವಯಸ್ಸಾದಂತೆ ಮಹಿಳೆಯರ ಮೊಟ್ಟೆಯ ಗುಣಮಟ್ಟವೂ ಕ್ಷೀಣಿಸುತ್ತದೆ. 35 ವರ್ಷ ಒಳಗಿದ್ದೂ ಬಂಜೆತನ ಅನುಭವಿಸುತ್ತಿರವವರು, ಹಲವು ಬಾರಿ ಗರ್ಭಪಾತ ಹೊಂದಿರುವವರು, ದೇಹದ ತೂಕ ಹೆಚ್ಚಿರುವವರು, ಮಧುಮೇಹ, ರಕ್ತದೊತ್ತಡ ಅಥವಾ ಇತರೆ ಆರೋಗ್ಯ ಸಮಸ್ಯೆಯಿಂದ ಗರ್ಭಧರಿಸಲು ಸಾಧ್ಯವಾಗದೇ ಇರುವವರಿಗೆ ಐವಿಎಫ್ ವಿಧಾನ ಹೆಚ್ಚು ಪ್ರಯೋಜನಕಾರಿ.

ಯಾವ ವಯಸ್ಸಿನವರಿಗೆ ಸೂಕ್ತ:

ಸಾಮಾನ್ಯವಾಗಿ 35 ವರ್ಷದೊಳಗೆ ಮಹಿಳೆಯರು ಸಹಜವಾಗಿಯೇ ಗರ್ಭಧರಿಸಲು ಪ್ರಯತ್ನಿಸುತ್ತಾರೆ. ಆದರೆ ಆಗದೇ ಇದ್ದಾಗ ಐವಿಎಫ್ಗೆ ಒಳಗಾಗಬಹುದು, ಈ ವಯಸ್ಸಿನಲ್ಲಿ ಈ ವಿಧಾನಕ್ಕೆ ಒಳಗಾಗುವುದರಿಂದ ಶೇ 40 ರಿಂದ ಶೇ 50ರಷ್ಟು ಯಶಸ್ವಿ ಪ್ರಮಾಣ ಇರಲಿದೆ. 35-37 ವರ್ಷದವರಲ್ಲಿ ಶೇ 35ರಷ್ಟು ಯಶಸ್ವಿಯಾಗಲಿದೆ. 38-40 ವರ್ಷದೊಳಗಿನವರಿಗೆ ಯಶಸ್ವಿ ಪ್ರಮಾಣ ಶೇ 20 ರಿಂದ ಶೇ 25ರಷ್ಟಿರಲಿದೆ.

ಇದಾದ ಬಳಿಕವೂ ಸಾಧ್ಯವಾಗದೇ ಇದ್ದಾಗ ವೈದ್ಯರಲ್ಲಿ ಪರೀಕ್ಷಿಸಿಕೊಂಡು ನಂತರ ಅವರ ನಿರ್ದೇಶನದ ಮೇಲೆ ಐವಿಎಫ್ಗೆ ಒಳಗಾಗಬಹುದು. 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಕಡಿಮೆ ಯಶಸ್ಸಿನ ಪ್ರಮಾಣವನ್ನು ಎದುರಿಸುತ್ತಾರೆ, ಸಾಮಾನ್ಯವಾಗಿ ಪ್ರತಿ ಚಕ್ರಕ್ಕೆ ಸುಮಾರು ಶೇ10 ರಿಂದ ಶೇ15ರಷ್ಟು ಯಶಸ್ವಿ ಪ್ರಮಾಣವಿರಲಿದೆ. ವಯಸ್ಸಿನೊಂದಿಗೆ ಫಲವತ್ತತೆ ಗುಣಮಟ್ಟವು ಗಮನಾರ್ಹವಾಗಿ ಕ್ಷೀಣಿಸುತ್ತದೆ. ಹೀಗಾಗಿ ಮಕ್ಕಳಾಗದೇ ಇರುವವರು ಐವಿಎಫ್ ಚಿಕಿತ್ಸೆಯನ್ನು ಸಾಧ್ಯವಾದಷ್ಟು 35 ವರ್ಷ ಒಳಗೇ ಪಡೆಯುವುದರಿಂದ ಈ ಚಿಕಿತ್ಸೆಯ ಫಲವನ್ನು ಪಡೆಯಬಹುದು.

IVF ಯಶಸ್ಸಿನ ಮೇಲೆ ಪ್ರಭಾವ ಬೀರುವ ಇತರೆ ಅಂಶಗಳು:

ಕೇವಲ ವಯಸ್ಸು ಅಷ್ಟೇ ಅಲ್ಲದೆ ಇತರೆ ಅಂಶಗಳು ಕೂಡ ಐವಿಎಫ್ನ ಯಶಸ್ಸಿನ ಮೇಲೆ ಪ್ರಭಾವ ಬೀರಬಹುದು.

ಭ್ರೂಣದ ಗುಣಮಟ್ಟ: IVF ಸಮಯದಲ್ಲಿ ವರ್ಗಾವಣೆಗೊಂಡ ಭ್ರೂಣಗಳ ಗುಣಮಟ್ಟದ್ದಾಗಿರಬೇಕು, ಆಗಲೇ ಮಗುವಿನ ಬೆಳವಣಿಗೆ ಸಾಧ್ಯ.

ಜೀವನಶೈಲಿ: ಐವಿಎಫ್ಗೆ ಒಳಪಡುವ ಮಹಿಳೆ ಹಾಗೂ ಪುರುಷರು ಆರೋಗ್ಯಕ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಪ್ರಾರಂಭಿಸಬೇಕು. ಇದಕ್ಕಾಗಿ ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು, ಧೂಮಪಾನ, ಮದ್ಯಪಾನ ತ್ಯಜಿಸುವುದು, ಒತ್ತಡ ನಿರ್ವಹಣೆ, ತಾಜಾ ಆಹಾರ ಸೇವನೆ ಸೇರಿದಂತೆ ಧನಾತ್ಮಕ ಬದಲಾವಣೆ ಮಾಡಿಕೊಳ್ಳುವುದರಿಂದ IVF ಫಲಿತಾಂಶ ಯಶಸ್ವಿಯಾಗಲಿದೆ.

ವೈದ್ಯಕೀಯ ಇತಿಹಾಸ: ಎಂಡೊಮೆಟ್ರಿಯೊಸಿಸ್, ಗರ್ಭಾಶಯದ ಅಸಹಜತೆಗಳು ಅಥವಾ ಆನುವಂಶಿಕ ಅಸ್ವಸ್ಥತೆಗಳಂತಹ ಆರೋಗ್ಯ ಪರಿಸ್ಥಿತಿಗಳು IVF ಯಶಸ್ಸಿನ ದರಗಳ ಮೇಲೆ ಪರಿಣಾಮ ಬೀರಬಹುದು, ಇದಕ್ಕೆ ವಿಶೇಷ ಚಿಕಿತ್ಸಾ ವಿಧಾನಗಳ ಅಗತ್ಯವಿರಲಿದೆ.

ಲೇಖಕರು: ಹಿರಿಯ ಸಲಹೆಗಾರರು- ಫಲವತ್ತತೆ ಮತ್ತು ಐವಿಎಫ್, ಅಪೋಲೋ ಫರ್ಟಿಲಿಟಿ, ಬ್ರೂಕ್ಫೀಲ್ಡ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.