ಲಖನೌ: ಕೋವಿಶಿಲ್ಡ್ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ಲಸಿಕೆ ತಯಾರಿಕಾ ಕಂಪನಿಗಳಿಂದ ರಾಜಕೀಯ ದೇಣಿಗೆ ಪಡೆಯಲು ಬಿಜೆಪಿ ಜನರ ಜೀವವನ್ನೇ ಅಡವಿಟ್ಟಿತು’ ಎಂದು ಕಿಡಿಕಾರಿದ್ದಾರೆ.
.‘ಕೋವಿಶೀಲ್ಡ್ ಲಸಿಕೆಯಿಂದ ಪುರುಷ ಫಲವತ್ತತೆಗೆ ತೊಂದರೆ ಇಲ್ಲ’.
ಈ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಅವರು, ಇಂಥ ಮಾರಕ ಔಷಧಗಳಿಗೆ ಅನುಮತಿ ನೀಡುವ ಮೂಲಕ ಕೊಲೆ ಸಂಚು ಹೂಡಲಾಗಿದೆ. ಇದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
.ತಕ್ಷಣವೇ ಉಚಿತ ಕೋವಿಶೀಲ್ಡ್ ಲಸಿಕೆ ವಿತರಿಸಿ: ಎಸ್ಐಐ ಒತ್ತಾಯ.
ಸುಮಾರು 80 ಕೋಟಿ ಭಾರತೀಯರಿಗೆ ಕೋವಿಶಿಲ್ಡ್ ಲಸಿಕೆ ನೀಡಲಾಗಿದೆ. ಪ್ರತಿಯೊಬ್ಬರಿಗೆ 2 ಡೋಸ್ ನೀಡಲಾಗಿದೆ. ಲಸಿಕೆಯಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ತಯಾರಕ ಕಂಪನಿ ಹೇಳಿದೆ. ಲಸಿಕೆಯ ಅಡ್ಡಪರಿಣಾಮದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಹಾಗೂ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಭಯ ವ್ಯಕ್ತಪಡಿಸಿದವರ ಅನುಮಾನಗಳು ಮತ್ತು ಭಯಗಳು ಈಗ ನಿಜ ಎಂದು ಸಾಬೀತಾಗಿದೆ’ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಜೀವದ ಜೊತೆ ಆಟವಾಡಿದರನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
.Covishield ಲಸಿಕೆಯ ಅಡ್ಡ ಪರಿಣಾಮ: ಪರಿಶೀಲನೆಗೆ ದೆಹಲಿ ಆರೋಗ್ಯ ಸಚಿವ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.