ಪುಣೆ: ಮೂಢನಂಬಿಕೆ ವಿರೋಧಿ ಹೋರಾಟಗಾರ ಡಾ.ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ವಿರುದ್ಧದ ಆರೋಪಗಳನ್ನು ಸೆ.15ರಂದು ಅಂತಿಮಗೊಳಿಸಲಾಗುತ್ತದೆ ಎಂದು ಇಲ್ಲಿನ ವಿಶೇಷ ನ್ಯಾಯಾಲಯ ತಿಳಿಸಿದೆ.

ಮಹಾರಾಷ್ಟ್ರದ ಅಂಧ ಶ್ರದ್ಧಾ ನಿರ್ಮೂಲನ ಸಮಿತಿಯ ಅಧ್ಯಕ್ಷರಾಗಿದ್ದ ನರೇಂದ್ರ ದಾಭೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಬಲಪಂಥೀಯ ಗುಂಪಿನ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಬಂಧಿತರಲ್ಲಿ ವೀರೇಂದ್ರ ಸಿನ್ಹಾ ತಾವ್ಡೆ, ಸಚಿನ್ ಅಂಧೂರೆ, ಶರದ್ ಕಲಸ್ಕರ್ ಮತ್ತು ವಿಕ್ರಂ ಭಾವೆ ವಿರುದ್ದ ಐಪಿಸಿ ಅನ್ವಯ ಕೊಲೆ ಮೊಕದ್ದಮೆ, ಕ್ರಿಮಿನಲ್ ಸಂಚು ಹಾಗೂ ಶಸ್ತ್ರಾಸ್ತ್ರ ಕಾಯ್ದೆ, ಕಾನೂನುಬಾಹಿರ ಕೃತ್ಯಗಳ ನಿಯಂತ್ರಣ ಕಾಯ್ದೆಯನ್ವಯ ಆರೋಪಗಳನ್ನು ಅಂತಿಮಗೊಳಿಸಲಾಗುವುದು. ವಕೀಲ ಸಂಜೀವ್ ಪುನಲೇಖರ್ ವಿರುದ್ಧ ಸಾಕ್ಷ್ಯ ನಾಪತ್ತೆಗೆ ಯತ್ನ, ತಪ್ಪು ಮಾಹಿತಿ ನೀಡಿದ ಆರೋಪಗಳನ್ನು ಅಂತಿಮಗೊಳಿಸಲಾಗುವುದ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಆರ್.ನವಂದರ್ ತಿಳಿಸಿದ್ದಾರೆ.

ಕೋರ್ಟ್ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಿದೆ.

‘ದಿಶಾ’ ರೇಪ್ ಕೇಸ್: ಅಕ್ಷಯ್, ಸಲ್ಮಾನ್ ಸೇರಿದಂತೆ 38 ನಟ–ನಟಿಯರಿಗೆ ಸಂಕಷ್ಟ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.