ಬೆಳಗಾವಿ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ 4 ಲಕ್ಷ ಲಡ್ಡು ಸಿದ್ಧಪಡಿಸಲಾಗುತ್ತಿದೆ.

ರಾಜಸ್ಥಾನದಿಂದ ಆಗಮಿಸಿದ 40 ಕಾರ್ಮಿಕರು, ತುಪ್ಪ, ಒಣಹಣ್ಣುಗಳನ್ನು ಬಳಸಿ ‘ಮೋತಿಚೂರ್’ ಲಡ್ಡು ತಯಾರಿಕೆಯಲ್ಲಿ ನಿರತವಾಗಿದ್ದಾರೆ. ಸ್ಥಳೀಯರು ಹಾಗೂ ಬಿಜೆಪಿ ಕಾರ್ಯಕರ್ತರು ಅವುಗಳ ಪ್ಯಾಕಿಂಗ್ಗೆ ನೆರವಾಗುತ್ತಿದ್ದಾರೆ.

‘ಇದೊಂದು ಸಂಭ್ರಮದ ಕ್ಷಣ. ಹಾಗಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ 80 ಸಾವಿರ ಕುಟುಂಬಗಳಿಗೆ ಲಡ್ಡು ವಿತರಿಸಲು ಮುಂದಾಗಿದ್ದೇವೆ. ಪ್ರತಿ ಬಾಕ್ಸ್ನಲ್ಲಿ ಐದು ಲಡ್ಡುಗಳನ್ನು ಇರಿಸಿ, ಕಾರ್ಯಕರ್ತರ ಮೂಲಕ ಮನೆ–ಮನೆಗೆ ತಲುಪಿಸಲು ತೀರ್ಮಾನಿಸಿದ್ದೇವೆ. ಈಗಾಗಲೇ ವಿತರಣೆ ಪ್ರಕ್ರಿಯೆ ಆರಂಭವಾಗಿದೆ’ ಎಂದು ಅಭಯ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘10 ಸಾವಿರ ರಾಮನ ಭಕ್ತರ ಕೈಮೇಲೆ ರಾಮನ ರೇಖಾಚಿತ್ರ(ಟ್ಯಾಟೂ) ಹಾಕಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ಸಿಗಲಿದೆ. ಇಡೀ ದೇಶದಲ್ಲೇ ವಿನೂತನವಾಗಿ ಇಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.