ಭಾನುವಾರ, 20 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
13/10/2024 - 19/10/2024
ವಾರ ಭವಿಷ್ಯ: ಈ ರಾಶಿಯವರಿಗೆ ಮಹಿಳೆಯರಿಂದ ನೆರವು ಸಿಗುವ ಅವಕಾಶಗಳಿವೆ
Published 19 ಅಕ್ಟೋಬರ್ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನಹರಿಸುವಿರಿ. ಆದಾಯವು ಬಹಳ ಉತ್ತೇಜನಕಾರಿಯಾಗಿರುತ್ತದೆ. ಬಂಧುಗಳ ಸಹಕಾರವೂ ಸಿಗುವ ಸಾಧ್ಯತೆ ಇದೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಂದ ಹೆಚ್ಚು ಲಾಭವಿರುತ್ತದೆ. ಸಂಸಾರದಲ್ಲಿ ಸಂತೋಷವಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಸಿಗಲಿದೆ. ಅದರಲ್ಲೂ ಧಾರ್ಮಿಕ ವಿದ್ಯೆಯನ್ನು ಕಲಿಯುತ್ತಿರುವವರಿಗೆ ಬಹಳಷ್ಟು ಯಶಸ್ಸು ಸಿಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ. ಸಂಗಾತಿ ಕಡೆಯ ಹಿರಿಯರ ಸಹಾಯದಿಂದ ವ್ಯಾಪಾರ ವ್ಯವಹಾರಗಳನ್ನು ಮಾಡಬಹುದು. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ.
ವೃಷಭ
ಧೃಡ ನಿರ್ಧಾರಗಳಿಂದ ಮುಂದಡಿ ಇಡುವಿರಿ. ನಿಮ್ಮ ನಿರ್ಧಾರಗಳು ನಿಮಗೆ ಲಾಭವನ್ನು ತರುತ್ತವೆ. ಆದಾಯವು ಕಡಿಮೆ ಇದ್ದರೂ ಹೊಸ ಮೂಲಗಳಿಂದ ಆದಾಯ ತರುವ ಕಲೆ ಸಿದ್ಧಿಸುತ್ತದೆ. ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಬಂಧುಗಳಿಂದ ಸಹಕಾರ ದೊರೆಯುತ್ತದೆ. ಭೂಮಿ ವ್ಯವಹಾರಗಳಲ್ಲಿ ದಾಖಲೆಗಳ ಕೊರತೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಈಗ ಸಾಮಾನ್ಯ ಯಶಸ್ಸು ಇರಲಿದೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯಿಂದ ಧನ ಸಹಕಾರಗಳನ್ನು ನಿರೀಕ್ಷೆ ಮಾಡಬಹುದು. ಉದ್ಯೋಗ ಸ್ಥಳದಲ್ಲಿ ನಾಯಕತ್ವ ಬೆಳೆಸಿಕೊಳ್ಳಬಹುದು.
ಮಿಥುನ
ಆಕ್ರೋಶ ನಿಮ್ಮಲ್ಲಿ ಮನೆ ಮಾಡಿರುತ್ತದೆ. ಮಾತಿನಲ್ಲಿ ನಯವಿದ್ದರೂ ಅದರ ಹಿಂದಿನ ಕೊಂಕು ಎದ್ದು ಕಾಣುತ್ತದೆ. ಆದಾಯದಷ್ಟೇ ಖರ್ಚೂ ಇರುತ್ತದೆ. ಆದಾಯವು ಕಡಿಮೆ ಮಟ್ಟದಲ್ಲಿ ಇರುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಹಿರಿಯರು ಒಲ್ಲದ ಮನಸ್ಸಿನಿಂದ ಸಹಕಾರ ನೀಡುವವರು. ಸರ್ಕಾರದ ಜೊತೆಗೆ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚು ಅಭಿವೃದ್ಧಿಯನ್ನು ಕಾಣಬಹುದು. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳನ್ನು ಕಾಣಬಹುದು. ನಿಮ್ಮ ಸಂಗಾತಿಯ ದುಡಿಮೆಯು ಅವರ ಖರ್ಚಿಗೆ ಸಾಕಾಗುವುದು. ಹಿರಿಯರಿಂದ ಕೃಷಿ ಭೂಮಿ ದೊರೆಯುವ ಸಾಧ್ಯತೆ ಇದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ.
