ನವದೆಹಲಿ: ಅದಾನಿ ಷೇರು ಹಗರಣದಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಭಾಗಿಯಾಗಿದ್ದಾರೆ ಎಂದು ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
.ಅದಾನಿ–ಹಿಂಡನ್‌ಬರ್ಗ್ | 3 ತಿಂಗಳಲ್ಲಿ ತನಿಖೆ ಮುಗಿಸಿ: ಸೆಬಿಗೆ ಸುಪ್ರೀಂ ಕೋರ್ಟ್.
ಇದೊಂದು ಬೃಹತ್ ಹಗರಣ ಎಂದು ಅವರು ಹೇಳಿದ್ದಾರೆ.

‘ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯುವವರೆಗೂ ಪ್ರಧಾನಿ ಮೋದಿಯವರು ತಮ್ಮ ಮಿತ್ರನನ್ನು ರಕ್ಷಿಸುವುದನ್ನು ಮುಂದುವರಿಸುತ್ತಾರೆ. ಏಳು ದಶಕಗಳಿಂದ ಶ್ರಮವಹಿಸಿ ಮಿರ್ಮಿಸಿರುವ ಭಾರತದ ಸಂವಿಧಾನಿಕ ಸಂಸ್ಥೆಗಳೊಂದಿಗೆ ಅವರು ರಾಜಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಖರ್ಗೆ ಆರೋಪಿದ್ದಾರೆ.
.ಅದಾನಿ ಷೇರು ಹಗರಣ | ಸೆಬಿ ಅಧ್ಯಕ್ಷೆ ಭಾಗಿ: ಹಿಂಡೆನ್‌ಬರ್ಗ್ ಆರೋಪ.
ಅದಾನಿ ಸಮೂಹದ ಬಗ್ಗೆ ತನಿಖೆಗೆ ಇರುವ ಹಿತಾಸಕ್ತಿ ಸಂಘರ್ಷವನ್ನು ತಡೆಯಬೇಕು ಎಂದು ಆಗ್ರಹಿಸಿರುವ ಅವರು, ಈ ಬಗ್ಗೆ ತನಿಖೆಗೆ ಜಂಟಿ ಸಂಸದೀಯ ರಚಿಸಬೇಕು ಎನ್ನುವ ತಮ್ಮ ಒತ್ತಾಯವನ್ನು ಪುನರುಚ್ಛರಿಸಿದರು.

‘2023ರ ಜನವರಿಯಲ್ಲಿ ಹಿಂಡನ್‌ಬರ್ಗ್ ಮಾಡಿದ ಆರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಮಿತ್ರನನ್ನು ಸುಪ್ರೀಂ ಕೋರ್ಟ್‌ನಲ್ಲಿ ಸೆಬಿ ಕ್ಲಿನ್ ಚಿಟ್ ನೀಡಿತ್ತು. ಆದರೆ ಹೊಸ ಆರೋಪದಲ್ಲಿ ಸೆಬಿಯ ಮುಖ್ಯಸ್ಥರೇ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
.ಹಿಂಡೆನ್‌ಬರ್ಗ್ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ: ಅದಾನಿ ಸಮೂಹ.
‘ಮಧ್ಯಮ ವರ್ಗದ ಸಣ್ಣ ಹೂಡಿಕೆದಾರರು ಕಷ್ಟ ಪಟ್ಟು ದುಡಿದು ಷೇರು ಮಾರುಕಟ್ಟೆಯಲ್ಲಿ ಹಾಕಿದ ಹಣವನ್ನು ರಕ್ಷಿಸಬೇಕಾಗಿದೆ. ಆವರು ಸೆಬಿಯನ್ನೇ ನಂಬಿಕೊಂಡಿದ್ದಾರೆ‘ ಎಂದು ಖರ್ಗೆ ಹೇಳಿದ್ದಾರೆ.

ಶನಿವಾರ ಆದಾನಿ ಸಮೂಹದ ಬಗ್ಗೆ ಮತ್ತೊಂದು ಸ್ಫೋಟಕ ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಷೇರು ಹಗರಣದಲ್ಲಿ ಸೆಬಿ ಅಧ್ಯಕ್ಷರೇ ಭಾಗಿಯಾಗಿದ್ದಾರೆ ಎಂದು ಹೇಳಿತ್ತು.
.ಹಿಂಡನ್‌ಬರ್ಗ್ ವರದಿಯು ಉದ್ದೇಶಿತ ತಪ್ಪು ಮಾಹಿತಿಯ ಸಂಯೋಜನೆ: ಅದಾನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.