ಕೊಳ್ಳೇಗಾಲ: ನಗರದ ನಾರಾಯಣಸ್ವಾಮಿ ಗುಡಿಬೀದಿಯ ಕುರುಕುರೆ ಏಜೆನ್ಸಿ ಮಾಲೀಕ ಪಿ.ಆರ್.ನಾಗೇಶ್ (56) ಹಾಗೂ ಸತ್ಯಾಲಕ್ಷ್ಮಿ(46) ದಂಪತಿ ಸಾಲಬಾಧೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಕುರುಕುರೆ ಏಜೆನ್ಸಿ ನಡೆಸುತ್ತಿದ್ದರು. ವ್ಯಾಪಾರದಲ್ಲಿ ನಷ್ಟ ಹೊಂದಿದ್ದು ಕೈ ಸಾಲ, ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದರು ಎಂಬ ಮಾಹಿತಿ ಇದೆ. ಹಾಗಾಗಿ ಸಾಲ ಬಾಧೆ ತಾಳಲಾರದೆ ಶನಿವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಗ ಗಣೇಶ್ ಹಾಗೂ ಸಂಬಂಧಿಕರಿಗೆ ಸಂದೇಶ ರವಾನಿಸಿದ್ದಾರೆ. ‘ನನ್ನ ಸಾವಿಗೆ 16 ಜನರು ಕಾರಣ. ಇವರಿಗೆ ನಾನು ಹಣವನ್ನು ನೀಡುತ್ತಿದ್ದರೂ ದಿನನಿತ್ಯ ನನಗೆ ಚಿತ್ರ ಹಿಂಸೆ ನೀಡುತ್ತಿದ್ದರು. ಜಿಗುಪ್ಸೆಗೊಂಡು . ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂಬುದಾಗಿ ಸಂದೇಶ ರವಾನಿಸಿದ್ದಾರೆ ಎಂದು ಅವರ ಮಗ ಗಣೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

‘ಬಿಳಿ ಹಾಳೆಯಲ್ಲಿ ಈಕ್ವೀಟಿಸ್ ಮ್ಯಾನೇಜರ್ ಮಂಜುನಾಥ್, ಆನಂದ್, ಎಂಆರ್ಎಸ್ ಮಹದೇವಸ್ವಾಮಿ, ಎಲ್ಐಸಿ ದೊರೆಸ್ವಾಮಿ, ಪೂಜಾ, ಉಮಾ, ರಾಜಮ್ಮ, ಬಸವಲಿಂಗಪ್ಪ, ರಾಜಮ್ಮ, ದ್ರಾಕ್ಷಾಯಿಣಿ, ವಿಜಯಲಕ್ಷ್ಮಿ, ಕುಮಾರ್ ಮಾಸ್ಟರ್, ಪ್ರಭ, ಮಧು, ಮಂಜುಳಾ, ಸುಶೀಲಮ್ಮ, ಸುಂದರಮ್ಮ ಎಂಬವರು ಆತ್ಮಹತ್ಯೆಗೆ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ದೇಹವನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.