ಕರ್ಕಾಟಕ
ಮನಸ್ಸಿನಲ್ಲಿ ಧೈರ್ಯ ಸ್ಥೈರ್ಯಗಳು ಒಟ್ಟಾಗಿರುತ್ತವೆ. ಏನೇ ಬಂದರೂ ಎದುರಿಸುವ ಛಲ ನಿಮ್ಮಲ್ಲಿ ತುಂಬಿರುತ್ತದೆ. ಆದಾಯವು ನಿಮ್ಮ ಖರ್ಚನ್ನು ತೂಗಿಸುತ್ತದೆ. ಹಿರಿಯರು ನಿಮ್ಮ ಒಳಿತಿನ ಕಾರ್ಯಗಳಿಗೆ ಮಾತ್ರ ಸಹಕಾರ ನೀಡುವರು. ಸರ್ಕಾರಿ ಸಂಸ್ಥೆಗಳ ಜೊತೆಗಿನ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಪಡೆಯುವ ಕಾಲವಿದು. ಶೀತ ಬಾಧೆ ಅಥವಾ ಹೊಟ್ಟೆಯುಬ್ಬರಗಳು ಸ್ವಲ್ಪ ಕಾಡಬಹುದು. ಸಂಗಾತಿಯು ನಿಮಗೆ ಸರಿಯಾಗಿ ಸ್ಪಂದಿಸದಿರಬಹುದು. ವಿದೇಶಕ್ಕೆ ಹೋಗಬೇಕೆಂದು ಆಶಿಸುವವರ ಆಸೆ ಈಗ ಈಡೇರುತ್ತದೆ. ಸಾಂಪ್ರದಾಯಕ ಕೃಷಿಗೆ ಹೆಚ್ಚಿನ ಬೆಲೆ ಬರುತ್ತದೆ ಹಿರಿಯರಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ.
ಸಿಂಹ
ಆತ್ಮಭಿಮಾನ ಸ್ವಲ್ಪ ಜಾಸ್ತಿ ಇರುತ್ತದೆ. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ನಿಮ್ಮ ಬುದ್ಧಿ ಚಾತುರ್ಯದಿಂದ ಹಿರಿಯರ ಸಹಾಯ ಪಡೆಯುವಿರಿ. ಭೂಮಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಲಾಭವಿರುತ್ತದೆ. ಮಕ್ಕಳ ವಿಷಯದಲ್ಲಿ ಸಂತೋಷಪಡುವಂತಹ ಸುದ್ದಿಗಳು ಬರುತ್ತವೆ. ಕೆಲವರಿಗೆ ಹಳೆಯ ನೋವುಗಳು ಈಗ ಭಾದಿಸಬಹುದು. ಸಂಗಾತಿಯು ಸಂಸಾರಕ್ಕೆ ಬಹಳ ಸಹಾಯ ಮಾಡುವರು. ಅವರಿಂದ ನಿಮಗೂ ಸಾಕಷ್ಟು ಸಹಾಯಗಳು ದೊರೆಯುತ್ತವೆ. ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆಯನ್ನು ಮಾಡಲು ಅವಕಾಶ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಎಚ್ಚರದಿಂದಿರಿ. ವಿದೇಶಿ ವ್ಯವಹಾರಗಳಲ್ಲಿ ಅನಿರೀಕ್ಷಿತ ತಿರುವು ಬರಬಹುದು.
ಕನ್ಯಾ
ಕೆಲವರಿಗೆ ಧರ್ಮ ಶ್ರದ್ಧೆ ಹೆಚ್ಚಾಗುತ್ತದೆ. ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಹಿರಿಯರ ಜೊತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಮಹಿಳೆಯರ ಸಹಕಾರಗಳು ನಿಮಗೆ ದೊರೆಯುತ್ತವೆ. ಹಿರಿಯರ ಆಸ್ತಿಯಲ್ಲಿ ಪಾಲು ದೊರಕುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ. ಸಾಲ ಕೊಟ್ಟವರ ಕಾಟ ಕೆಲವರಿಗೆ ಆಗಬಹುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವಿದೇಶಿ ವಸ್ತುಗಳನ್ನು ತರಿಸಿ ಮಾರಾಟ ಮಾಡುವವರ ಲಾಭ ಹೆಚ್ಚುತ್ತದೆ. ವೃತ್ತಿಯಲ್ಲಿ ಕಿರುಕುಳಗಳಿದ್ದರೂ ತೊಂದರೆ ಇಲ್ಲ. ವಿದೇಶಿ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ.
