ಕಿಕ್ಕೇರಿ: ಹೋಬಳಿ ಕೇಂದ್ರದ ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಇರುವುದರಿಂದ ಸೂಕ್ತ ಚಿಕಿತ್ಸೆ ಸಿಗದೇ ಕರು ಸಾವನ್ನಪ್ಪಿದ್ದು, ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು ಎಂದು ಪಟ್ಟಣದ ಪಶು ಆಸ್ಪತ್ರೆ ಮುಂದೆ ಸೋಮವಾರ ರೈತರು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದು, ರಾಸುಗಳಿಗೆ ರೋಗಬಾಧೆ ಕಾಣಿಸಿಕೊಂಡರೆ ಚಿಕಿತ್ಸೆ ಕೊಡಲು ವೈದ್ಯರೇ ಇಲ್ಲ. ತಾಲ್ಲೂಕಿನ ಬಲುದೊಡ್ಡ ಹೋಬಳಿ ಕೇಂದ್ರ ಇದಾಗಿದ್ದು, ಪಶು ಶುಶ್ರೂಷೆಗೆ ಪ್ರಭಾರಿ ವೈದ್ಯರಿದ್ದು, ವಾರದಲ್ಲಿ ಒಂದೆರಡು ದಿನ ಬಂದು ಹೋಗುತ್ತಾರೆ. ಹೀಗಾದರೆ ಜಾನುವಾರು ಗತಿ ಏನು ಎಂದು ಪ್ರಶ್ನಿಸಿದರು.

ಬೋರಾಪುರದ ರೈತ ವೆಂಕಟೇಶ್ ಅವರ ಎಚ್ಎಫ್ ಹಸುವಿನ ಕರುವಿಗೆ ಸೂಕ್ತ ಚಿಕಿತ್ಸೆ ಸಿಗದೆ ಸೋಮವಾರ ಅಸುನೀಗಿದ್ದು, ಇದಕ್ಕೆ ಹೊಣೆ ಯಾರು? 60ಕ್ಕೂ ಹೆಚ್ಚು ಹಳ್ಳಿ ಹೊಂದಿರುವ ಈ ಹೋಬಳಿ ಕೇಂದ್ರಕ್ಕೆ ಕಾಯಂ ಆಗಿ ಪಶು ವೈದ್ಯರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಯಿ ಸುರೇಶ್, ಮುಖಂಡರಾದ ಕೆ.ಕೆ. ಚಂದ್ರಶೇಖರ್, ರಘು, ನಿಂಗರಾಜು, ಕೆ.ಜಿ. ತಮ್ಮಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.