ಮುಂಬೈ (ಪಿಟಿಐ): ಧಾರಾವಿ ಮರುಅಭಿವೃದ್ಧಿ ಯೋಜನೆಗೆ ಅದಾನಿ ಸಮೂಹವು ಅತಿಹೆಚ್ಚಿನ ಮೊತ್ತದ ಬಿಡ್ ಸಲ್ಲಿಸಿದೆ ಎಂದು ಯೋಜನೆಯ ಸಿಇಒ ಎಸ್.ವಿ.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.

ವಿಶ್ವದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದಾಗಿರುವ ಈ ಪ್ರದೇಶದ ಮರುಅಭಿವೃದ್ಧಿಗೆ ಸಮೂಹವು ₹ 5069 ಕೋಟಿ ಮೊತ್ತದ ಬಿಡ್ ಸಲ್ಲಿಸಿದೆ. ಪ್ರತಿಸ್ಪರ್ಧಿ ಕಂಪನಿಯಾದ ಡಿಎಲ್ಎಫ್ ₹ 2025 ಕೋಟಿ ಮೊತ್ತದ ಬಿಡ್ ಸಲ್ಲಿಸಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

‘ಈ ವಿವರಗಳನ್ನು ನಾವು ಈಗ ಸರ್ಕಾರಕ್ಕೆ ಕಳುಹಿಸುತ್ತೇವೆ. ಅದು ಅಂತಿಮ ಒಪ್ಪಿಗೆ ನೀಡಲಿದೆ’ ಎಂದು ಅವರು ತಿಳಿಸಿದ್ದಾರೆ.

ಬಿಡ್ ಗೆದ್ದವರು, ಈ ಕೊಳೆಗೇರಿಯಲ್ಲಿ ವಾಸಿಸುತ್ತಿರುವ 6.5 ಲಕ್ಷ ಜನರಿಗೆ ಏಳು ವರ್ಷಗಳಲ್ಲಿ ಪುನರ್ವಸತಿ ಕಲ್ಪಿಸಬೇಕು. ಬಿಡ್ ಗೆದ್ದವರಿಗೆ ಮುಂಬೈನ ಕೇಂದ್ರ ಭಾಗದಲ್ಲಿರುವ ಈ ಪ್ರದೇಶದ ವಾಣಿಜ್ಯ ಮತ್ತು ವಸತಿ ಜಾಗವನ್ನು ಮಾರಾಟ ಮಾಡಿ ವರಮಾನ ಪಡೆಯುವ ಅವಕಾಶ ಕೂಡ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.