‘ಚಂದನವನದ ಮಹಾಲಕ್ಷ್ಮಿ’ ನಟಿ ಅದಿತಿ ಪ್ರಭುದೇವ ತಾಯಿಯಾಗುತ್ತಿದ್ದಾರೆ. ತಾವು ಗರ್ಭಿಣಿಯಾಗಿರುವ ವಿಷಯವನ್ನು ಸೋಮವಾರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದರ ಮೂಲಕ ತಿಳಿಸಿರುವ ಅದಿತಿ, ‘2024ಕ್ಕೆ ನಾನು ಅಮ್ಮ’ ಎಂದಿದ್ದಾರೆ.

ಉದ್ಯಮಿ ಯಶಸ್ ಜೊತೆಗೆ ಅದಿತಿ ಅವರ ಮದುವೆ 2022ರ ನವೆಂಬರ್ನಲ್ಲಿ ನಡೆದಿತ್ತು. ದಾವಣಗೆರೆಯ ಅದಿತಿ ಕಿರುತೆರೆಯಿಂದ ‘ಧೈರ್ಯಂ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಹೆಜ್ಜೆ ಇಟ್ಟವರು. ‘ಸಂಬಂಧಗಳಲ್ಲಿ ಶ್ರೇಷ್ಠವಾದದ್ದು, ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ ‘ಅಮ್ಮ’. ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ‘ಅಮ್ಮ’. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ‘ಅಮ್ಮ’. 2024ಕ್ಕೆ ನಾನು ಅಮ್ಮ’ ಎಂದು ಅದಿತಿ ಉಲ್ಲೇಖಿಸಿದ್ದಾರೆ.

ಕಳೆದ ಎರಡು ಮೂರು ವರ್ಷಗಳಲ್ಲಿ ಅತಿ ಹೆಚ್ಚು ಸಿನಿಮಾ ಬ್ಯಾಂಕ್ ಹೊಂದಿದ್ದ ನಟಿಯರ ಪೈಕಿ ಅದಿತಿ ಕೂಡಾ ಒಬ್ಬರಾಗಿದ್ದರು. ಎಂ.ಸಿ. ವಿಜಯ್ ಪ್ರಸಾದ್ ನಿರ್ದೇಶನದ ‘ತೋತಾಪುರಿ’ ಸರಣಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ತ್ರಿಬಲ್ ರೈಡಿಂಗ್’, ‘ಆನ’, ‘Once upon a time in ಜಮಾಲಿಗುಡ್ಡ’ ಹೀಗೆ ಅದಿತಿ ಅವರ ಸಾಲು ಸಾಲು ಸಿನಿಮಾಗಳು ಕಳೆದೆರಡು ವರ್ಷದಲ್ಲಿ ಬಿಡುಗಡೆ ಕಂಡಿವೆ. ‘ಅದೊಂದಿತ್ತು ಕಾಲ’, ‘ಮಾಫಿಯಾ’, ‘ಮ್ಯಾಟ್ನಿ’, ‘ಛೂ ಮಂತರ್’ ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ. ಸಿನಿಮಾವಷ್ಟೇ ಅಲ್ಲದೆ ವೆಬ್ ಸರಣಿಯಲ್ಲೂ ಅದಿತಿ ನಟಿಸಿದ್ದು, ‘ಲವ್ ಯು ಅಭಿ’ ಎಂಬ ಸರಣಿ ಇತ್ತೀಚೆಗಷ್ಟೇ ತೆರೆಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.