ನವದೆಹಲಿ: ತಮ್ಮ ವಿರುದ್ಧದ ಹಿಂಡನ್ಬರ್ಗ್ ವರದಿಯು ತಪ್ಪು ಮಾಹಿತಿ ಮತ್ತು ಅಪಪ್ರಚಾರದ ಆರೋಪಗಳ ಸಂಯೋಜನೆಯಾಗಿದೆ ಎಂದು ಉದ್ಯಮಿ ಗೌತಮ್ ಅದಾನಿ ಮಂಗಳವಾರ ಪುನರುಚ್ಚರಿಸಿದ್ದಾರೆ.

ತಮ್ಮ ಸಮೂಹ ಕಂಪನಿಗಳ ಎಜಿಎಂನಲ್ಲಿ ಮಾತನಾಡಿದ ಅವರು, ಈ ವರ್ಷ ಅಮೆರಿಕ ಮೂಲದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು ನಮ್ಮ ಸಮೂಹ ಸಂಸ್ಥೆಯ ಷೇರುಗಳಿಗೆ ಸಂಬಂಧಿಸಿದಂತೆ ವರದಿಯೊಂದನ್ನು ಪ್ರಕಟಿಸಿತ್ತು. ಆ ವರದಿಯು ಉದ್ದೇಶಿತ ತಪ್ಪು ಮಾಹಿತಿ ಮತ್ತು ಅಪಖ್ಯಾತಿಯ ಆರೋಪಗಳ ಸಂಯೋಜನೆಯಾಗಿದೆ. ಆ ವರದಿಯಲ್ಲಿ ಉಲ್ಲೇಖಿಸಲಾದ ಹೆಚ್ಚಿನ ಮಾಹಿತಿ 2004ರಿಂದ 2015ರವರೆಗಿನದ್ದಾಗಿದೆ ಎಂದು ಹೇಳಿದರು.

‘ಅವುಗಳೆಲ್ಲವನ್ನೂ ಅದೇ ಸಮಯದಲ್ಲಿ ಅಧಿಕಾರಿಗಳು ಇತ್ಯರ್ಥಗೊಳಿಸಿದ್ದರು. ಈ ವರದಿಯು ನಮ್ಮ ಹೆಸರು ಹಾಳುಮಾಡುವ ದುರುದ್ದೇಶಪೂರಿತ ಪ್ರಯತ್ನವಾಗಿತ್ತು. ನಮ್ಮ ಘನತೆಗೆ ಧಕ್ಕೆ ಮಾಡುವ ಹಾಗೂ ನಮ್ಮ ಷೇರುಗಳ ಬೆಲೆ ಕುಸಿತದಿಂದ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾಗಿದೆ’ಎಂದು ಅವರು ದೂರಿದರು.

ಅದಾದ ಬಳಿಕ, ಸಂಪೂರ್ಣ ಚಂದಾದಾರಿಕೆಯ ಎಫ್ಪಿಒ ಹೊರತಾಗಿಯೂ, ನಮ್ಮ ಕಂಪನಿಯು ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಸಂಪೂರ್ಣ ಹಣವನ್ನು ಹಿಂದಿರುಗಿಸಲು ನಿರ್ಧರಿಸಿತು ಎಂದು ಹೇಳಿದರು.

‘ಆರೋಪಗಳನ್ನು ನಾವು ತಳ್ಳಿ ಹಾಕಿದ್ದರೂ ಸಹ ವಿವಿಧ ಪಟ್ಟಭದ್ರ ಹಿತಾಸಕ್ತಿಗಳು ವರದಿ ಬಳಸಿಕೊಂಡು ನಮ್ಮನ್ನು ಶೋಷಿಸಲು ಪ್ರಯತ್ನಿಸಿದವು. ವಿವಿಧ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ನಿರೂಪಣೆಗಳಿಗೆ ಪ್ರೋತ್ಸಾಹ ಮತ್ತು ಅಪಪ್ರಚಾರ ಮಾಡಲಾಗಿದೆ’ ಎಂದು ಅವರು ಹೇಳಿದರು.

ಅದಾನಿ ಸಮೂಹದ ಮೇಲೆ ಷೇರುಗಳ ಬೆಲೆಯ ಮೇಲೆ ಕೃತಕವಾಗಿ ಪ್ರಭಾವ ಬೀರಿದ ಹಾಗೂ ಲೆಕ್ಕಪತ್ರಗಳ ಅಕ್ರಮದಲ್ಲಿ ತೊಡಗಿದ ಆರೋಪವನ್ನು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯ ವರದಿಯಲ್ಲಿ ಹೊರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.