ಜಮ್ಮು ಕಾಶ್ಮೀರ: 71ನೇ ಆವೃತ್ತಿಯ ಮಿಸ್ ವರ್ಲ್ಡ್ 2023 ಸ್ಪರ್ಧೆಯು ಈ ಬಾರಿ ಕಾಶ್ಮೀರದಲ್ಲಿ ನಡೆಯಲಿದೆ ಎಂದು ಮಿಸ್ ವರ್ಲ್ಡ್ ಸಂಸ್ಥೆಯ ಮುಖ್ಯಸ್ಥೆ ಮತ್ತು ಸಿಇಒ ಜುಲಿಯಾ ಎರಿಕ್ ಮೊರ್ಲೆ ತಿಳಿಸಿದ್ದಾರೆ.

ವಿಶ್ವ ಸುಂದರಿ ಸಂಸ್ಥೆಯ ಸಿಬ್ಬಂದಿ ನವೆಂಬರ್‌ನಲ್ಲಿ ಕಾಶ್ಮೀರಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 9 ರಂದು ಕಾರ್ಯಕ್ರಮ ನಡೆಯಲಿದೆ. ಈ ಸ್ಪರ್ಧೆಯಲ್ಲಿ 140 ದೇಶಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಮೊರ್ಲೆ ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಶ್ಮೀರದ ಜನರು ಸುಂದರವಾದ ಮನಸ್ಸನ್ನು ಹೊಂದಿದ್ದೀರಿ, ನಿಜವಾಗಿಯೂ ತುಂಬ ಖುಷಿಯಾಗುತ್ತಿದೆ. ನವೆಂಬರ್ ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ಮೊರ್ಲೆ ಹೇಳಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಈ ಹಿಂದಿನ ವಿಶ್ವಸುಂದರಿ ಸ್ಪರ್ಧೆಯ ವಿಜೇತರಾದ ಕೆರೊಲಿನಾ ಬೈಲಾವ್ಸ್ಕಾ, ಭಾರತದ ಸಿನಿ ಶೆಟ್ಟಿ, ಕೆರಿಬಿಯನ್ ಎಮ್ಮಿ ಪೆನಾ ಪಾಲ್ಗೊಂಡಿದ್ದರು.

ಭಾರತವು 1996ರಲ್ಲಿ ಕೊನೆಯದಾಗಿ ಬೆಂಗಳೂರಿನಲ್ಲಿ ಈ ಪ್ರಮುಖ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.