ದಿನ ಭವಿಷ್ಯ: ದೇವಿಯ ಕೃಪಾಕಟಾಕ್ಷದಿಂದ ಬರಬೇಕಿದ್ದ ಹಣ ಕೈ ಸೇರುವುದು
Published 30 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಭೂ ಸಂಬಂಧಿತ ವ್ಯವಹಾರ ನಡೆಸುವವರಿಗೆ ಕಾರ್ಯಗಳು ಚುರುಕು ಗತಿಯಲ್ಲಿ ಸಾಗಲಿವೆ. ರಾಜಕಾರಣದಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ ಉಂಟಾಗುವುದು. ಟ್ರಾವೆಲ್ ಏಜೆಂಟರಿಗೆ ಶುಭ ದಿನ.
ವೃಷಭ
ಅಪ್ಪ ಮಗನ ಮಧ್ಯದಲ್ಲಿರುವ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ನೆಮ್ಮದಿ ಮೂಡುವುದು. ಸಾಲದ ರೂಪದಲ್ಲಿ ಹಣವನ್ನು ನೀಡಬೇಡಿ. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಗೊಳ್ಳುವಿರಿ.
ಮಿಥುನ
ಹಿರಿಯರು ಮತ್ತು ಹಿತೈಷಿಗಳಿಂದ ಆಶೀರ್ವಾದ ಪಡೆಯುವುದು ಶುಭ ಸಮಾರಂಭಗಳಿಗೆ ನಾಂದಿಯಾಗುತ್ತದೆ. ಒದಗಿಬರುವ ಅವಕಾಶಗಳು ಮುಂದಿನ ಭವಿಷ್ಯಕ್ಕೆ ಅನುಕೂಲ.
ಕರ್ಕಾಟಕ
ಅಪರಾಧಿ ಸ್ಥಾನದಲ್ಲಿರುವ ನಿಮಗೆ ನಿರಪರಾಧಿ ಎನ್ನುವುದು ಸಾಬೀತಾಗಿ ನ್ಯಾಯಾಲಯದಲ್ಲಿ ಜಯ ಸಿಗುವುದು. ಯಶಸ್ಸಿನ ಹೊಸ ಮಾರ್ಗ ಗಳು ನಿಮಗಿಂದು ಅರಿವಾಗುತ್ತದೆ. ಬದುಕಿನಲ್ಲಿ ಸ್ಥಿರ ಭಾವ ಇರುವುದು.
ಸಿಂಹ
ದಾಂಪತ್ಯದಲ್ಲಿ ಮುಖಾಮುಖಿಯಾಗಿ ಎಲ್ಲಾ ವಿಚಾರಗಳನ್ನು ಹಂಚಿ ಕೊಳ್ಳುವುದು ಸಮಸ್ಯೆ ಬಾರದಂತೆ ಕಾಪಾಡುತ್ತದೆ. ವಿದ್ಯುತ್ ಇಲಾಖೆ ಸಿಬ್ಬಂದಿಗೆ ತುರ್ತು ಕೆಲಸಗಳ ನಿರ್ವಹಣೆ ಹೆಚ್ಚಾಗಲಿದೆ. ದೇವರಲ್ಲಿ ಶ್ರದ್ಧೆ ಹೆಚ್ಚುವುದು.
ಕನ್ಯಾ
ವ್ಯಾಪಾರದ ವಿಚಾರದಲ್ಲಿ ಕೈಗೊಂಡಿರುವ ಕಾರ್ಯಗಳನ್ನು ದೇವರ ಪ್ರಾರ್ಥನೆಯ ಮೂಲಕ ಮುಂದುವರಿಸಿರಿ. ಬದುಕಿನ ಕವಲುದಾರಿಯಲ್ಲಿರುವ ನಿಮಗೆ ಮಾರ್ಗದರ್ಶನದ ಕೊರತೆ ಇದೆ.
ತುಲಾ
ಜನರನ್ನು ಆಕರ್ಷಿಸುವ ಕಲೆ ಹೊಂದಿರುವ ನಿಮಗೆ ವ್ಯವಹಾರ ಕಷ್ಟವಲ್ಲ. ದೇವಿ ಕೃಪಾಕಟಾಕ್ಷಕ್ಕೆ ಪಾತ್ರರಾದ ಕಾರಣದಿಂದ ಬರಬೇಕಿದ್ದ ಹಣ ಮೊತ್ತ ಕೈ ಸೇರುವುದು. ಅತಿಥಿಗಳ ಆಗಮನ ಸಂತಸ ತಂದೀತು.
ವೃಶ್ಚಿಕ
ಆಕಸ್ಮಿಕ ಪ್ರಯಾಣದಿಂದ ದಿನಚರಿಯ ಕಾರ್ಯಗಳು, ಅನಿವಾರ್ಯದ ಕೆಲಸಗಳೆಲ್ಲ ವಿಳಂಬವಾಗಲಿವೆ. ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮದ ಸುಧಾರಣೆಗೆ ಸಾಕಷ್ಟು ಅವಕಾಶಗಳು ಒದಗಿ ಬರುವುವು.
ಧನು
ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ, ಸಾಂಸ್ಕೃತಿಕ ಕಲಾವಿದರಿಗೆ ವೃತ್ತಿಯಲ್ಲಿ ಬಡ್ತಿ ಅಥವಾ ಸನ್ಮಾನಗಳು ದೊರಕಲಿವೆ. ವಿವಾಹ ಸಂಬಂಧ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ.
ಮಕರ
ವ್ಯವಹಾರಗಳನ್ನು ನೇರ ನುಡಿ ಹೊಂದಿದವರೊಂದಿಗೆ ಮಾತ್ರ ಮುಂದುವರಿಸಿಕೊಂಡು ಹೋಗುವ ತೀರ್ಮಾನ ಒಳ್ಳೆಯದು. ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು. ಅತಿಥಿ ಸತ್ಕಾರ ಕೈಗೊಳ್ಳಬಹುದು.
ಕುಂಭ
ಹೋಟೆಲ್ ಉದ್ಯಮದವರಿಗೆ ಮತ್ತು ಟ್ರಾವೆಲಿಂಗ್ ಏಜೆಂಟರಿಗೆ ನಿರೀಕ್ಷೆಗೂ ಮೀರಿದ ಆದಾಯವಿದೆ. ನೂತನವಾಗಿ ಪರಿಚಯವಾದ ರಾಜಕೀಯ ವ್ಯಕ್ತಿಯೊಂದಿಗೆ ನಿಮ್ಮ ಸಂಬಂಧವು ಉತ್ತಮಗೊಳ್ಳುವುದು.
ಮೀನ
ಸದ್ಯದ ಪರಿಸ್ಥಿತಿಯಲ್ಲಿ ವಿಜಯ ನಿಮ್ಮದೇ ಆದ್ದರಿಂದ ನೂತನ ಚರ ಅಥವಾ ಸ್ಥಿರ ಆಸ್ತಿ ಸಂಪಾದಿಸುವ ಬಗ್ಗೆ ಆದಷ್ಟು ಪ್ರಯತ್ನವಿರಲಿ. ಮಿತ್ರರೊಡನೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಿರಿ.