ಲಖನೌ: ‘ನೀನು ಈ ಕೆರೆಯಲ್ಲಿ ಹಾರಿ ಮೇಲೆ ಬಂದರೆ ನಿನಗೆ ಎರಡು ಸಾವಿರ ರೂಪಾಯಿಗಳನ್ನು ನೀಡುತ್ತೇನೆ’ ಎಂಬ ಸ್ನೇಹಿತರ ಷರತ್ತಿಗೆ ಒಪ್ಪಿಕೊಂಡ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬಡ್ಕಾ ಗಾಂವ್ನಲ್ಲಿ ನಡೆದಿದೆ.

ಅನಿಲ್ ಕುಮಾರ್ ತನ್ನ ನಾಲ್ವರು ಸ್ನೇಹಿತರ ಜೊತೆಗೂಡಿ ಕೆರೆಯ ಸಮೀಪ ಹೋಗಿದ್ದ. ಕೆರೆ ಬಹಳ ಆಳವಿರುವುದು ಅವರಿಗೆಲ್ಲಾ ತಿಳಿದಿತ್ತು. ಮಾತನಾಡುತ್ತಾ ಗೆಳೆಯರ ಮಧ್ಯೆ ಪಂದ್ಯ ಏರ್ಪಟ್ಟಿತು. ಅದರ ಪ್ರಕಾರ, ಆ ಕೆರೆಗೆ ಯಾರು ಹಾರುತ್ತಾರೋ ಅವರಿಗೆ ₹2ಸಾವಿರ ಬಹುಮಾನ ಎಂದು. ಉಳಿದ ಸ್ನೇಹಿತರು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ನಂತರ ಸ್ನೇಹಿತರು ಅನಿಲ್ಗೆ ಹಾರುವ ಬಗ್ಗೆ ಕೇಳಿದಾಗ ಆತ ಧೈರ್ಯದಿಂದ ಅದಕ್ಕೆ ಒಪ್ಪಿಕೊಂಡ ತಾನು ಕೆರೆಗೆ ಹಾರಿ ವಾಪಸ್ ಬರುತ್ತೇನೆ. ನಂತರ ತನಗೆ ₹2 ಸಾವಿರ ರೂಪಾಯಿ ನೀಡಬೇಕು ಎಂದು ಹೇಳಿದ. ಇದಕ್ಕೆ ಸ್ನೇಹಿತರೂ ಒಪ್ಪಿದರು.

‘ಈಜನ್ನು ಚೆನ್ನಾಗಿ ಬಲ್ಲ ಅನಿಲ್, ತನಗೆ ಏನೂ ಆಗುವುದಿಲ್ಲ ಎಂಬ ಧೈರ್ಯದ ಮೇಲೆ ಹಾರಿದ. ಆದರೆ ಅವನ ಅದೃಷ್ಟ ಕೈಕೊಟ್ಟಿತ್ತು. ಕೆರೆಯ ಮಧ್ಯೆ ಹೋಗುವಷ್ಟರದಲ್ಲಿ ಸುಳಿಗೆ ಸಿಲುಕಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ’ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಅನಿಲ್ ಮುಳುಗುತ್ತಿದ್ದುದನ್ನು ಸ್ನೇಹಿತರು ನೋಡುತ್ತಿದ್ದರೂ ಅವರು ಅವನ ಸಹಾಯಕ್ಕೆ ಬರಲಿಲ್ಲ, ಆದರೆ ಗಾಬರಿಯಿಂದ ಅವರು ಕಿರುಚಾಡುತ್ತಾ ಅಲ್ಲಿಂದ ಓಡಿ ಹೋದರು. ಕಿರುಚಾಟ ಕೇಳಿ ಗ್ರಾಮಸ್ಥರು ಓದಿಬಂದರೂ ಆ ಕೆರೆಗೆ ಹಾರುವ ಧೈರ್ಯ ಯಾರೂ ಮಾಡಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಸ್ನೇಹಿತ ತಪ್ಪಿಸಿಕೊಂಡಿದ್ದಾನೆ. ಎಲ್ಲ ಸ್ನೇಹಿತರೂ ಪಾನಮತ್ತರಾಗಿದ್ದರು. ಆದ್ದರಿಂದ ತಾವು ಏನು ಪಂದ್ಯ ಕಟ್ಟುತ್ತಿದ್ದೇವೆ ಎಂಬ ಬಗ್ಗೆ ಅವರಿಗೆ ಅರಿವೇ ಇರಲಿಲ್ಲ. ಒಂದು ವೇಳೆ ಆತ ಹಾರಿ ವಾಪಸ್ ಬಂದರೂ ಅವನಿಗೆ ₹2ಸಾವಿರ ರೂಪಾಯಿ ಸಿಗುವ ಭರವಸೆ ಇರಲಿಲ್ಲ’ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.