ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೇಟಿಎಂ: ₹550 ಕೋಟಿ ನಿವ್ವಳ ನಷ್ಟ

Published : 22 ಮೇ 2024, 14:18 IST
Last Updated : 22 ಮೇ 2024, 14:18 IST
ಫಾಲೋ ಮಾಡಿ
Comments

ನವದೆಹಲಿ: ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್ಸ್‌ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹550 ಕೋಟಿ ನಿವ್ವಳ ನಷ್ಟ ಕಂಡಿದೆ.

2022–23ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿಯೂ ಕಂಪನಿಯು ₹167 ಕೋಟಿ ನಷ್ಟ ಕಂಡಿತ್ತು. ವರಮಾನದಲ್ಲಿ ಶೇ 3ರಷ್ಟು ಕಡಿಮೆಯಾಗಿದ್ದು, ₹2,267 ಕೋಟಿ ಇಳಿಕೆಯಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.

‘ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಲಿಮಿಟೆಡ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ಹೇರಿದೆ. ಹಾಗಾಗಿ, ಬ್ಯಾಂಕ್‌ನಿಂದ ನೀಡುವ ಪೇಟಿಎಂ ವಾಲೆಟ್‌ ಮತ್ತು ಫಾಸ್ಟ್ಯಾಗ್‌ ಸೇವೆ ಸ್ಥಗಿತಗೊಂಡಿದೆ. ಇದರಿಂದ ಕಂಪನಿಯ ತೆರಿಗೆ, ಬಡ್ಡಿ, ಸಾಲ ತೀರುವಳಿಯ (ಇಬಿಐಟಿಡಿಎ) ಸುಮಾರು ₹500 ಕೋಟಿ ಮೊತ್ತದ ಮೇಲೆ ಪರಿಣಾಮ ಬೀರಿದೆ. ಇದರಿಂದ ಲಾಭದಲ್ಲಿ ಇಳಿಕೆಯಾಗಿದೆ’ ಎಂದು ಕಂಪನಿಯು ತಿಳಿಸಿದೆ.

2023–24ರ ಪೂರ್ಣ ಹಣಕಾಸು ವರ್ಷದಲ್ಲಿ ₹1,422 ಕೋಟಿ ನಷ್ಟವಾಗಿದೆ. ವರಮಾನವು ₹7,990 ಕೋಟಿಯಿಂದ ₹9,978 ಕೋಟಿಗೆ (ಶೇ 25ರಷ್ಟು) ಏರಿಕೆಯಾಗಿದೆ. ಕಂಪನಿಯ ಸರಾಸರಿ ವಾಣಿಜ್ಯ ಮೌಲ್ಯದ (ಜಿಎಂವಿ) ಬೆಳವಣಿಗೆ ಮತ್ತು ಹಣಕಾಸು ಸೇವೆಗಳಲ್ಲಿನ ಪ್ರಗತಿಯಿಂದ ವರಮಾನದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ. 

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹1,500 ಕೋಟಿಯಿಂದ ₹1,600 ಕೋಟಿ ವರಮಾನ ನಿರೀಕ್ಷಿಸಿದ್ದೇವೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT