ಬಳ್ಳಾರಿ: ಕೈಗಾರಿಕಾ ಕೇಂದ್ರ ತೋರಣಗಲ್ನಲ್ಲಿರುವ ಜೆಎಸ್ಡಬ್ಲ್ಯು ಸ್ಟೀಲ್ ಕಂಪನಿಯಲ್ಲಿ ಗುರುವಾರ ದುರಂತ ಸಂಭವಿಸಿದ್ದು, ಸಂಸ್ಥೆಯ ಮೂವರು ಉದ್ಯೋಗಿಗಳು ನೀರಿನ ಸುರಂಗದಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದ್ದಾರೆ.

ಕಂಪನಿಯ ಸಿವಿಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆಯ ಗಂಟೆ ಜಡೆಪ್ಪ (31), ಚೆನ್ನೈನ ಶಿವಮಗದೇವ್ (22), ಬೆಂಗಳೂರಿನ ಸುಶಾಂತ್ ಕೃಷ್ಣ ನೈನಾರು (23) ಮೃತರು.

ವಿದ್ಯುತ್ ಪೂರೈಕೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಜೆಎಸ್ಡಬ್ಲ್ಯು ಸ್ಟೀಲ್ನ ಎಚ್ಎಸ್ಎಮ್-3 ಘಟಕದ ಸುರಂಗದಲ್ಲಿ ನೀರಿನ ಹರಿವು ಸ್ಥಗಿತಗೊಂಡಿತ್ತು. ಈ ವೇಳೆ ಸುರಂಗದ ಪರಿಶೀಲನೆ ನಡೆಸಲು ಮೂವರೂ ಸಿಬ್ಬಂದಿ ಅದರ ಒಳಗೆ ಪ್ರವೇಶಿಸಿದ್ದರು.

ಸಿಬ್ಬಂದಿ ಒಳಗಿರುವಾಗಲೇ ಸುರಂಗದಲ್ಲಿ ನೀರು ಏಕಾಏಕಿ ಪ್ರವಾಹವಾಗಿದೆ. ಆಗ ಮೂವರೂ ಕೊಚ್ಚಿಕೊಂಡು ಹೋಗಿ 70-80 ಅಡಿ ಆಳದ ಬೇರೆ ಬೇರೆ ಟ್ಯಾಂಕ್ಗಳಲ್ಲಿ ಬಿದ್ದಿದ್ದಾರೆ.

ಗುರುವಾರ ರಾತ್ರಿ ಹೊತ್ತಿಗೆ ಎರಡು ಶವಗಳು ಸಿಕ್ಕಿದ್ದವು. ಇನ್ನೊಬ್ಬರ ಮೃತದೇಹ ಶುಕ್ರವಾರ ಬೆಳಿಗ್ಗೆ ಸಿಕ್ಕಿದೆ ಕಬ್ಬಿಣದ ಬಿಸಿ ಸರಳುಗಳನ್ನು ತಣಿಸಲು ಈ ಸುರಂಗಗಳ ಮೂಲಕ ನಿರಂತರವಾಗಿ ನೀರು ಹರಿಸಲಾಗುತ್ತದೆ. ಹೀಗೆ ಹರಿಸಿದ ನೀರು ವಿವಿಧ ಟ್ಯಾಂಕ್ಗಳಲ್ಲಿ ಸಂಗ್ರಹವಾಗುತ್ತದೆ. ಈ ಸುರಂಗಳಲ್ಲಿನ ಸಮಸ್ಯೆ ಸರಿಪಡಿಸಲು ಈ ಮೂವರು ಸಿಬ್ಬಂದಿ ತೆರಳಿದ್ದರು.

ಮೃತದೇಹಗಳನ್ನು ವಿಮ್ಸ್ ಶವಾಗಾರದಲ್ಲಿ ಇರಿಸಲಾಗಿದೆ. ಕುಟುಂಬಸ್ಥರು ಬಂದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.