ದಿನ ಭವಿಷ್ಯ: ವಿವಾಹ ಪ್ರಸ್ತಾವಗಳು ಬಲಗೊಂಡು ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ
Published 5 ನವೆಂಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿರುವವರಿಗೆ ಅವಕಾಶಗಳ ಜತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಯೋಚನೆಗಳು ಬರಲಿವೆ. ಅದಕ್ಕೆ ಆರ್ಥಿಕ ಸಹಾಯದ ಜತೆಯಲ್ಲಿ ಜನಬಲ ಸಿಗಲಿದೆ.
ವೃಷಭ
ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಪರಿಶ್ರಮದ ಅಗತ್ಯವಿದೆ. ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ. ಪಿತ್ರಾರ್ಜಿತ ಆಸ್ತಿಯು ನಿಮ್ಮ ಪಾಲಾಗಲಿದೆ.
ಮಿಥುನ
ಸ್ಪರ್ಧಾತ್ಮಕ ಮನೋಭಾವ ಹೊಸ ಸಾಹಸಕ್ಕೆ ಕೈ ಹಾಕಲು ಪ್ರೇರೇಪಿಸುವುದು. ವಿವಾಹ ಪ್ರಸ್ತಾವಗಳು ಬಲಗೊಂಡು ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಹಿಡಿದ ಕೆಲಸದಲ್ಲಿ ಯಶಸ್ಸು ಕಾಣುವಿರಿ.
ಕರ್ಕಾಟಕ
ಶೈಕ್ಷಣಿಕ ರಂಗದಲ್ಲಿನ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಸಂಪಾದಿಸಿಕೊಳ್ಳುವಿರಿ. ವೈಯಕ್ತಿಕ ಜೀವನದ ಬೆಳವಣಿಗೆ ಬಗ್ಗೆ ಗಮನಹರಿಸಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರಿಂದ ಕ್ಷೇಮ ಉಂಟಾಗುತ್ತದೆ.
ಸಿಂಹ
ದೈವಬಲ ಉಂಟಾಗಿದ್ದು, ಆರ್ಥಿಕ ಪರಿಸ್ಥಿತಿಯು ಸುಧಾರಣೆಯತ್ತ ಸಾಗಿರುವುದನ್ನು ಅನುಭವಪೂರ್ವಕವಾಗಿ ಕಾಣುವಿರಿ. ಬಾಹ್ಯಾಕಾಶ ಸಂಶೋಧನಾರ್ಥಿಗಳಿಗೆ ಸರ್ಕಾರದಿಂದ ಪ್ರಶಂಸೆ ದೊರೆಯುವುದು.
ಕನ್ಯಾ
ಸಂಕೋಚ ಸ್ವಭಾವವನ್ನು ಅನುಭವಿಸುವ ನಿಮಗೆ ಯಾರೊಂದಿ ಗಾದರೂ ಹೊಸದಾಗಿ ಪರಿಚಯ ಮಾಡಿಕೊಳ್ಳಲು ಸಮಯ ಹಿಡಿಯುವುದು. ಯಾವುದೇ ವಿಷಯವನ್ನಾದರೂ ಪತಿಯಲ್ಲಿ ಮುಕ್ತವಾಗಿ ಹೇಳಿ.
ತುಲಾ
ಸಿದ್ಧ ಉಡುಪುಗಳ ಮಾರಾಟಗಾರರಿಗೆ, ರಫ್ತು ವ್ಯಾಪಾರಗಳಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಜೀವನಚರಿತ್ರೆಯಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭವಾಗಲಿದೆ. ಖರ್ಚು ಕಡಿಮೆ ಮಾಡಿ.
ವೃಶ್ಚಿಕ
ಸಹೋದ್ಯೋಗಿಗಳಿಂದ ಅಥವಾ ಅಕ್ಕಪಕ್ಕದವರಿಂದ ಸಮಸ್ಯೆಗಳು ಹೆಚ್ಚುವುದಕ್ಕೆ ಮುಂಚಿತವಾಗಿ ಜಾಣ್ಮೆಯಿಂದ ಪರಿಹಾರ ಕಂಡುಕೊಳ್ಳುವುದು ಉತ್ತಮ. ಶ್ರೀಲಕ್ಷ್ಮಿ ಪೂಜಿಸಿದಲ್ಲಿ ಏಳಿಗೆ ಹೊಂದಲು ಸಾಧ್ಯವಾಗುವುದು.
ಧನು
ಕಾರ್ಮಿಕರು ಸಹನಶೀಲರಾಗಿ ಕೆಲಸದ ಬಗ್ಗೆ ಸರಿಯಾಗಿ ಗಮನ ವಹಿಸುವುದರಿಂದ ಯಶಸ್ಸು ಪಡೆಯಬಹುದು. ಮರ ಕೆತ್ತನೆಯ ಕೆಲಸಗಾರರಿಗೆ, ಕಟ್ಟಡ ಕಾರ್ಮಿಕರಿಗೆ ಅನುಕೂಲ ಇರಲಿದೆ.
ಮಕರ
ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಹೆಚ್ಚು ಆನಂದ ಸಿಗಬಹುದು. ಅನೇಕ ಮೂಲಗಳಿಂದ ಧನಾರ್ಜನೆ ಇದ್ದರೂ ಕೈಯಲ್ಲಿ ಹಣ ಇಲ್ಲದಂತೆ ಅಥವಾ ಕೊರತೆ ಆಗುವುದು.
ಕುಂಭ
ಕೈಗಾರಿಕೋದ್ಯಮಿಗಳು ಲಾಭದಾಯಕ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಬುದ್ಧಿವಂತಿಕೆಯನ್ನು ಉಪಯೋಗಿಸುವುದು ಉತ್ತಮ. ಅತಿ ಆಲಸ್ಯ, ನಿದ್ದೆಯಂಥ ಸಮಸ್ಯೆ ನಿಮ್ಮನ್ನು ಕಾಡಲಿದೆ.
ಮೀನ
ಲಾಭದ ನಿರೀಕ್ಷೆಯಿಲ್ಲದೆ ಮಾಡಿದ ಕೆಲಸದಲ್ಲೂ ಹೆಚ್ಚಿನ ಲಾಭವಾಗುವುದರಿಂದ ಸಂತೋಷ ಆಗುವುದು. ನೆಮ್ಮದಿಯ ಜತೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯುವ ಸಮಯವಾಗಿದೆ.