ದಾವಣಗೆರೆ: ಹಣ ಹಂಚಿಕೆಯಲ್ಲಿ ಆದ ವ್ಯತ್ಯಾಸಗಳೇ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಪಕ್ಷದ ಕಾರ್ಯಕರ್ತರೊಬ್ಬರು ಅಭ್ಯರ್ಥಿಯ ಪತಿ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಮೊಬೈಲ್ಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಕಾರ್ಯಕರ್ತನ ವರ್ತನೆಗೆ ಬೇಸತ್ತ ಸಿದ್ದೇಶ್ವರ ಮೊಬೈಲ್ ಅನ್ನು ತಮ್ಮ ಪುತ್ರನಿಗೆ ಕೊಟ್ಟಿದ್ದು, ಪುತ್ರ ಸಹ ಮಾತನಾಡಿರುವುದು ಈ ಆಡಿಯೊದಲ್ಲಿದೆ.

‘ನೀವು ಒಂದು ಮತಕ್ಕೆ ₹ 300 ಹಂಚಿದ್ದೀರಿ. ₹ 500 ಕೊಟ್ಟಿದ್ದರೆ ಗೆಲ್ತಿದ್ರಿ’ ಎಂದು ಹೊನ್ನಾಳಿ ತಾಲ್ಲೂಕಿನ ಗ್ರಾಮವೊಂದರ ಕಾರ್ಯಕರ್ತ ಹೇಳಿದ್ದಲ್ಲದೆ, ‘ಪಕ್ಷದ ಕಾರ್ಯಕರ್ತರಿಗೆ ತೀವ್ರ ನಿರಾಸೆಯಾಗಿದೆ’ ಎಂದು ನೋವು ತೋಡಿಕೊಂಡಿದ್ದಾರೆ.

‘ಹಣ ಹಂಚಿಯೂ ಎಂ.ಪಿ. ರೇಣುಕಾಚಾರ್ಯ ಸೋಲಲಿಲ್ಲವೇ? ಎಂದು ಸಿದ್ದೇಶ್ವರ ಕೇಳಿರುವ ಪ್ರಶ್ನೆಗೆ, ‘ರೇಣುಕಾಚಾರ್ಯ ಅವರಂತೆ ನೀವೂ ಸೋಲುವುದಾದರೆ ಟಿಕೆಟ್ ಯಾಕೆ ತೆಗೆದುಕೊಳ್ಳಬೇಕಿತ್ತು’ ಎಂದು ಕಾರ್ಯಕರ್ತ ಮರು ಪ್ರಶ್ನೆ ಎಸೆದಿದ್ದು, ವಾದದ ಸರಣಿ ಮುಂದುವರಿದಿದೆ.

‘ಪ್ರಧಾನಿ ಮೋದಿ ಅವರೇ 3.50 ಲಕ್ಷ ಮತಗಳನ್ನು ಕಡಿಮೆ ಪಡೆದಿಲ್ಲವೇ?’ ಎಂದು ಸಿದ್ದೇಶ್ವರ ಸಮಜಾಯಿಷಿ ನೀಡಿದಾಗ, ‘ಅವರು ಗೆದ್ದಿದ್ದಾರೆ. ಇನ್ನೂ 10 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ ಮೋದಿ ಸುಲಭವಾಗಿ ಪ್ರಧಾನಿ ಆಗುತ್ತಿದ್ದರು’ ಎಂದು ಕಾರ್ಯಕರ್ತ ತಿರುಗೇಟು ನೀಡಿದ್ದಾರೆ.

ಬಳಿಕ ಮಾತನಾಡಿರುವ ಸಿದ್ದೇಶ್ವರ ಪುತ್ರ ಜಿ.ಎಸ್. ಅನಿತ್ಕುಮಾರ್, ‘ನಿಮಗೆ ಹಣ ಕೊಡಲು ನಾವು ಲಂಚ ಹೊಡೆದಿಲ್ಲ. ಲಂಚ ಹೊಡೆಯಲು 4 ಸಲ ನಮ್ಮನ್ನು ಗೆಲ್ಲಿಸಿದ್ರಾ?’ ಎಂದು ಕೇಳಿದ್ದಾರೆ.

‘ಮತ್ತೆ ಟಿಕೆಟ್ ಕೊಳ್ಳಲು ಹಣ ಕೊಟ್ರಾ?, ಚುನಾವಣೆಯಲ್ಲಿ ಹಣ ಕೊಡದಿದ್ದರೆ ನೀವು ಚುನಾವಣೆಯಲ್ಲಿ ಏಕೆ ಸ್ಪರ್ಧಿಸಿದ್ರಿ? ಹಣ ಇರುವ ಬೇರೆಯವರಿಗೆ ಅವಕಾಶ ಕೊಡಬೇಕಿತ್ತು’ ಎಂದು ಕಾರ್ಯಕರ್ತ ಹೇಳಿದ್ದಾರೆ.

‘ನಾವೇನೂ ಟಿಕೆಟ್ ಕೇಳಿರಲಿಲ್ಲ. ಕೇಳದಿದ್ದರೂ ಟಿಕೆಟ್ ಕೊಟ್ಟಿದ್ದಾರೆ’ ಎಂದು ಪುತ್ರ ಹೇಳಿರುವುದು ಕ್ಷೇತ್ರದಾದ್ಯಂತ ಚರ್ಚೆಗೊಳಗಾಗುತ್ತಿದೆ.

ಸಂಭಾಷಣೆಯ ಸಾರಾಂಶ

ಕಾರ್ಯಕರ್ತ: ನಾವು ಕರೆ ಮಾಡಿದರೂ ಕಟ್ ಮಾಡ್ತೀರಲ್ಲಣ್ಣ?

