ಮೈಸೂರು: ‘ಬರವಣಿಗೆಯ ಕಲೆ ನಾವು ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ ಅಗತ್ಯವಾಗಿದೆ. ಆದ್ದರಿಂದ ಎಳವೆಯಿಂದಲೇ ಬರೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು’ ಎಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಸಲಹೆ ನೀಡಿದರು.

ನಗರದ ಪೂರ್ಣ ಚೇತನ ಶಾಲೆಯ ಮಕ್ಕಳು ಬರೆದು, ಸಂಪಾದಿಸಿರುವ ‘ಪಾಠಶಾಲಾ ಜೀವನ ಯಾತ್ರಾ’ ಪುಸ್ತಕವನ್ನು ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಕ್ಕಳಿಗೆ ಬರೆಯಲು ಒಂದು ವೇದಿಕೆ ಒದಗಿಸಿದರೆ, ಅವರ ಸೃಜನಾತ್ಮಕ ಆಲೋಚನೆಗಳನ್ನು ಅಕ್ಷರ ರೂಪಕ್ಕಿಳಿಸಲು ಸಹಾಯವಾಗುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್, ವಿಜ್ಞಾನ, ಹೀಗೆ... ಭವಿಷ್ಯದಲ್ಲಿ ಯಾವುದೇ ಉದ್ಯೋಗ ಆಯ್ದುಕೊಂಡರೂ ಬರವಣಿಗೆ ಕೌಶಲವು ಉಪಯೋಗಕ್ಕೆ ಬರುತ್ತದೆ’ ಎಂದು ತಿಳಿಸಿದರು.

ಶಾಲೆಯ ಸಿಇಒ ಬಿ.ದರ್ಶನ್ ರಾಜ್, ‘ಅಕ್ಷರಗಳ ಅದ್ಭುತ ಲೋಕವು ಮಕ್ಕಳ ಯೋಚನೆಯ ಪರಿಧಿ ವಿಸ್ತರಿಸುತ್ತದೆ. ಅವರನ್ನು ಭವಿಷ್ಯದಲ್ಲಿ ಹೆಚ್ಚು ಸೃಜನಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಶಾಲೆಯ 4ರಿಂದ 10ನೇ ತರಗತಿಯ 104 ವಿದ್ಯಾರ್ಥಿಗಳು ಸಣ್ಣ ಅನುಭವಗಳು, ಪ್ರವಾಸ, ಸೃಜನಶೀಲ ಆಲೋಚನೆಗಳು, ತಮ್ಮನ್ನು ಪ್ರಭಾವಿಸಿದ ಸಂಗತಿಗಳು-ವ್ಯಕ್ತಿಗಳ ಬಗ್ಗೆ ಬರೆದಿರುವ 189 ಲೇಖನಗಳನ್ನು ಒಳಗೊಂಡ ಪುಸ್ತಕ ಇದಾಗಿದೆ. ಇದಕ್ಕೆ ಐಎಸ್ಬಿಎನ್ (ಇಂಟರ್ನ್ಯಾಷನಲ್ ಸ್ಟಾಂಡರ್ಡ್ ಬುಕ್ ನಂಬರ್) ಸಿಕ್ಕಿದ್ದು, ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಈ ಸಂಖ್ಯೆ ದೊರೆತ ನಗರದ ಮೊಟ್ಟಮೊದಲ ಮಕ್ಕಳ ಪ್ರಕಟಣೆ ಇದಾಗಿದೆ’ ಎಂದು ದರ್ಶನ್ರಾಜ್ ಮಾಹಿತಿ ನೀಡಿದರು.

ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ‘ಶಾಲೆ ತನ್ನ ವಿದ್ಯಾರ್ಥಿಗಳ ಸೃಜನಾತ್ಮಕ ಯೋಚನೆಗಳಿಗೆ ಬೆಂಬಲವಾಗಿ ನಿಲ್ಲಲು ಈ ಪುಸ್ತಕ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ, ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಒತ್ತು ನೀಡುವ ಇನ್ನಷ್ಟು ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಲಾಗುವುದು’ ಎಂದರು.

ಪ್ರಾಂಶುಪಾಲೆ ಬಿ.ಪ್ರಿಯಾಂಕಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.