ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ: 2ನೇ ಮದುವೆಗೆ ಸರ್ಕಾರಿ ನೌಕರರಿಗೆ ಪೂರ್ವಾನುಮತಿ ಕಡ್ಡಾಯ- ಹಿಮಂತಾ

Published : 27 ಅಕ್ಟೋಬರ್ 2023, 14:26 IST
Last Updated : 27 ಅಕ್ಟೋಬರ್ 2023, 14:26 IST
ಫಾಲೋ ಮಾಡಿ
Comments

ಗುವಾಹಟಿ (ಪಿಟಿಐ): ‘ತಮ್ಮ ಧರ್ಮದಲ್ಲಿ ಅವಕಾಶ ಇದ್ದರೂ ರಾಜ್ಯದ ಸರ್ಕಾರಿ ನೌಕರರು ಎರಡನೇ ಮದುವೆಯಾಗುವ ಪೂರ್ವದಲ್ಲಿ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಶರ್ಮಾ ಶುಕ್ರವಾರ ಹೇಳಿದ್ದಾರೆ.

ಸಂಗಾತಿಯು ಜೀವಂತವಿದ್ದಾಗಲೇ ಸರ್ಕಾರಿ ನೌಕರರು ಎರಡನೇ ಮದುವೆಯಾಗುವುದು ನಿಷಿದ್ಧ. ಈ ನಿಯಮವನ್ನು ಮೀರಿದರೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ.

‘ಇದು, ಹಳೆಯ ಆದೇಶವಾಗಿದೆ. ರಾಜ್ಯ ಸರ್ಕಾರದ ಸೇವಾ ನಿಯಮಗಳ ಪ್ರಕಾರ, ನೌಕರರು ಎರಡನೇ ಮದುವೆಯಾಗಲು ಅವಕಾಶ ಇರುವುದಿಲ್ಲ. ಒಂದು ವೇಳೆ ತಮ್ಮ ಧರ್ಮದಲ್ಲಿ ಎರಡನೇ ಮದುವೆಗೆ ಅವಕಾಶವಿದ್ದರೂ, ಸರ್ಕಾರದ ಪೂರ್ವಾನುಮತಿ ಅಗತ್ಯ. ಸರ್ಕಾರ ಅನುಮತಿ ನೀಡಬಹುದು ಅಥವಾ ನೀಡದೆಯೇ ಇರಬಹುದು’ ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.

‘ನೌಕರನ ಸಾವಿನ ಬಳಿಕ ಆತನ ದ್ವಿಪತ್ನಿಯರು ಪಿಂಚಣಿಗೆ ಜಗಳವಾಡುವ ಪ್ರಕರಣಗಳು ಆಗಾಗ್ಗೆ ಬರುತ್ತಿರುತ್ತವೆ. ಇಂತಹ ವಿವಾದ ಬಗೆಹರಿಸುವುದು ಕಷ್ಟಕರ. ಕೆಲ ವಿಧವೆಯರು ವಿವಾದದ ಕಾರಣದಿಂದ ಸೌಲಭ್ಯ ವಂಚಿತರಾಗುತ್ತಾರೆ. ಈ ನಿಯಮ ಹಿಂದೆಯೂ ಇತ್ತು. ಆದರೆ, ಜಾರಿಯಾಗಿರಲಿಲ್ಲ. ಈಗ ನಾವು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ವಿವರಿಸಿದರು.

ಈ ನಿಯಮವನ್ನು ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ರೂಪಿಸಿತ್ತು. ಆದರೆ, ಇದಕ್ಕೆ ಆದೇಶವಾಗಿ ಜಾರಿಗೊಳಿಸಿದ್ದು ಈ ಮೊದಲು ಜಾರಿಯಲ್ಲಿದ್ದ ಕಾಂಗ್ರೆಸ್ ಪಕ್ಷದ ಸರ್ಕಾರ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT