ನವದೆಹಲಿ: ವಹಿವಾಟುಗಳ ಬಗ್ಗೆ ಧ್ವನಿ ಸಂದೇಶ ನೀಡುವ ಸೌಂಡ್ಪಾಡ್ (ಸ್ಪೀಕರ್)ಗಳ ವಿತರಣೆಯನ್ನು ದೇಶದಾದ್ಯಂತ ವಿಸ್ತರಿಸಲು ಫೈನ್ಟೆಕ್ ಕಂಪನಿ ಗೂಗಲ್ ಪೇ ಮುಂದಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಇದನ್ನು ಕಾರ್ಯಗತಗೊಳಿಸಲು ಗೂಗಲ್ ಉದ್ದೇಶಿಸಿದೆ.

ಪೇಟಿಎಂ ಬ್ಯಾಂಕ್ ಬಿಕ್ಕಟ್ಟಿನ ಬೆನ್ನಲ್ಲೇ ಗೂಗಲ್ ಈ ಹೆಜ್ಜೆ ಇಟ್ಟಿದೆ.
.ಪೇಟಿಎಂ PPBL ಮೇಲೆ ವಿಧಿಸಿದ್ದ ನಿರ್ಬಂಧ ವಿಸ್ತರಣೆ.
ಕಳೆದ ವರ್ಷ ದೇಶದಲ್ಲಿ ಪ್ರಯೋಗಾರ್ಥವಾಗಿ ಸೌಂಡ್ಪಾಡ್ಗಳನ್ನು ಪರಿಚಯಿಸಿತ್ತು. ಕ್ಯೂಆರ್ ಕೋಡ್ ಬಳಸಿ ಗ್ರಾಹಕರು ಮಾಡಿದ ಪಾವತಿಗಳ ಧ್ವನಿ ಸಂದೇಶ ನೀಡುತ್ತದೆ.

‘ಕಳೆದ ವರ್ಷ ನಾವು ಪ್ರಯೋಗಾರ್ಥವಾಗಿ ಸೌಂಡ್ಪಾಡ್ಗಳನ್ನು ಪರಿಚಯಿಸಿದ್ದೆವು. ವರ್ತಕರಿಂದ ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ಬಂದಿದೆ. ಮುಂದಿನ ಕೆಲ ತಿಂಗಳಲ್ಲಿ ದೇಶದ ಸಣ್ಣ ವರ್ತಕರಲ್ಲೂ ಸೌಂಡ್ಪಾಡ್ಗಳು ಇರಲಿವೆ’ ಎಂದು ಗೂಗಲ್ ಪೇನ ಪ್ರಾಡಕ್ಟ್ ವಿಭಾಗದ ಉಪಾಧ್ಯಕ್ಷ ಅಂಬರೀಶ್ ಲೆಂಗೆ ಬ್ಲಾಗ್ನಲ್ಲಿ ತಿಳಿಸಿದ್ದಾರೆ.
.ಪೇಟಿಎಂ ಬ್ಯಾಂಕ್ ವಿರುದ್ಧ ಏಕಾಏಕಿ ಕ್ರಮಕೈಗೊಂಡಿಲ್ಲ: ಆರ್ಬಿಐ.
ಸದ್ಯ ಪೇಟಿಎಂ, ಫೋನ್ಪೇ, ಭಾರತ್ ಪೇ ಕೂಡ ಸೌಂಡ್ ಬಾಕ್ಸ್ಗಳನ್ನು ವರ್ತಕರಿಗೆ ವಿತರಿಸುತ್ತಿವೆ.

ಫೋನ್ಪೇ ಬಳಿಕ ಗೂಗಲ್ ಪೇ ದೇಶದ ಎರಡನೇ ಅತೀ ಡೊದ್ದ ಯುಪಿಐ ಆ್ಯಪ್ ಆಗಿದ್ದು, 2024ರ ಜನವರಿಯಲ್ಲಿ, ₹ 6,35,945.58 ಕೋಟಿ ಹಣ ಗೂಗಲ್ ಪೇ ಮೂಲಕ ವರ್ಗಾವಣೆಯಾಗಿತ್ತು.
.Paytm: ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ನಿರ್ಬಂಧ, ಆ್ಯಪ್ ಕಾರ್ಯ ನಿರ್ವಹಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.