ಗುವಾಹಟಿ: ಒತ್ತುವರಿ ತೆರವು ಕಾರ್ಯಾಚರಣೆಗೆ ತೆರಳಿದ ಅಧಿಕಾರಿಗಳ ಮೇಲೆ ದಾಳಿಗೆ ಮುಂದಾದ ಗುಂಪಿನ ಮೇಲೆ ಪೊಲೀಸರು ನಡೆಸಿದ ಗುಂಡೇಟಿನಲ್ಲಿ ಬಂಗಾಳಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಬಲಿಯಾಗಿದ್ದಾರೆ.

ಮೃತರನ್ನು ಜೊವಾಹಿದ್ ಅಲಿ (19) ಮತ್ತು ಹೈದರ್ ಅಲಿ (21) ಎಂದು ಗುರುತಿಸಲಾಗಿದೆ. ಇತರ 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮವಾಗಿ ನೆಲೆಸಿದ ಅರೋಪ ಎದುರಿಸುತ್ತಿರುವವರನ್ನು ಸ್ಥಳಾಂತರ ಮಾಡಲು ಸೋನಾಪುರ ರೆವೆನ್ಯೂ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯ ತಂಡ ಕೊಚುತೋಳಿ ಗ್ರಾಮಕ್ಕೆ ಗುರುವಾರ ತೆರಳಿದಾಗ ಈ ಘಟನೆ ನಡೆದಿದೆ. ಉದ್ರಿಕ್ತರ ಗುಂಪು ನಡೆಸಿದ ದಾಳಿಗೆ ಮಹಿಳಾ ಸಿಬ್ಬಂದಿ ಸೇರಿ 22 ಪೊಲೀಸರು ಗಾಯಗೊಂಡಿದ್ದಾರೆ ಎಂದು ಡಿಜಿಪಿ ಜಿ.ಪಿ ಸಿಂಗ್ ಹೇಳಿದ್ದಾರೆ.

‘ಬುಡಕಟ್ಟು ಜನರಿಗೆ ಸೇರಿದ ಜಾಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸೋಮವಾರದಿಂದ ನಡೆಸಲಾಗುತ್ತಿದೆ. ಅಕ್ರಮವಾಗಿ ನಿರ್ಮಿಸಿದ್ದ 237 ಮನೆಗಳನ್ನು ಕೆಡವಲಾಗಿದೆ. ಆದರೆ ಕೆಲವು ನಿವಾಸಿಗಳು ಮತ್ತೆ ಅಲ್ಲಿ ತಾತ್ಕಾಲಿಕ ಟೆಂಟ್ ಹಾಕಿ ವಾಸ ಆರಂಭಿಸಿದ್ದರು. ಸ್ಥಳ ಖಾಲಿ ಮಾಡುವಂತೆ ಅವರಿಗೆ ಸೂಚಿಸಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಗುಂಪೊಂದು ದಾಳಿ ನಡೆಸಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.