ಮಳೆಗಾಲ ಮುಗಿದಿದೆ. ಚಳಿಗಾಲ ಕಾಲಿಟ್ಟೇಬಿಟ್ಟಿದೆ. ಇವುಗಳ ನಡುವೆ ಉರಿಬಿಸಿಲು ಬೇರೆ. ಇಂಥ ವಾತಾವರಣ ಮೊದಲು ಪರಿಣಾಮ ಬೀರುವುದು ತ್ವಚೆಗೆ. ಈ ಸಮಯದಲ್ಲಿ ನಾವು ಮುಂಜಾಗ್ರತೆ ವಹಿಸಬೇಕಾದದ್ದು ಅಗತ್ಯ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಲೋಷನ್ಗಳ ಮೊರೆ ಹೋಗದೆ ಮನೆಯಲ್ಲಿ, ಹಿತ್ತಲಿನಲ್ಲಿ ಸಿಗುವ ಪದಾರ್ಥಗಳಿಂದಲೇ ನಿಮ್ಮ ತ್ವಚೆಯನ್ನು ಪೋಷಿಸುವುದರ ಜೊತೆಗೆ ಅಂದವನ್ನೂ ಹೆಚ್ಚಿಸಿಕೊಳ್ಳಬೇಕೇ?

ಹಾಗಿದ್ದರೆ ನಿಮಗಾಗಿ ಇಲ್ಲಿವೆ ಕೆಲವು ಸಲಹೆ:
* ಚರ್ಮದ ಸಮಸ್ಯೆಗಳಿಗೆ ಟೊಮೆಟೊ ರಾಮಬಾಣ. ಇದನ್ನು ನುಣ್ಣಗೆ ಮಿಕ್ಸಿಯಲ್ಲಿ ಅರೆದು, ರಸವನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಾಲಿಷ್ ಮಾಡಿ. ಅದು ಸ್ವಲ್ಪ ಒಣಗುತ್ತಿದ್ದಂತೆ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಇದು ನಿಮ್ಮ ತ್ವಚೆಯನ್ನು ಚಳಿಗಾಲದಿಂದ ರಕ್ಷಿಸುವುದು ಮಾತ್ರವಲ್ಲದೆ, ಮುಖದ ಮೇಲಿರುವ ಕಪ್ಪು ಕಲೆಗಳು ಮಾಯವಾಗಿ ಚರ್ಮ ನುಣುಪಾಗಿ ಕಾಂತಿಯುತ ಆಗುವಂತೆ ಮಾಡುತ್ತದೆ.

ಟೊಮೆಟೊವನ್ನು ಮುಖಕ್ಕೆ ಹಚ್ಚಿಕೊಳ್ಳಲು ಇಷ್ಟಪಡದವರು ಅದರ ರಸವನ್ನು ಸೇವಿಸುವುದರಿಂದಲೂ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಬಹುದು. ಇದರಿಂದ ರಕ್ತ ಶುದ್ಧಿಯಾಗಿ ಚರ್ಮ ವ್ಯಾಧಿಗಳು ಗುಣವಾಗುತ್ತವೆ.

* ಚರ್ಮದ ಮೇಲೆ ಅಲರ್ಜಿಯಾಗಿ ಗಾಯ ಆಗಿದೆಯೇ? ಹಾಗಿದ್ದರೆ ನಿಂಬೆರಸಕ್ಕೆ ಗಸೆಗಸೆ ಮಿಶ್ರಣ ಮಾಡಿ ಹಚ್ಚಿ. ಗಸೆಗಸೆಯನ್ನು ಅರೆದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ಅಲರ್ಜಿಯಿಂದ ಉಂಟಾದ ಗಾಯಕ್ಕೆ ಹಚ್ಚಿದರೆ ಬೇಗನೇ ಗುಣ ಆಗುತ್ತದೆ. ನಿಂಬೆ ರಸವನ್ನು ತೆಂಗಿನ ಎಣ್ಣೆಯಲ್ಲಿ ಸೇರಿಸಿ ಮಾಲಿಶ್ ಮಾಡುವುದರಿಂದ ಚಳಿಗಾಲದಲ್ಲಿನ ಚರ್ಮದ ತುರಿಕೆ ಕಡಿಮೆ ಆಗುತ್ತದೆ.

* ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ಅದನ್ನು ನೀರಿನಲ್ಲಿ ಕಲಸಿ ಮೊಡವೆಗಳಿಗೆ ಹಚ್ಚಿದರೆ ಮೊಡವೆಗಳು ಕಡಿಮೆ ಆಗುತ್ತವೆ.

* ಕಿತ್ತಳೆ ಹಣ್ಣಿನ ಒಣಸಿಪ್ಪೆಯನ್ನು ಚೂರ್ಣ ಮಾಡಿ, ಬೇಕಾದಾಗ ಎಣ್ಣೆಯಲ್ಲಿ ಕಲಸಿ ದಿನವೂ ಹಚ್ಚುವುದರಿಂದ ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ. ಇದರ ಹಸಿ ಸಿಪ್ಪೆಯಿಂದ ಮುಖವನ್ನು ಚೆನ್ನಾಗಿ ಉಜ್ಜಿಕೊಂಡು ತೊಳೆಯುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗಿ ಕಾಂತಿಯುತವಾಗುತ್ತದೆ.

* ತ್ವಚೆಯ ಮೇಲೆ ಗಾಯವಾಗಿ ಅದು ಕಜ್ಜಿಗೆ ತಿರುಗಿದ್ದರೆ ಹಾಗೂ ತುರಿಕೆ ಆರಂಭ ಆಗಿದ್ದರೆ ಅನಾನಸ್ ಹಣ್ಣಿನ ರಸವನ್ನು ಹಚ್ಚಿ ತಿಕ್ಕಿದರೆ ವಾಸಿಯಾಗುತ್ತದೆ.

* ಕರಬೂಜ ಹಣ್ಣನ್ನು ಕ್ರಮವಾಗಿ ಸೇವಿಸುತ್ತಾ ಬಂದರೆ ಚರ್ಮರೋಗದಿಂದ ಮುಕ್ತಿ ಪಡೆಯಬಹುದು. ಇದರ ರಸವನ್ನು ಪ್ರತಿದಿನ 2 ಲೋಟಗಳಷ್ಟು ಕುಡಿದರೆ ಕಜ್ಜಿ, ಗಜಕರ್ಣದಂತಹ ಚರ್ಮ ರೋಗಗಳು ಗುಣವಾಗುತ್ತವೆ. ಈ ಹಣ್ಣಿನ ಬೀಜದ ಚೂರ್ಣ ಅಥವಾ ಕಷಾಯ ಕೂಡ ಚರ್ಮರೋಗಕ್ಕೆ ರಾಮಬಾಣ.

* ನಿಂಬೆ ಹಣ್ಣಂತೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಇದರ ರಸವನ್ನು ಹಿಂಡಿ ತೆಗೆಯಿರಿ. ಅದಕ್ಕೆ ಗುಲಾಬಿ ನೀರು (ರೋಸ್ ವಾಟರ್), ಜೇನುತುಪ್ಪ, ಗ್ಲಿಸರಿನ್ ಸಮ ಪ್ರಮಾಣದಲ್ಲಿ ಬೆರೆಸಿಕೊಳ್ಳಿ. ಪ್ರತಿದಿನ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದು ನೋಡಿ ನಿಮ್ಮ ಚರ್ಮದ ಕಾಂತಿ ಹೇಗೆ ಹೆಚ್ಚುತ್ತದೆ ಎಂದು. ಇದರಿಂದ ಮುಖದ ಮೇಲಿನ ಕಪ್ಪು ಚುಕ್ಕೆಗಳು, ಮೊಡವೆಗಳು, ಗೆರೆಗಳು, ಸುಕ್ಕುಗಳು ಕೂಡ ಮಾಯವಾಗುತ್ತವೆ.

* ಬಾಳೆಹಣ್ಣಿನ ಸಿಪ್ಪೆಯನ್ನು ನಿಂಬೆ ಹಣ್ಣಿನ ರಸದಲ್ಲಿ ಅರೆದು ಹಚ್ಚುವುದರಿಂದ ಕಜ್ಜಿ, ತುರಿಕೆ ಗುಣವಾಗುತ್ತದೆ.

* ಚಳಿಗಾಲದಲ್ಲಿ ಹಲವರಿಗೆ ಸಿಡುಬಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಲಕ್ಷಣ ಕಾಣಿಸಿಕೊಳ್ಳಲು ಆರಂಭವಾದ ಕೂಡಲೇ ನಿಂಬೆ ರಸಕ್ಕೆ ಬೆಲ್ಲ ಸೇರಿಸಿ ಸೇವಿಸಿ. ಇದರಿಂದ ಸಮಸ್ಯೆ ಕಡಿಮೆಯಾಗುವುದಲ್ಲದೆ, ಜ್ವರದ ತಾಪವೂ ಇಳಿಯುತ್ತದೆ.

* ಮೋಸಂಬಿ ರಸವನ್ನು ಮುಖಕ್ಕೆ ತಿಕ್ಕಿ ೩೦ ನಿಮಿಷದ ಬಳಿಕ ತೊಳೆದರೆ ಚರ್ಮ ಕಾಂತಿಯುತವಾಗುತ್ತದೆ.

* ದಿನನಿತ್ಯ 250 ಗ್ರಾಂ.ನಷ್ಟು ಸೀಬೆ ಹಣ್ಣನ್ನು ತಿನ್ನುವುದರಿಂದ ಹುಣ್ಣು, ಕಜ್ಜಿ, ತುರಿಕೆ, ಹೊಟ್ಟೆಯ ಉಷ್ಣ ಕಡಿಮೆ ಆಗುತ್ತದೆ. ರಕ್ತ ಶುದ್ಧವಾಗುತ್ತದೆ.

* ಸೇಬು ಸ್ವಲ್ಪ ದುಬಾರಿಯೇ. ಆದರೆ ಇದು ಚರ್ಮದ ಆರೋಗ್ಯ ಕಾಪಾಡಲು ಎತ್ತಿದ ಕೈ. ಇದರ ತಿರುಳನ್ನು ಮುಖಕ್ಕೆ ಲೇಪಿಸುತ್ತಾ ಬನ್ನಿ. ಇದು ಮೊಡವೆ ಹಾಗೂ ಕಲೆಯನ್ನು ಮಾಯ ಮಾಡುತ್ತದೆ. ಹುಳಿ ಸೇಬಿನ ರಸವನ್ನು ಚರ್ಮದ ಮೇಲೆ ಹಚ್ಚಿದರೆ ಬೊಕ್ಕೆಗಳು ಒಣಗಿ ಬೀಳುತ್ತವೆ.

* ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಅವುಗಳನ್ನು ಕಿವುಚಿ ರಸ ತೆಗೆದು ಅದನ್ನು 40 ದಿನಗಳವರೆಗೆ ಸೇವಿಸಿದರೆ ದೀರ್ಘಕಾಲದಿಂದ ಇದ್ದ ಚರ್ಮರೋಗ ನಿಯಂತ್ರಣಕ್ಕೆ ಬರುತ್ತದೆ.

* ತುಳಸಿ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಅರೆದು ಲೇಪಿಸಬೇಕು, ತುಳಸಿ ಕಷಾಯ ಕುಡಿಯಬೇಕು. ಇದರಿಂದ ತ್ವಚೆಯ ಸಮಸ್ಯೆ ಹೋಗಲಾಡಿಸಬಹುದು.

* ತೊನ್ನು ಸೇರಿದಂತೆ ಚರ್ಮ ರೋಗ ಇರುವವರು ಮೆಂತ್ಯದ ಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಸಂದರ್ಭದಲ್ಲಿ ಟೊಮೆಟೊ, ಬದನೆಕಾಯಿ ತ್ಯಜಿಸಿ, ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.

* ಲೋಳೆಸರದ ಒಂದು ಕಡ್ಡಿಯನ್ನು ಉಪ್ಪು ಮತ್ತು ಅರಿಶಿನದೊಂದಿಗೆ ಕುದಿಸಿ. ಲೋಳೆಯನ್ನು ಚೆನ್ನಾಗಿ ತಿಕ್ಕಿ 15 ನಿಮಿಷ ಬಿಟ್ಟು ಸ್ನಾನ ಮಾಡಿ. ಇದರಿಂದ ಚರ್ಮ ವ್ಯಾಧಿ ಹತೋಟಿಗೆ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.