ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್ 26 ಬುಧವಾರ 2024– ಮಕ್ಕಳ ಅಭಿವೃದ್ಧಿ ಕಂಡು ಪುಳಕಿತಗೊಳ್ಳುವಿರಿ
Published 25 ಜೂನ್ 2024, 18:42 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಇತರರ ಎದುರು ತಲೆ ತಗ್ಗಿಸ ಬೇಕಾದ ಪರಿಸ್ಥಿತಿ ಬರುವುದು. ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಈ ದಿನ ಉತ್ತಮ ಅವಕಾಶಗಳು ಸಿಗುವುದು. ಕ್ರೀಡಾ ಚಟುವಟಿಕೆಗಳು ಹೆಚ್ಚಲಿದೆ.
ವೃಷಭ
ಕೆಲಸ ಕಾರ್ಯಗಳಿಗೆ ಬೇಕಾದ ಸೂಕ್ತ ವ್ಯಕ್ತಿಯನ್ನು ಹುಡುಕುವಲ್ಲಿ ವಿಫಲರಾಗುವ ಮುನ್ಸೂಚನೆ ಸಿಗುವುದು. ಮಗುವಿನ ಮೊದಲ ಮಾತು ಅಥವಾ ಮಕ್ಕಳ ಅಭಿವೃದ್ಧಿ ಕಂಡು ಪುಳಕಿತಗೊಳ್ಳುವಿರಿ.
ಮಿಥುನ
ಎಲ್ಲರಿಗಿಂತ ಕಡಿಮೆ ಪರಿಶ್ರಮದಲ್ಲಿ ಇತರರಿಗಿಂತ ಒಳ್ಳೆಯ ಫಲಿತಾಂಶ ಬರುವುದು. ಉಳಿದವರಿಗೆ ಆಶ್ಚರ್ಯ ಚಕಿತ ವಿಷಯವಾಗಿ ತೋರುವುದು. ವೃತ್ತಿಯಲ್ಲಿ ಅನುಭವ ಹೊಂದಿದವರಿಂದ ಬೈಗುಳ ಕೇಳ ಬೇಕಾಗುವುದು.
ಕರ್ಕಾಟಕ
ಸ್ವಚ್ಛಂದವಾಗಿ ಯೌವನವನ್ನು ಅನುಭವಿಸುತ್ತಿರುವವರಿಗೆ ಮದುವೆ ಎನ್ನುವ ಹೆಚ್ಚುವರಿ ಜವಾಬ್ದಾರಿಯನ್ನು ಹೊರೆಸಲು ಪರಿವಾರದವರೆಲ್ಲರೂ ಕಾತುರರಾಗುವರು. ದಿನಾಂತ್ಯದಲ್ಲಿ ಅಲ್ಪ ನೆಮ್ಮದಿ ಪ್ರಾಪ್ತಿಯಾಗಲಿದೆ.
ಸಿಂಹ
ಹೆಂಡತಿಯನ್ನು ಉದ್ದೇಶಿಸಿ ಇತರರು ಹೇಳುವ ದೂರಿನ ಮಾತುಗಳನ್ನು ಕೇಳುವುದು ನಿಮಗೆ ಸಹಿಸಲಾರದ ವಿಷಯವಾಗುತ್ತದೆ. ಶುಭ ಸಮಾಚಾರಗಳನ್ನು ಕೇಳುವಷ್ಟು ವ್ಯವಧಾನ ಇಲ್ಲದಂತೆ ಆಗುತ್ತದೆ.
ಕನ್ಯಾ
ಭಾವನೆಗಳಿಗೆ ಕುಟುಂಬದವರು ಬೆಲೆ ಕೊಡದಿರುವುದು ಮಾನಸಿಕವಾಗಿ ನೊಂದುಕೊಳ್ಳುವಂತೆ ಮಾಡುತ್ತದೆ. ಅದರಿಂದಾಗಿ ನಷ್ಟಗಳು ಸಂಭವಿಸಬಹುದು. ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ.
ತುಲಾ
ಯೋಗಾಭ್ಯಾಸದಿಂದ ಏಕಾಗ್ರತೆ ಹಾಗೂ ಚಿತ್ತ ಶುದ್ಧಿ ಮಾಡಿಕೊಳ್ಳು ವುದು ಉತ್ತಮ. ಬರಬೇಕಾದ ಹಣವೆಲ್ಲವೂ ನಿಮ್ಮ ಕೈ ಸೇರಿದರೂ ಈಗಿನ ನಿಮ್ಮ ಪರಿಸ್ಥಿತಿಗೆ ಇನ್ನೂ ಹೆಚ್ಚಿನ ಧನಸಂಪತ್ತು ಬೇಕಾಗುವುದು.
ವೃಶ್ಚಿಕ
ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ನಿಮಗೆ ಅಹಿತಕರ ಘಟನೆ ಮರೆಯಲು ಹೆಚ್ಚಿನ ಸಮಯ ಬೇಕಾಗುವುದು. ಪ್ರಾಣಾಯಾಮ ಧ್ಯಾನವನ್ನು ನಿರಂತರವಾಗಿ ಮಾಡಿ.
ಧನು
ಮನಸ್ಸಿನಲ್ಲಿರುವ ದುಗುಡಗಳನ್ನು ಹೇಳಿಕೊಳ್ಳಲು ಸರಿಯಾದ ವ್ಯಕ್ತಿಯ ಕೊರತೆ ಉಂಟಾಗುವುದು. ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಲಭಿಸುವುದು.
ಮಕರ
ಮದುವೆಯ ವಿಚಾರದಲ್ಲಿ ಪದೇ ಪದೇ ಬರುತ್ತಿದ್ದ ವಿಘ್ನಗಳು ಸ್ನೇಹಿತನ ಸಹಾಯದಿಂದ ನಿವಾರಣೆಯಾಗುವುದು. ಕೂದಲೆಳೆಯಷ್ಟು ತಪ್ಪು ಮಾಡಿದ್ದಕ್ಕೂ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು.
ಕುಂಭ
ಯಾವುದೋ ಒಂದು ನಂಬಿಕೆಯ ಮೇಲೆ ಸಾಗುತ್ತಿದ್ದ ನಿಮ್ಮ ಜೀವನದಲ್ಲಿ ಇತರರ ಮಾತುಗಳು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಜನಗಳ ದೃಷ್ಟಿ ದೋಷಕ್ಕೆ ಒಳಗಾಗದಂತೆ ಹೆಚ್ಚಿನ ಜಾಗ್ರತೆ ವಹಿಸಿ.
ಮೀನ
ಸಹಾಯ ಗುಣ ಹೊಂದಿರುವ ಕಾರಣದಿಂದ ಸಹಪಾಠಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳುವುದು. ತಂತ್ರಜ್ಞಾನದಲ್ಲಿ ಇರುವ ಅನುಭವವು ಹೊಸ ಕಾರ್ಯಕ್ಷೇತ್ರದಲ್ಲಿ ಕಡಿಮೆ ಎಂದು ಅನ್ನಿಸುವುದು.