ಚನ್ನಪಟ್ಟಣ: ‘ಚನ್ನಪಟ್ಟಣ ಉಪ ಚುನಾವಣೆ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದ ಅಗ್ನಿಪರೀಕ್ಷೆ. ಇಲ್ಲಿ ನಿಖಿಲ್ ನೆಪ ಮಾತ್ರ’ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ತಾಲ್ಲೂಕಿನ ವಿವಿಧೆಡೆ ಭಾನುವಾರ ಪ್ರಚಾರ ನಡೆಸಿದ ಅವರು, ‘ನನಗೆ ಕುತಂತ್ರದ ರಾಜಕಾರಣ ಗೊತ್ತಿಲ್ಲ. ಕಳೆದ ಎರಡು ಚುನಾವಣೆಯಲ್ಲಿ ಸೋತು ಚುನಾವಣೆ ಸಹವಾಸವೇ ಬೇಡ ಎನ್ನುತ್ತಿದ್ದೆ. ಅನಿವಾರ್ಯವಾಗಿ ನಿಮ್ಮಗಳ ಒತ್ತಡಕ್ಕಾಗಿ ಸ್ಪರ್ಧಿಸಿದ್ದೇನೆ. ನೀವೇ ಕೈ ಹಿಡಿದು ಮುನ್ನಡೆಸಬೇಕು’ ಎಂದು ಮನವಿ ಮಾಡಿದರು.

‘ನಿಮಗೆ ಕೈ ಜೋಡಿಸಿ ಪಾದ ಮುಟ್ಟಿ ಬೇಡಿಕೊಳ್ಳುವೆ. ನನಗೊಂದು ಅವಕಾಶ ಕೊಡಿ. ಕೊನೆಯ ಉಸಿರಿರುವವರೆಗೆ ನಿಮ್ಮ ಜೊತೆಗಿರುತ್ತೇನೆ’ ಎಂದು ಬೇಡಿಕೊಂಡರು.

‘ದೇವೇಗೌಡರ ಕುಟುಂಬದವರು ಕಣ್ಣೀರು ಹಾಕುತ್ತಾರೆ ಎಂದು ಹೇಳುತ್ತಾರೆ. ನಾವು ಕಣ್ಣೀರು ಹಾಕೋದು ಬಡವರು ಮತ್ತು ರೈತರಿಗಾಗಿ. ನಾವು ಈ ನಾಡಿಗಾಗಿಯೇ ಕಣ್ಣೀರು ಹಾಕುತ್ತೇವೆಯೇ ಹೊರತು ಸ್ವಂತಕ್ಕಲ್ಲ. ಜನರ ಕಷ್ಟಕ್ಕೆ ಮಿಡಿಯುವವರಿಗೆ ಸಹಜವಾಗಿಯೇ ಕಣ್ಣೀರು ಬರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.