ಲಾಹೋರ್: ವಿಶ್ವದ ಅತ್ಯಂತ ಮಾಲಿನ್ಯ ನಗರ ಪಟ್ಟಿಯನ್ನು ಎಕ್ಯೂಐ ಬಿಡುಗಡೆ ಮಾಡಿದ್ದು, ಪಾಕಿಸ್ತಾನದ ಪೇಶಾವರ ಹಾಗೂ ಭಾರತದ ದೆಹಲಿ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ. ಆಸ್ಟ್ರೇಲಿಯಾದ ಮೌಂಟ್ ಇಸಾ ವಿಶ್ವದ ಅತ್ಯಂತ ಮಾಲಿನ್ಯ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮಾಲಿನ್ಯ ನಗರ ಪಟ್ಟಿಯನ್ನು ಹೊತ್ತ ವಿಶ್ವದ ಪ್ರಮುಖ ನಗರಗಳ ವಾಯು ಗುಣಮಟ್ಟ ಸೂಚ್ಯಂಕ ಹೀಗಿದೆ..

1. ಮೌಂಟ್ ಇಸಾ, ಆಸ್ಟ್ರೇಲಿಯಾ- 358

2. ಪೇಶಾವರ, ಪಾಕಿಸ್ತಾನ-304

3. ನವದೆಹಲಿ, ಭಾರತ- 296

4. ಕಲ್ಯಾಣ್ ನಗರ(ಮಹಾರಾಷ್ಟ್ರ), ಭಾರತ- 278

5. ಬೆಹಬಹಾನ್, ಇರಾನ್-258

6. ಸೋನಿಪತ್(ಹರಿಯಾಣ), ಭಾರತ- 253

7. ಟೀರಾ , ಇಸ್ರೇಲ್-253

8. ಪಣಜಿ(ಗೋವಾ), ಭಾರತ-247

9. ಕರ್ಚೋರಮ್(ಗೋವಾ), ಭಾರತ-246

10. ರೋಹ್ಟಕ್(ಹರಿಯಾಣ), ಭಾರತ- 244

https://www.aqi.in/in/real-time-most-polluted-city-ranking

ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹೀಗಿದೆ..

ಪೇಶಾವರ– 194

ಲಾಹೋರ್–177

ಇಸ್ಲಾಮಾಬಾದ್– 154

ಶಕರ್ಗಢ– 151

ಮುರ್ರೆ– 91

ಕರಾಚಿ– 90

https://www.aqi.in/in/dashboard/pakistan/khyber-pakhtunkhwa/peshawar

ಕೃಷಿ ತ್ಯಾಜ್ಯ ಸುಡುವಿಕೆ ಮತ್ತು ಕೈಗಾರಿಕೆಗಳು ಹೊರಸೂಸುವ ಹೊಗೆ ಇದಕ್ಕೆ ಮುಖ್ಯ ಕಾರಣ. ಈ ಆತಂಕಕಾರಿ ಬೆಳವಣಿಗೆಯನ್ನು ನಿಯಂತ್ರಿಸಲು ಪಾಕಿಸ್ತಾನದ ಪಂಜಾಬ್ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

ದಟ್ಟ ಹೊಗೆಯು ನಗರದ ನಿವಾಸಿಗಳಲ್ಲಿ ಕೆಮ್ಮು, ಉಸಿರಾಟದ ತೊಂದರೆ, ಕಣ್ಣು ಹಾಗೂ ಮತ್ತು ಚರ್ಮದ ಸೋಂಕುಗಳು ಸೇರಿದಂತೆ ವ್ಯಾಪಕವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ವರದಿಯಾಗಿದೆ.

ದೇಶದ(ಪಾಕಿಸ್ತಾನ) ಹಲವು ನಗರಗಳು ವಿಶ್ವದ ಕಲುಷಿತ ನಗರವೆಂಬ ಹಣೆಪಟ್ಟಿ ಹೊತ್ತಿವೆ. ಇದನ್ನು ಪರಿಹರಿಸಲು ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಲಾಹೋರ್ ನಗರದಲ್ಲಿ ಕೃತಕ ಮಳೆ ಸುರಿಸಲು ಯೋಜಿಸುತ್ತಿದ್ದೇವೆ ಎಂದು ಪಂಜಾಬ್ ಮಾಹಿತಿ ಸಚಿವ ಅಜ್ಮಾ ಬೊಖಾರಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ಸಂಸ್ಥೆಯು ಪ್ರಕಟಿಸಿರುವ ಪಟ್ಟಿಯಲ್ಲಿ ಭಾರತದಲ್ಲಿ ಅತ್ಯಂತ ಮಾಲಿನ್ಯ ನಗರಗಳಲ್ಲಿ ದೆಹಲಿ, ಉತ್ತರ ಪ್ರದೇಶ ಹಾಗೂ ಹರಿಯಾಣದ ನಗರಗಳೇ ಅಗ್ರ ಪಟ್ಟಿಯಲ್ಲಿವೆ.

ಕಲ್ಯಾಣ್ ನಗರ(ಮಹಾರಾಷ್ಟ್ರ)

ನವದೆಹಲಿ

ರೋಹ್ಟಕ್ (ಹರಿಯಾಣ)

ಸೋನಿಪತ್ (ಹರಿಯಾಣ)

ಚಂಡೀಗಢ

ಫರಿದಾಬಾದ್(ದೆಹಲಿ)

ಗಾಜಿಯಾಬಾದ್ (ಉತ್ತರ ಪ್ರದೇಶ)

ಗುರ್ಗಾಂವ್(ದೆಹಲಿ)

ಜಲಂಧರ್ (ಪಂಜಾಬ್)

ಹಿಸಾರ್(ಹರಿಯಾಣ)

ಏನಿದು ಎಕ್ಯೂಐ

ಎಕ್ಯೂಐ ಎಂಬುದು ಗಾಳಿಯಲ್ಲಿನ ವಿವಿಧ ಮಾಲಿನ್ಯಕಾರಕಗಳ ಸಾಂದ್ರತೆಯ ಅಳತೆಯಾಗಿದೆ. ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, 0 ಮತ್ತು 50 ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತಿ ಕಳಪೆ’, ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.
.ವಿಶ್ವದ ಅತಿ ಹೆಚ್ಚು ಮಾಲಿನ್ಯ ನಗರ ದೆಹಲಿ: ಷಿಕಾಗೊ ವಿವಿ ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.