ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ - 2024 | ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಳ ಏಟಿನ ಮಾತು

ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ಲೆಕ್ಕಾಚಾರ
Published : 14 ಏಪ್ರಿಲ್ 2024, 4:46 IST
Last Updated : 14 ಏಪ್ರಿಲ್ 2024, 4:46 IST
ಫಾಲೋ ಮಾಡಿ
Comments
ವಿಶ್ವನಾಥ್ ಮುನಿಸು; ಕಾಂಗ್ರೆಸ್ ಆಸೆಗಣ್ಣು
ಡಾ.ಕೆ.ಸುಧಾಕರ್ ಅಭ್ಯರ್ಥಿಯಾದ ನಂತರ ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ ಅವರು ಮಾತುಗಳು ತೀವ್ರ ಚರ್ಚೆಗೆ ಕಾರಣವಾಗಿತ್ತು.  ಸುಧಾಕರ್ ವಿಶ್ವನಾಥ್ ಅವರ ಮನೆ ಬಳಿ ಹೋಗಿದ್ದರೂ ಭೇಟಿ ಸಾಧ್ಯವಾಗಿರಲಿಲ್ಲ. ನಂತರ ವರಿಷ್ಠರ ಸಮ್ಮುಖದಲ್ಲಿ ಸಂಧಾನ ನಡೆಯಿತು. ಪರಸ್ಪರ ಕೈ ಕುಲುಕಿದ್ದರು. ಈ ಬೆಳವಣಿಗೆಗಳು ನಡೆದು ಸ್ವಲ್ಪ ದಿನಕ್ಕೆ ವಿಶ್ವನಾಥ್ ‘ನಾವು ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತೇವೆ. ಸುಧಾಕರ್‌ಗೆ ನಮ್ಮ ಮೇಲೆ ಅನುಮಾನ ಬೇಡ’ ಎಂದರು. ಮತ್ತೆ ಕಾರ್ಯಕರ್ತರಲ್ಲಿ ಗೊಂದಲಗಳು ಮೂಡಿದವು.  ಈ ಹಿಂದಿನ ಚುನಾವಣೆಗಳಲ್ಲಿ ವಿಶ್ವನಾಥ್ ಅವರನ್ನೇ ಬಿಜೆಪಿ  ಚಿಕ್ಕಬಳ್ಳಾ‍ಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರಿಗೆ ಯಲಹಂಕ ಕ್ಷೇತ್ರದಲ್ಲಿ 1.50 ಲಕ್ಷ ಮತಗಳು ದೊರೆತಿದ್ದವು. 75 ಸಾವಿತ ಮತಗಳ ಮುನ್ನಡೆ ಪಡೆದಿದ್ದರು. ಸುಧಾಕರ್ ಮತ್ತು ವಿಶ್ವನಾಥ್ ಒಗ್ಗೂಡಿ ಯಲಹಂಕದಲ್ಲಿ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ನಾಯಕರ ನಡುವಿನ ರಾಜಕೀಯ ಚರ್ಚೆ ವೇಳೆ ವಿಶ್ವನಾಥ್ ಮುನಿಸಿನ ಬಗ್ಗೆಯೂ ಪ್ರಸ್ತಾಪವಾಗುತ್ತಿದೆ. ಯಲಹಂಕದಲ್ಲಿ ಬಿಜೆಪಿಗೆ ಒಳ ಏಟು ಬೀಳಲಿದೆ ಎನ್ನುವ ನಂಬಿಕೆ ಕಾಂಗ್ರೆಸ್‌ನವರದ್ದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT