ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಬೇಡಿ': ಗಂಗೂಲಿ ಹೀಗೆ ಹೇಳಿದ್ದೇಕೆ?

Published 29 ಜೂನ್ 2024, 10:19 IST
Last Updated 29 ಜೂನ್ 2024, 10:19 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಲಯದಿಂದ ಬಳಲುತ್ತಿರುವ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರನ್ನು ದಾದಾ ಖ್ಯಾತಿಯ ಮಾಜಿ ನಾಯಕ ಸೌರವ್ ಗಂಗೂಲಿ ಬೆಂಬಲಿಸಿದ್ದಾರೆ.

'ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಬೇಡಿ. ಅವರು ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಸಿಗುವ ಆಟಗಾರ' ಎಂದು ಕೊಂಡಾಡಿದ್ದಾರೆ.

ಸತತ ವೈಫಲ್ಯಗಳ ಹೊರತಾಗಿಯೂ ವಿರಾಟ್ ಕೊಹ್ಲಿ ಅವರೇ ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಬೇಕು ಎಂದು ಗಂಗೂಲಿ ಹೇಳಿದ್ದಾರೆ.

'ಇತ್ತೀಚೆಗಷ್ಟೇ ವಿರಾಟ್ ಏಕದಿನ ವಿಶ್ವಕಪ್‌ನಲ್ಲಿ 700 ರನ್ ಗಳಿಸಿದ್ದಾರೆ. ಅವರು ಕೂಡ ಮಾನವ ಎಂಬುದನ್ನು ನಾವು ಪರಿಗಣಿಸಬೇಕು. ಕೆಲವೊಮ್ಮೆ ಹಿನ್ನಡೆ ಅನುಭವಿಸಬಹುದು. ನಾವು ಅದನ್ನು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.

'ಕೊಹ್ಲಿ, ತೆಂಡೂಲ್ಕರ್, ದ್ರಾವಿಡ್ ಮುಂತಾದವರು ಭಾರತೀಯ ಕ್ರಿಕೆಟ್‌ನ ಸಂಸ್ಥೆಗಳು. ಮೂರು-ನಾಲ್ಕು ಪಂದ್ಯಗಳು ಕೆಟ್ಟ ಆಟಗಾರನಾಗಿ ಮಾಡುವುದಿಲ್ಲ. ಫೈನಲ್‌ನಲ್ಲಿ ವಿರಾಟ್ ಅವರನ್ನು ಕಡೆಗಣಿಸಬೇಡಿ' ಎಂದು ಹೇಳಿದ್ದಾರೆ.

ಗಂಭೀರ್ ಮುಂದಿನ ಕೋಚ್...

ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಟೀಮ್ ಇಂಡಿಯಾದ ಮುಂದಿನ ಕೋಚ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT