ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಬಿಜೆಪಿ ಹಾಗೂ ಯಡಿಯೂರಪ್ಪ ಅವರ ನಾಯಕತ್ವ. ರಾಜ್ಯದಲ್ಲಿ ಕುಮಾರಸ್ವಾಮಿಯನ್ನು ಗುರುತಿಸಿದ್ದೇ ಯಡಿಯೂರಪ್ಪ. ನಂತರ ನಮ್ಮ ನಡುವೆ ಭಿನ್ನಾಭಿಪ್ರಾಯ ಬಂದಿರಬಹುದು. ಈಗ ಎಲ್ಲಾ ಮರೆತು ಒಂದಾಗಿದ್ದೇವೆ
– ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ಆಣೆ ಪ್ರಮಾಣದ ಸವಾಲು
ಅಮಾಯಕರಿಗೆ ಗನ್ ತೋರಿಸಿ ಬೆದರಿಸಿ ಆಸ್ತಿ ಬರೆಯಿಸಿಕೊಂಡ ಡಿ.ಕೆ. ಶಿವಕುಮಾರ್ ತಮ್ಮ ಆಸ್ತಿಯನ್ನು ಎರಡು ಸಾವಿರ ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಅನಾಚಾರಗಳ ಬಗ್ಗೆ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ. ಬಿಜೆಪಿ ಹಗರಣಗಳ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು. ‘ನನ್ನ ಆಸ್ತಿ ಕುರಿತು ಶಿವಕುಮಾರ್ ಪ್ರಶ್ನಿಸುತ್ತಾರೆ. ಕೇತಗಾನಹಳ್ಳಿಯಲ್ಲಿ 20 ಟನ್ ಕೊಬ್ಬರಿ ಬೆಳೆದಿದ್ದೇನೆ. ಬಾಳೆ ಅಡಿಕೆಯಲ್ಲಿ ₹50 ಲಕ್ಷ ಸಂಪಾದಿಸಿದ್ದೇನೆ’ ಎಂದರು. ‘ಕೆಂಪೇಗೌಡರ ವಂಶಸ್ಥರು ಎಂದು ಡಿ.ಕೆ. ಸಹೋದರರು ಹೇಳಿಕೊಳ್ಳುತ್ತಾರೆ. ಇವರ ತಂದೆ ಕನಕಪುರದಲ್ಲಿ ಚಿನ್ನ ಅಳೆಯೋಕೆ ಹೋಗುತ್ತಿದ್ದರಂತೆ.ವಿಜಯನಗರದ ಕೃಷ್ಣದೇವರಾಯ ಇವರ ಬಳಿ ಬಂದು ಚಿನ್ನ ಖರೀದಿಸುತ್ತಿದ್ದರು ಎನಿಸುತ್ತದೆ’ ಎಂದು ವ್ಯಂಗ್ಯವಾಡಿದರು. ಆಗ ಜನರು ‘ಚಿನ್ನವಲ್ಲ ಕಡಲೆಕಾಯಿ ಅಳೆಯುತ್ತಿದ್ದರು’ ಎಂದು ಕೂಗಿದರು. ಅದಕ್ಕೆ ಎಚ್‌ಡಿಕೆ ‘ಇರಬಹುದು’ ಎಂದು ನಕ್ಕರು.