ತುಲಾ
ಸಾಕಷ್ಟು ವ್ಯವಹಾರಿಕವಾಗಿಯೇ ಯೋಚನೆ ಮಾಡುವಿರಿ. ಆದಾಯವು ಸ್ವಲ್ಪಮಟ್ಟಿನ ಚೇತರಿಕೆ ಕಾಣಲಿದೆ. ಹಿರಿಯರಿಂದ ನಿಮ್ಮ ಕಾರ್ಯ ಶೈಲಿಯ ಬಗ್ಗೆ ವಿರೋಧ ವ್ಯಕ್ತವಾಗಲಿದೆ. ಕೃಷಿಭೂಮಿ ಕೊಳ್ಳಲು ಉತ್ಸುಕತೆಯನ್ನು ತೋರುವಿರಿ. ಹಳೆ ತಲೆಮಾರಿನ ಧಾನ್ಯಗಳ ಬೀಜೋತ್ಪಾದನೆ ಮಾಡುವವರಿಗೆ ಬೇಡಿಕೆ ಹೆಚ್ಚಲಿದೆ. ಹಳೇ ಕೀಲು ನೋವುಗಳು ಈಗ ಮರುಕಳಿಸಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ಸಂಗಾತಿಯಿಂದ ಸೂಕ್ತ ಸಹಕಾರಗಳು ದೊರೆಯುತ್ತವೆ. ಪಶು ಸಂಗೋಪನೆ ಮಾಡುವವರಿಗೆ ಹೆಚ್ಚು ಅನುಕೂಲವಿರುತ್ತದೆ. ಧಾರ್ಮಿಕ ವೃತ್ತಿಯನ್ನು ಮಾಡುತ್ತಿರುವವರಿಗೆ ಆದಾಯ ಹೆಚ್ಚುತ್ತದೆ.
ವೃಶ್ಚಿಕ
ಬಹಳ ಆಕರ್ಷಕ ವ್ಯಕ್ತಿತ್ವವನ್ನು ರೂಡಿಸಿಕೊಳ್ಳುವಿರಿ. ಆದಾಯವು ಚೇತರಿಕೆ ಹಾದಿಯಲ್ಲಿರುತ್ತದೆ. ನಿಮ್ಮ ಬಂಧುಗಳಲ್ಲಿನ ಶತ್ರುಗಳನ್ನು ಹುಡುಕಿ ತೆಗೆಯುವಿರಿ. ಕೃಷಿಯಲ್ಲಿ ನಿಮಗೆ ಅಪಾರವಾದ ನಂಬಿಕೆ ಇರುತ್ತದೆ. ಹೊರದೇಶದಲ್ಲಿ ಓದಬೇಕೆನ್ನುವವರಿಗೆ ಅವಕಾಶಗಳು ದೊರೆಯುತ್ತವೆ. ಹಳೆಯ ಗಾಯಗಳು ಕೆಲವರನ್ನು ಕಾಡಬಹುದು. ಸಂಗಾತಿ ಕಡೆಯಿಂದ ಬಹಳಷ್ಟು ಸಹಕಾರಗಳ ಜೊತೆ ಧನಸಹಾಯ ದೊರೆಯುತ್ತದೆ. ಕೆಲವು ವಿಷಯಗಳಿಗೆ ತಾಯಿಯ ವಿರೋಧವನ್ನು ಕಟ್ಟಿಕೊಳ್ಳಬೇಕಾಗಬಹುದು. ಉದ್ಯೋಗ ಸ್ಥಳದಲ್ಲಿ ಉದ್ಯೋಗಿಗಳಿಂದ ಸಹಾಯಗಳು ದೊರೆಯುತ್ತವೆ. ಹಿರಿಯರ ವ್ಯಾಪಾರವ್ಯವಹಾರಗಳು ನಿಮಗೆ ಸಿಗುತ್ತವೆ.
ಧನು
ಏನೋ ಒಂದು ಸಾಧಿಸಿದ ಭಾವನೆ ನಿಮ್ಮಲ್ಲಿ ಇರುತ್ತದೆ. ಆದಾಯವು ಕಡಿಮೆ ಇದ್ದರೂ ಬೇರೆ ಮೂಲಗಳಿಂದ ಸರಿದೂಗಿಸುವಿರಿ. ನಿಮ್ಮ ಬಂಧುಗಳಲ್ಲಿ ಇರುವ ಶತ್ರುಗಳನ್ನು ಹುಡುಕಿ ಅವರಿಗೆ ಎಚ್ಚರಿಕೆ ಕೊಡುವಿರಿ. ವಿದೇಶದಲ್ಲಿ ಟೂರಿಸ್ಟ್ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಆದಾಯ ಹೆಚ್ಚುತ್ತದೆ. ಮಕ್ಕಳ ಅಭಿವೃದ್ಧಿಯಲ್ಲಿ ಯಶಸ್ಸನ್ನು ಕಾಣುವಿರಿ. ಹಣಕಾಸಿನ ಸ್ಥಿತಿಗತಿಗಳನ್ನು ಅರಿತು ಹಿರಿಯರು ಸಹಾಯ ಮಾಡುವರು. ಸಂಗಾತಿಯ ಸಾಹಿತ್ಯ ಕೃಷಿಗೆ ನೀವು ಸಹಕಾರ ನೀಡುವಿರಿ. ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವವರಿಗೆ ಲಾಭವಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಏರುಪೇರಾಗಬಹುದು. ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ.
ಮಕರ
ಏನೇ ಆದರೂ ಮುನ್ನುಗ್ಗುವ ಛಲ ನಿಮ್ಮಲ್ಲಿ ಇರುತ್ತದೆ. ಆದಾಯ ಕಡಿಮೆ ಇದ್ದರೂ ಅದರಲ್ಲೇ ನಿರ್ವಹಣೆ ಮಾಡುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಬಂಧುಗಳಿಂದ ಅಡ್ಡಿ ಬಂದರು ಲೆಕ್ಕಿಸದೆ ಮುನ್ನುಗ್ಗಿ ಕೆಲಸ ಕಾರ್ಯ ಸಾಧಿಸುವಿರಿ. ವ್ಯವಹಾರ ಕ್ಷೇತ್ರದವರ ಆದಾಯ ಮಂದಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿದ ಫಲಿತಾಂಶ ದೊರಕುವ ಸಾಧ್ಯತೆಗಳಿವೆ. ಬಂಧುಗಳ ಜೊತೆ ಮಾಡಿದ ವ್ಯವಹಾರಗಳಲ್ಲಿ ನಷ್ಟವಿರುತ್ತದೆ. ಈಗ ಸಂಗಾತಿಯಿಂದ ಗೌರವದ ಜೊತೆಗೆ ಧನ ಸಹಕಾರ ಸಿಗುತ್ತದೆ. ಕೃಷಿಯ ಮೇಲೆ ಹೂಡಿದ ಹಣ ಲಾಭವಾಗಿ ಬರುತ್ತದೆ. ಧರ್ಮ ಪ್ರಚಾರಕರಿಗೆ ಅಡ್ಡಿ ಎದುರಾಗಬಹುದು. ವೃತ್ತಿಯಲ್ಲಿ ಹಿರಿಯರ ಬೆಂಬಲವಿರುತ್ತದೆ.
ಕುಂಭ
ಹಿರಿಯರ ಸಮಾಧಾನ ಅವರಿಗೆ ಗೌರವವನ್ನು ತಂದು ಕೊಡುತ್ತದೆ. ತಂತ್ರಜ್ಞಾನ ವಿಷಯದ ಉಪಾಧ್ಯಾಯರಿಗೆ ಗೌರವ ದೊರೆಯಲಿದೆ. ಹಿರಿಯರ ಕಾರ್ಯ ನೋಡಿ ಬಂಧುಗಳು ಅವರನ್ನು ಅಭಿನಂದಿಸುವರು. ರಿಯಲ್ ಎಸ್ಟೇಟ್ ಉದ್ಯೋಗ ಮಾಡುವವರಿಗೆ ಲಾಭವಿರುತ್ತದೆ. ದೊಡ್ಡಮಟ್ಟದಲ್ಲಿ ಹೈನುಗಾರಿಕೆ ಮಾಡುತ್ತಿರುವವರಿಗೆ ಆದಾಯ ಹೆಚ್ಚಾಗಲಿದೆ. ಸಂಸಾರದಲ್ಲಿ ಸಂತೋಷ ಮನೆ ಮಾಡಿರುತ್ತದೆ. ಕಟ್ಟಡಗಳನ್ನು ನಿರ್ಮಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಒರಟು ಮಾತಿನಿಂದ ಯುವಕರು ಆದಾಯದ ಮೂಲವನ್ನು ಕಳೆದುಕೊಳ್ಳಬಹುದು. ಶೀತ ಸಂಬಂಧಿ ಕಾಯಿಲೆ ಇರುವವರು ಸ್ವಲ್ಪ ಎಚ್ಚರವಹಿಸಿರಿ. ಸಂಗಾತಿ ಕಡೆಯವರ ವ್ಯವಹಾರಗಳಿಂದ ನಿಮಗೆ ಆದಾಯ ಹೆಚ್ಚುತ್ತದೆ.
ಮೀನ
ವಿದೇಶಿ ಭಾಷಾ ಬೋಧಕರಿಗೆ ಹೆಚ್ಚಲಿದೆ ಅವಕಾಶ. ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ. ಬಂಧುಗಳನ್ನು ಓಲೈಸಿಕೊಂಡು ಅವರಿಂದ ಸಹಾಯ ಪಡೆಯುವಿರಿ. ಕೃಷಿಯಿಂದ ಆದಾಯ ಇರುತ್ತದೆ. ಕೃಷಿಭೂಮಿಯನ್ನು ಮಾರಾಟಮಾಡುವವರಿಗೆ ಅಧಿಕ ಲಾಭ ದೊರೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅವರ ಶ್ರಮದಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ನೇತ್ರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಧರ್ಮಬೋಧನೆ ನಿಮಗೆ ಹಿಡಿಸದಿರಬಹುದು. ವೃತ್ತಿಯಲ್ಲಿ ಹಿರಿಯರ ಮಾತು ನಡೆಯುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭವಿರುತ್ತದೆ.
ADVERTISEMENT
ADVERTISEMENT