ಸಿದ್ದೇಶ್ವರ: ‘ನಾವು ಸೋತು ಸುಣ್ಣವಾಗಿ ದುಡ್ಡು ಖರ್ಚು ಮಾಡಿಕೊಂಡಿರುವ ವ್ಯಥೆಯಲ್ಲಿ ಇದ್ದೇವೆ. ನೀನು ತಮಾಷೆ ಮಾಡುತ್ತಿದ್ದಿಯಲ್ಲಪ್ಪಾ? ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಿಲ್ಲು ನಿನಗೆ ಗೊತ್ತಾಗುತ್ತದೆ’

ಕಾರ್ಯಕರ್ತ: ನಮ್ಮ ಬೂತ್ನಲ್ಲಿ ತೆಗೆದುನೋಡಿ, 130 ವೋಟ್ ಲೀಡ್ ಇದೆ. ನೀವು ಕಾರ್ಯಕರ್ತರಿಗೆ ಈ ರೀತಿ ಮಾತನಾಡಬಾರದು. ಬಸವರಾಜ ಬೊಮ್ಮಾಯಿ ₹ 100 ಕೊಟ್ಟು ಗೆದ್ದಿಲ್ವಾ? ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು 26,000 ಮತಗಳಿಂದ. ಅಷ್ಟು ಪ್ರಮಾಣದ್ದು ಲೀಡ್ ಏನ್ರೀ? ಪ್ರಯತ್ನ ಪಟ್ಟಿದ್ದರೆ ಗೆಲ್ಲಬಹುದಿತ್ತಲ್ಲವೇ?

ಸಿದ್ದೇಶ್ವರ: ಎಲ್ಲರಿಗೂ ಗೊತ್ತು ಅದು ಲೀಡ್ ಅಲ್ಲ. ಗ್ರಹಚಾರ ನೆಟ್ಟಗಿಲ್ಲ ಅಷ್ಟೇ.

ಕಾರ್ಯಕರ್ತ: ಗ್ರಹಚಾರ ಅಲ್ಲ ರೀ, 4 ಬಾರಿ ಚುನಾವಣೆ ಮಾಡಿ ನಿಮ್ಮನ್ನು ಗೆಲ್ಲಿಸಿದ್ದೇವೆ. ಈ ಸಾರಿ ಮೋದಿ ನೋಡಿ ಓಟು ಹಾಕಿದ್ದಾರೆ. ಆದರೆ, ನೀವು ಒಂದು ವೋಟ್ಗೆ ₹ 500 ಫಿಕ್ಸ್ ಮಾಡಿದ್ರೆ, ಗೆದ್ದು ಪಟಾಕಿ ಹೊಡೆಯುತ್ತಿದ್ದೆವು.

ಜಿ.ಎಂ.ಸಿದ್ದೇಶ್ವರ: ಸುಮ್ಮನೆ ಮಾತನಾಡುತ್ತಿದ್ದೀಯಾ? ನನ್ನ ಮಗ ಮಾತನಾಡುತ್ತಾನೆ ಮಾತಾಡು.

ಅನಿತ್ಕುಮಾರ್: ನಿಮ್ಮೂರಲ್ಲಿ ಎಷ್ಟು ಲೀಡ್ ಕೊಟ್ಟಿದ್ದೀಯಾ ಹೇಳು?

ಕಾರ್ಯಕರ್ತ: 500ರಲ್ಲಿ 150 ವೋಟ್ ಲೀಡ್ ಕೊಟ್ಟಿದ್ದೇನೆ.

ಅನಿತ್ಕುಮಾರ್: ಕ್ಯಾಂಡಿಡೇಟ್ ಅಂದ್ರೆ, ವೋಟ್ ಹಾಕಿಸುವವನು ನಾನಾ?

ಕಾರ್ಯಕರ್ತ: ₹ 300 ಕೊಡುವ ಬದಲು ₹ 500 ಕೊಟ್ಟಿದ್ರೆ ಗೆಲ್ತಿದ್ರಿ.

ಅನಿತ್ಕುಮಾರ್: ದುಡ್ಡು ಹೊಡೆಯಬೇಕಾಗಿತ್ತಾ ನಾವು?

ಕಾರ್ಯಕರ್ತ: ನೀವು ಪ್ರಾಂಪ್ಟ್ ಆಗಿ ಇದ್ದೀರಾ, ಪ್ರಾಂಪ್ಟ್ ಇರುವುದಾದರೆ ಚುನಾವಣೆಗೆ ಏಕೆ ಹೋಗಬೇಕಿತ್ತು?

ಅನಿತ್ಕುಮಾರ್: ₹ 500 ಕೊಟ್ಟಿದ್ದ್ರೆ ಗೆಲ್ತಿದ್ರಿ ಅಂತೀರಿ. ಆದ್ರೆ, ಪಾರ್ಟಿಯಿಂದ ಫಂಡ್ ಕೊಟ್ಟಿಲ್ಲ.

ಬೇಕು ಅಂತಲೇ ರೆಕಾರ್ಡ್ ಮಾಡಿದ್ದಾರೆ. ಹಣ ಕೊಟ್ಟು ವೋಟು ಪಡೆಯಬೇಕಿತ್ತಾ. ನಾನು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಬೆಲೆ ಇಲ್ಲವಾ? ನನ್ನ ಹಾಗೂ ನರೇಂದ್ರ ಮೋದಿ ಅವರ ಸಾಧನೆಗೆ 6 ಲಕ್ಷ ಮತ ನೀಡಿದ್ದಾರೆ. ಸೋಲು–ಗೆಲುವು ಇದ್ದಿದ್ದೇ. ಇದೆ ಕೊನೆಯಲ್ಲ.
ಜಿ.ಎಂ. ಸಿದ್ದೇಶ್ವರ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.