ಹೊಸಕೋಟೆ: ವಿದ್ಯುತ್, ನೋಂದಣಿ ಶುಲ್ಕ, ಬಾಂಡ್ ಪೇಪರ್, ಪೆಟ್ರೋಲ್,ಡೀಸೆಲ್ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಬರೆ ಎಳೆದ ಕಾಂಗ್ರೆಸ್ ಸರ್ಕಾರವು ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಅವರ ಗ್ಯಾರಂಟಿಗಳನ್ನು ಜನ ತಿರಸ್ಕರಿಸಿದ್ದಾರೆ ಎಂಬುವುದಕ್ಕೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಒಂಬತ್ತು ಸ್ಥಾನಗಳೇ ಸಾಕ್ಷಿ ಎಂದು ಹೇಳಿದರು.

‘ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ಅಂತಿಮವಾಗಿ ಬಿಜೆಪಿ ಸರ್ಕಾರ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆಗೆ ಕೈ ಹಾಕಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೇ ವರ್ಷದಲ್ಲಿ ತೈಲ ಬೆಲೆ ಏರಿಕೆ ಮಾಡಿದೆ. ಇದು ರಾಜ್ಯದ ಆರ್ಥಿಕ ದುಃಸ್ಥಿತಿಗೆ ಸಾಕ್ಷಿ’ ಎಂದರು.

‘ಲೋಕಸಭಾ ಚುನಾವಣೆಗೆ ಮೂರು ದಿನ ಬಾಕಿ ಇರುವಾಗ ನಮ್ಮ ಪಕ್ಷದ ಬೂತ್ ಏಜೆಂಟ್‌ಗಳಿಗೆ ವಿರೋಧಿ ಪಕ್ಷದ ಮುಖಂಡರು ವಿವಿಧ ಅಮಿಷ ಒಡ್ಡಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ ನಾಗರಾಜ್ ದೂರಿದರು.

ಹುಲ್ಲೂರು ಸಿ.ಮಂಜುನಾಥ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಸತೀಶ್, ನಾರಾಯಣಸ್ವಾಮಿ, ನಾಗರಾಜ್, ರಘುವೀರ್, ಲಾಯರ್ ಮಂಜುನಾಥ್, ಅನಿಲ್, ಶಂಕರೇಗೌಡ, ತಿರುವರಂಗ ನಾರಾಯಣಸ್ವಾಮಿ, ಅಫ್ಸರ್, ರಾಮಾಂಜಿನಿ, ಕೊರಳೂರು ನಾರಾಯಣಸ್ವಾಮಿ, ಹೇಮಂತ್ ಕುಮಾರ್, ಬಾಲಚಂದ್ರ, ರೋಷನ್, ಶಿವಾನಂದ, ಚಂದ್ರಪ್ಪ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.