ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ಇಂದು ಅದೃಷ್ಟದಾಯಕವಾಗಿರುತ್ತದೆ
Published 8 ನವೆಂಬರ್ 2024, 23:45 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೈತಿಕವಾಗಿ ಬೆಂಬಲವಾಗಿರುವ ಸ್ನೇಹ ಸಂಬಂಧಕ್ಕೆ ಇನ್ನೂ ಹೆಚ್ಚಿನ ಪ್ರೇರಣೆ ಸಿಕ್ಕಿ ಮುಂದುವರಿಯಲಿ. ನಿಮ್ಮದಲ್ಲದ ವಸ್ತುವಿನ ಬಗ್ಗೆ ಯಾವುದೇ ರೀತಿಯ ವ್ಯಾಮೋಹ ಇಟ್ಟುಕೊಳ್ಳಬೇಡಿ.
ವೃಷಭ
ವಿದ್ಯಾರ್ಥಿಗಳಿಗೆ ಆಲಸ್ಯದ ಪರ್ವತ ಎದುರಾಗುವುದರಿಂದ ವಿದ್ಯಾರ್ಜನೆಯಲ್ಲಿ ಸ್ವಲ್ಪ ಹಿನ್ನಡೆ. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ತಪಶ್ಶಕ್ತಿ ಹೊಂದಿರುವವರ ಅನುಗ್ರಹಕ್ಕೆ ಪಾತ್ರರಾಗುವಿರಿ.
ಮಿಥುನ
ತಾಂತ್ರಿಕ ವೃತ್ತಿಯ ದೋಷ ಇನ್ನೊಬ್ಬರಲ್ಲಿ ಕೇಳಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿ. ಅಧಿಕ ಕೋಪದಿಂದ ಕೆಲವೊಂದು ವಿಚಾರದಲ್ಲಿ ನಷ್ಟದ ಅನುಭವ ಆಗುವಂತಾಗಲಿದೆ. ಮಾನಹಾನಿಯ ಸಾಧ್ಯತೆಗಳೂ ಇರಬಹುದು.
ಕರ್ಕಾಟಕ
ಕುಟುಂಬ ನಿರ್ವಹಣೆಗಾಗಿ ಅಧಿಕ ಮಟ್ಟಿನ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾದರೂ ಆದಾಯಕ್ಕೇನೂ ಕೊರತೆ ಇಲ್ಲ. ಶತ್ರುಗಳ ಮತ್ತು ಸಾಲ ಕೇಳುವವರ ಬಲೆಗೆ ಬೀಳದಂತೆ ಎಚ್ಚರ ವಹಿಸಬೇಕು.
ಸಿಂಹ
ಸಂಘ ಸಂಸ್ಥೆಗಳ ಕೆಲಸ ಕಾರ್ಯಗಳಲ್ಲಿ ಸ್ವಯಂಪ್ರೇರಿತರಾಗಿ ಅಧಿಕ ಕೆಲಸ ಅಥವಾ ಹಣಕಾಸಿನ ಜವಾಬ್ದಾರಿ ತೆಗೆದುಕೊಳ್ಳುವುದು ಸಮಸ್ಯೆಯನ್ನು ಎಳೆದುಕೊಂಡಂತಾಗುತ್ತದೆ. ದಿನಸಿ ವರ್ತಕರಿಗೆ ಲಾಭದಾಯಕ ದಿನ.
ಕನ್ಯಾ
ಆಭರಣಗಳ ಖರೀದಿ, ಸತ್ಕಾರ್ಯದಲ್ಲಿ ಆಸಕ್ತಿ. ಬಂಧು-ಬಾಂಧವರ ಸಹಾಯ ಸತ್ಫಲವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ.
ತುಲಾ
ಸುಗಂಧ ದ್ರವ್ಯಗಳ ಉತ್ಪಾದಕ ಕೈಗಾರಿಕೆಗೆ ಮತ್ತು ಮಾರಾಟದವರಿಗೆ ಉತ್ತಮ ವ್ಯಾಪಾರ ಕಂಡುಬರುತ್ತದೆ. ನೆಂಟರ ಸಹಾಯದಿಂದ ಮಗಳ ಮದುವೆ ಗೊತ್ತಾಗಿ ಮುಂದಿನ ತಯಾರಿಯನ್ನು ಮಾಡಿಕೊಳ್ಳುವಿರಿ.
ವೃಶ್ಚಿಕ
ಕೃಷಿಗೆ ಸಂಬಂಧಿಸಿದಂತೆ ಮಾಡುವ ಕೆಲಸಕ್ಕೆ ಲಾಭ ಉಂಟಾಗುತ್ತದೆ. ಪ್ರಭಾವಿ ವ್ಯಕ್ತಿಯೊಬ್ಬರಿಂದ ಕಾರ್ಯವನ್ನು ಸಾಧಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಇಂಧನ ಮಾರಾಟಗಾರರಿಗೆ ಅನುಕೂಲಕರ ದಿನ.
ಧನು
ಸಂದರ್ಶನಕಾರರಿಗೆ ಪ್ರಭಾವಿ ವ್ಯಕ್ತಿಗಳನ್ನು ಸಂದರ್ಶಿಸಲು ಒಂದು ಅವ ಕಾಶ ಸಿಗುವುದು. ಸಹೋದ್ಯೋಗಿಗಳೊಂದಿಗಿನ ಬಾಂಧವ್ಯ ಇನ್ನಷ್ಟು ಉತ್ತಮಗೊಳ್ಳಲಿದೆ. ಸಾಮಾಜಿಕವಾಗಿ ಜನೋಪಕಾರದಿಂದ ಶ್ಲಾಘನೆ ಲಭಿಸಲಿದೆ.
ಮಕರ
ರಕ್ಷಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ವೃತ್ತಿಪರವಾಗಿ ಹೆಚ್ಚಿನ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಉತ್ತಮ. ಭವಿಷ್ಯದ ಯೋಜನೆಯಲ್ಲಿ ಪಾಲುದಾರಿಕೆಯು ಹಂತ ಹಂತವಾಗಿ ಲಾಭತರಲಿದೆ.
ಕುಂಭ
ಪ್ರೀತಿ ಪಾತ್ರರೊಂದಿಗೆ ಹೊಸ ಯೋಜನೆಯನ್ನು ಆರಂಭಿಸುವ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುವಿರಿ. ನಿಮ್ಮ ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸುವಿರಿ.
ಮೀನ
ಎಲ್ಲಾ ಕಿರಿ ಕಿರಿಗಳನ್ನೂ, ತೊಂದರೆ ತಾಪತ್ರಯಗಳನ್ನೂ ಶಾಂತ ರೀತಿಯಿಂದ ಎದುರಿಸುವಿರಿ. ಆಲಸ್ಯತನವನ್ನು ದೂರಮಾಡಿಕೊಳ್ಳುವುದರಿಂದ ಅಭಿವೃದ್ಧಿಗೆ ಒಳ್ಳೆಯದು. ಷೇರು ಇಂದು ಅದೃಷ್ಟದಾಯಕವಾಗಿರುತ್ತದೆ.
ADVERTISEMENT
ADVERTISEMENT