ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಹೊಂದಿಕೊಳ್ಳುತ್ತಿದ್ದಾರೆ. ಟಾಸ್ಕ್, ನಾಮಿನೇಷನ್ಗಳ ನಡುವೆ ಸದಸ್ಯರು ತಮಾಷೆ, ನಟನೆಯಿಂದ ಮನರಂಜನೆ ನೀಡುತ್ತಿದ್ದಾರೆ.

ಸಾಧಿಸುವ ಛಲದಲ್ಲಿ ಉದ್ದೇಶವನ್ನು ಮರೆಯುವುದು ಮೃಗೀಯ ಪೃವತ್ತಿ. ಈ ಮೃಗೀಯ ಪ್ರವೃತ್ತಿಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಮನುಷ್ಯರಾಗಬೇಕೆಂಬ ಸಂದೇಶದೊಂದಿಗೆ ಬಿಗ್ ಬಾಸ್ ಚೆಂಡನ್ನು ರಕ್ಷಿಸಿಕೊಳ್ಳುವ ಟಾಸ್ಕ್ ನೀಡಿದ್ದಾರೆ.

ಈ ಆಟದ ವೇಳೆ ಸ್ಪರ್ಧಿಗಳು ಗುದ್ದಾಡಿಕೊಂಡಿದ್ದು ಶಿಶಿರ್ ಅಸ್ವಸ್ಥರಾಗಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಶಿಶಿರ್ ಪ್ರಜ್ಞೆ ತಪ್ಪಿ ಬೀಳುವ ದೃಶ್ಯವನ್ನು ತೋರಿಸಲಾಗಿದೆ.

ಇನ್ನೊಂದೆಡೆ, ಧನರಾಜ್ ಅವರು ಮುಂಗಾರು ಮಳೆ ಗಣೇಶ್ ಅವರಂತೆ ನಟಿಸಿ, ಮನೆಯ ಸದಸ್ಯರ, ವೀಕ್ಷಕರ ಮನ ಗೆದ್ದಿದ್ದಾರೆ.

ಬಿಗ್ಬಾಸ್ ಅನ್ನೇ ಎಕ್ಸ್ಪೋಸ್ ಮಾಡುತ್ತೇನೆ ಎಂದು ಗುಡುಗುತ್ತಿದ್ದ ಜಗದೀಶ್ ಮನೆ ಸದಸ್ಯರೊಂದಿಗೆ ತಮ್ಮ ಜೀವನ ಕಥೆಯನ್ನು ಹಂಚಿಕೊಂಡಿದ್ದಾರೆ. ಜಗದೀಶ್ ಮಾತಿಗೆ ಕಿವಿಯಾದ ಐಶ್ವರ್ಯಾ ಅವರು, ಮನಬಿಚ್ಚಿ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.