ಭಾನುವಾರ, 20 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಬಿಳಿಯ ಬಣ್ಣವು ಶುಭ ತರಲಿದೆ
Published 20 ಅಕ್ಟೋಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಸೂಯೆ ಪಡುವ ಸಹೋದ್ಯೋಗಿಗಳ ನಡುವೆ ಕೆಲಸ ನಿರ್ವಹಿಸಬೇಕಾಗುತ್ತದೆ. ಕೆಲಸವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಬಿಳಿಯ ಬಣ್ಣವು ಶುಭ ತರಲಿದೆ.
ವೃಷಭ
ಒಳ್ಳೆಯ ಮಿತ್ರರಿಂದ ಕಂಪನಿಯ ಮುಖ್ಯ ವ್ಯಕ್ತಿಯ ಪರಿಚಯ ಹಾಗೂ ಅಭಿವೃದ್ಧಿಯ ಮಾಹಿತಿ ನಿಮಗೆ ಈ ದಿನ ದೊರೆಯುತ್ತದೆ. ಕಠಿಣ ಪರಿಶ್ರಮದ ಮೂಲಕ ಸಹೋದ್ಯೋಗಿಗಳ ಮನವನ್ನು ಗೆಲ್ಲಲು ಪ್ರಯತ್ನಿಸಿ.
ಮಿಥುನ
ವ್ಯವಹಾರದಲ್ಲಿ ನಿಮ್ಮೊಡನೆ ಕೈ ಜೋಡಿಸಿದ್ದ ದಾಯಾದಿ ವರ್ಗದವರಿಂದ ಅಸೂಯೆಯ ಮಾತುಗಳಲ್ಲದೆ ತೊಂದರೆಗಳೂ ಆಗಬಹುದು. ಮಾತಾ-ಪಿತೃಗಳಿಂದ ಪ್ರೋತ್ಸಾಹ ದೊರೆಯುತ್ತದೆ.
ಕರ್ಕಾಟಕ
ಕೃಷಿಕರು, ವ್ಯಾಪಾರಸ್ಥರು, ದಲ್ಲಾಳಿಗಳಿಂದ ಮೋಸ ಹೋಗುವ ಸ್ಥಿತಿ ಬರುವುದು . ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಾಧಿಸಬಹುದು ಜಾಗ್ರತರಾಗಿರಿ. ಗೃಹದಲ್ಲಿ ಶಾಂತಿಯನ್ನು ಕಾಪಾಡಿ.
ಸಿಂಹ
ಸಾಮಾಜಿಕ ಕಳಕಳಿಗಾಗಿ ಸಂಘ ಸಂಸ್ಥೆ ಸಮಾಜದ ಆಸ್ತಿ ಎಂದು ಪರಿಗಣಿಸಲಿದೆ. ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಸಂತಸಕರ ಬೆಳವಣಿಗೆಗಳು ಕಂಡುಬರಲಿವೆ. ಕೀರ್ತಿ ಅರಸಿ ಬರುವುದು.
ಕನ್ಯಾ
ಗೆಳೆಯನೊಬ್ಬನ ಭೇಟಿಯಿಂದ ಬದುಕು ಮಹತ್ವದ ತಿರುವು ಪಡೆದುಕೊಳ್ಳಲಿದೆ. ಪ್ರೇಮಿಗಳ ಮನೋಕಾಮನೆಗಳು ಪೂರ್ಣಗೊಂಡಾವು. ವೈದ್ಯ ವೃತ್ತಿಯವರಿಗೆ ಹೊಸ ಅನುಭವದ ಜತೆಯಲ್ಲಿ ಲಾಭದ ದಿನ ಆಗಲಿದೆ.
ತುಲಾ
ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಆತಂಕವಿಲ್ಲದೆ ಕೆಲಸ ಕಾರ್ಯಗಳು ಸಾಗುವುದು. ಆಫೀಸಿನ ಕೆಲಸಗಳೂ ಬೇಗನೇ ಮುಗಿಯುವುದು. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದೆ.
ವೃಶ್ಚಿಕ
ಸ್ನೇಹಿತರೊಂದಿಗೆ ಆಧ್ಯಾತ್ಮಿಕ ಮಾತುಕತೆಗಳಲ್ಲಿ ತೊಡಗುವಿರಿ. ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವ ಬಗ್ಗೆ ಯೋಚಿಸಿ.
ಧನು
ವಿದೇಶಿ ಸಂಸ್ಥೆಯೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಈ ದಿನ ಸೂಕ್ತ. ಹಲವು ದಿನಗಳ ಬಳಿಕ ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುವುದು. ಕಳ್ಳತನದ ಅಪವಾದ ಬರುವ ಸಾಧ್ಯತೆ ಇದೆ. ಜಾಗ್ರತರಾಗಿರಿ.
ಮಕರ
ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನಸ್ಥಿತಿಯನ್ನು ತಂದುಕೊಳ್ಳಿರಿ. ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಅದೇ ರೀತಿಯಾಗಿ ಅವಘಡ ಸಂಭವಿಸುವ ಸಾಧ್ಯತೆ ಇದೆ.
ಕುಂಭ
ಕೇವಲ ಕ್ಷಣಿಕ ಸುಖಗಳಿಗೆ ಗಮನ ನೀಡದೆ ಗಂಭೀರವಾಗಿ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಮಹಿಳೆಯರಿಗೆ ಸ್ವತಂತ್ರ ಉದ್ಯಮದ ಹಾದಿ ಸುಗಮವಾಗುವುದು. ಕೆಲಸಗಾರರಲ್ಲಿ ಗಮನಹರಿಸಿ.
ಮೀನ
ಆರೋಗ್ಯ ಸಧೃಢವಾಗಿ ಇರುವುದು. ವ್ಯವಹಾರಿಕವಾಗಿ ಮಾತನಾಡುವಾಗ ಯಾವುದೇ ದಾಕ್ಷಿಣ್ಯಗಳಿಗೆ ಒಳಗಾಗುವುದು ಸರಿಯಲ್ಲ. ವೃತ್ತಿಯಲ್ಲಿ ದಾಖಲೆ ತೋರಿಸಿ ಉತ್ತರಿಸುವ ನಿಮಗೆ ಜಯ ಪ್ರಾಪ್ತಿಯಾಗಲಿದೆ.
ADVERTISEMENT
ADVERTISEMENT