ಚೆನ್ನೈ: ತಮಿಳುನಾಡಿನ ಖ್ಯಾತ ನಟ, ಡಿಎಂಡಿಕೆ ಸಂಸ್ಥಾಪಕ ವಿಜಯಕಾಂತ್ ಅವರು ಇಂದು ಮೃತಪಟ್ಟಿದ್ದು, ನೆಚ್ಚಿನ ನಾಯಕನ ಅಗಲಿಕೆಗೆ ಅಭಿಮಾನಿಗಳು ಕಣ್ಣೀರಾದರು.

ನಟನ ಪಾರ್ಥಿವ ಶರೀರವನ್ನು ಚೆನ್ನೈನ ಕೊಯಂಬೀಡುನಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಆವರಣದಲ್ಲಿ ಇರಿಸಿದ್ದು, ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಸ್ಥಳದತ್ತ ಧಾವಿಸುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ನಟ ರಜನಿಕಾಂತ್, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವಾರು ಗಣ್ಯರು ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಪತ್ನಿ ಪ್ರೇಮಲತಾ ಅವರಿಗೆ ಸಾಂತ್ವನ ಹೇಳಿದ್ದಾರೆ.

ಶುಕ್ರವಾರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಸಲು ಕುಟುಂಬ ನಿರ್ಧರಿಸಿದೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ವಿಜಯಕಾಂತ್ ಅವರನ್ನು ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಕೋವಿಡ್ ಕೂಡ ದೃಡಪಟ್ಟಿತ್ತು. ಐಸಿಯುನಲ್ಲಿ ಇರಿಸಿ ಚಿಕಿತ್ಸೆಯನ್ನೂ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧರಾದರು.
.Captain Vijayakanth: ನಟ, DMDK ಪಕ್ಷದ ನಾಯಕ 'ಕ್ಯಾಪ್ಟನ್' ವಿಜಯಕಾಂತ್ ನಿಧನ.
'ಇಳಮೈ’ ಸಿನಿಮಾದ ಮೂಲಕ ಸಿನಿ ಜೀವನ ಪ್ರಾರಂಭಿಸಿದ್ದ ಅವರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ‘ಸಗಪ್ತಂ’ ಅವರ ಅಭಿನಯದ ಕೊನೆಯ ಸಿನಿಮಾವಾಗಿದೆ. 2005ರಲ್ಲಿ ಡಿಎಂಕೆ ಮತ್ತು ಎಐಡಿಎಂಕೆಗೆ ಪರ್ಯಾಯವಾಗಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷವನ್ನು ಸ್ಥಾಪನೆ ಮಾಡಿದ್ದರು.
.ನಟನೆ, ರಾಜಕೀಯದಲ್ಲೂ ಮಿಂಚಿ ಮರೆಯಾದ ‘ಕ್ಯಾಪ್ಟನ್’ ವಿಜಯಕಾಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.