ಶ್ರೀನಗರ: ಜಮ್ಮು ಪ್ರದೇಶದ ಚಾಂಬ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಸತೀಶ್ ಶರ್ಮಾ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಈ ಮೂಲಕ ಜಮ್ಮು ಭಾಗದ ಏಕೈಕ ಸಚಿವರಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸತೀಶ್ ಶರ್ಮಾ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿತು. ಇದರಿಂದ ಬಂಡಾಯವೆದ್ದು ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯ ಸಾಧಿಸಿದ್ದರು. ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಜೀವ್ ಶರ್ಮಾ ಅವರನ್ನು 7,000 ಮತಗಳಿಂದ ಸೋಲಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದ್ದರು.

ಜಮ್ಮು ಪ್ರದೇಶದಲ್ಲಿ ಬಿಜೆಪಿ 10 ಸ್ಥಾನಗಳನ್ನು ಗೆದ್ದುಕೊಂಡಿದೆ. ಶರ್ಮಾ ಏಕೈಕ ಬಿಜೆಪಿಯೇತರ ಸದಸ್ಯರಾಗಿದ್ದು, ಸರ್ಕಾರದ ಭಾಗವಾಗಿದ್ದಾರೆ.

ನಿನ್ನೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಶರ್ಮಾ, ಜಮ್ಮು ಭಾಗಕ್ಕೆ ಸಚಿವ ಸ್ಥಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

‘ನನಗೆ ಮಾತಾ ರಾಣಿ ಆಶೀರ್ವಾದ ನೀಡಿದ್ದಾರೆ. ಜನರಿಗೆ ಮತ್ತು ಓಮರ್ ಅಬ್ದುಲ್ಲಾ ಜೀ ಅವರಿಗೆ ಧನ್ಯವಾದಗಳು, ಜಮ್ಮು ಪ್ರದೇಶಕ್ಕೆ ನಿರೀಕ್ಷೆಗಿಂತ ಹೆಚ್ಚು ಕೆಲಸ ಮಾಡುವುದಾಗಿ ಶರ್ಮಾ ಹೇಳಿದರು.
.ಜಮ್ಮು-ಕಾಶ್ಮೀರ | ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ಮರುಸ್ಥಾಪನೆ: ಒಮರ್ ಅಬ್ದುಲ್ಲಾ.ಮತಗಟ್ಟೆ ಸಮೀಕ್ಷೆಗಳು ಕೇವಲ 'ಟೈಮ್ ಪಾಸ್' ಎಂದ ಒಮರ್ ಅಬ್ದುಲ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.