ನವದೆಹಲಿ: ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ನಲ್ಲಿ (ಎನ್ಡಿಟಿವಿ) ಹೊಂದಿರುವ ಒಟ್ಟು ಶೇಕಡ 32.26ರಷ್ಟು ಷೇರುಪಾಲಿನಲ್ಲಿ ಶೇ 27.26ರಷ್ಟನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡುವುದಾಗಿ ಎನ್ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಶುಕ್ರವಾರ ತಿಳಿಸಿದ್ದಾರೆ.

ಷೇರು ಮಾರಾಟದ ನಂತರ ಪ್ರವರ್ತಕರ ಬಳಿ ಎನ್ಡಿಟಿವಿಯ ಶೇ 5ರಷ್ಟು ಷೇರುಪಾಲು ಮಾತ್ರವೇ ಉಳಿಯಲಿದೆ.

ಸ್ಥಾಪಕರ ಷೇರು ಸ್ವಾಧೀನಪಡಿಸಿಕೊಂಡ ಬಳಿಕ ಎನ್ಡಿಟಿವಿಯಲ್ಲಿ ಅತಿ ಹೆಚ್ಚಿನ ಷೇರುಪಾಲನ್ನು (ಶೇ 69.71) ಅದಾನಿ ಸಮೂಹ ಹೊಂದಲಿದೆ. ಸದ್ಯ ಸಮೂಹದ ಬಳಿ ಶೇ 37.44ರಷ್ಟು ಷೇರುಪಾಲು ಇದೆ.

ಎನ್ಡಿಟಿವಿಯಲ್ಲಿ ಹೊಂದಿರುವ ಬಹುಪಾಲು ಷೇರುಗಳನ್ನು ಎಎಂಜಿ ಮೀಡಿಯಾ ನೆಟ್ವರ್ಕ್ಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದೇವೆ ಎಂದು ಸ್ಥಾಪಕರು ಷೇರುಪೇಟೆಗೆ ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 30 ಅಥವಾ ಆ ಬಳಿಕ ಷೇರು ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಎನ್ಡಿಟಿವಿ ಷೇರುಪೇಟೆಗೆ ತಿಳಿಸಿದೆ. ಆದರೆ ಮಾರಾಟದ ಮೊತ್ತವನ್ನು ಕಂಪನಿಯು ತಿಳಿಸಿಲ್ಲ.

ಎನ್ಡಿಟಿವಿಯ ಒಂದು ಷೇರಿನ ಬೆಲೆಯು 60 ದಿನಗಳ ವಹಿವಾಟಿನಲ್ಲಿ ಸರಾಸರಿ ₹368.43ರಷ್ಟು ಇದೆ. ಇದರ ಆಧಾರದ ಮೇಲೆ ಸ್ಥಾಪಕರು
1.75 ಕೋಟಿ ಷೇರುಗಳನ್ನು ಮಾರಾಟ ಮಾಡಿದರೆ ಅದರ ಮೊತ್ತವು ₹ 647.6 ಕೋಟಿ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.