ಕಾಸರಗೋಡು (ಕೇರಳ): ಮದರಸಾದ ಶಿಕ್ಷಕರೊಬ್ಬರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರ್ಎಸ್ಎಸ್ನ ಮೂವರು ಕಾರ್ಯಕರ್ತರನ್ನು ಇಲ್ಲಿನ ನ್ಯಾಯಾಲಯ ಖುಲಾಸೆಗೊಳಿಸಿದೆ.

ಕಾಸರಗೋಡು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಕೆ ಬಾಲಕೃಷ್ಣನ್ ಅವರು ಕೇಳುಗುಡ್ಡೆ ಮೂಲದ ಮೂವರು ಆರೋಪಿಗಳಾದ ಅಖಿಲೇಶ್, ಜಿತಿನ್ ಮತ್ತು ಆಜೇಶ್ ಅವರನ್ನು ಖುಲಾಸೆಗೊಳಿಸಿದ್ದಾರೆ.

ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ನೀಡದ ಕಾರಣ ಮೂವರು ಆರೋಪಿಗಳು ಏಳು ವರ್ಷದಿಂದ ಜೈಲಿನಲ್ಲಿದ್ದರು. ಪ್ರಕರಣದ ವಿವರವಾದ ತೀರ್ಪು ಇನ್ನೂ ಲಭ್ಯವಾಗಿಲ್ಲ

ಚೂರಿ ಮದರಸಾದ ಶಿಕ್ಷಕ ಹಾಗೂ ಸ್ಥಳೀಯ ಮೋಝಿನ್ (ಮಸೀದಿಯಲ್ಲಿ ಆಜಾನ್ ಕೂಗುತ್ತಿದ್ದ ವ್ಯಕ್ತಿ) ಮೊಹಮ್ಮದ್ ರಿಯಾಸ್ ಮೌಲವಿ (34) ಅವರನ್ನು 2017ರ ಮಾ.20ರಂದು ಹತ್ಯೆ ಮಾಡಲಾಗಿತ್ತು. ಚೂರಿಯ ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಅವರ ಕೊಠಡಿಗೆ ನುಗ್ಗಿದ್ದ ಗುಂಪೊಂದು ಕತ್ತು ಸೀಳಿ ಹತ್ಯೆಗೈದಿತ್ತು.

ನ್ಯಾಯಾಲಯದ ತೀರ್ಪಿನಿಂದ ನಿರಾಸೆಯಾಗಿದ್ದು, ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ. ಪ್ರಕರಣದ ಆರೋಪಿಗಳ ವಿರುದ್ಧ ಬಲವಾದ ಸಾಕ್ಷಿಗಳಿವೆ. ಇಬ್ಬರು ಆರೋಪಿಗಳ ಬಟ್ಟೆಯ ಮೇಲೆ ಮೌಲವಿಯ ರಕ್ತ ಪತ್ತೆಯಾಗಿದೆ. ಆರೋಪಿ ಬಳಸಿದ್ದ ಚಾಕುವಿನಲ್ಲಿ ಮೌಲವಿ ಬಟ್ಟೆಯ ತುಣುಕು ಸಿಕ್ಕಿದೆ. ನಾವು ಎಲ್ಲಾ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದೇವೆ. ಮೇಲ್ಮನವಿ ಸಲ್ಲಿಸುವ ಮೊದಲು ನ್ಯಾಯಾಲಯದ ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಸರ್ಕಾರಿ ವಕೀಲರಾದ ಸಿ.ಶಕ್ಕೂರ್ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶ ನಿರಾಸೆ ತಂದಿದೆ. ಈ ಆದೇಶವನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಮೌಲವಿ ಪತ್ನಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.