ಸ್ವಿಚ್ಡ್ ಆಫ್, ನಾಟ್ ರೀಚಬಲ್:
ಪೆನ್ ಡ್ರೈವ್ ಬಹಿರಂಗದೊಂದಿಗೆ ವರ್ಷಗಳಿಂದ ಮಡುಗಟ್ಟಿದ ಸಂತ್ರಸ್ತೆಯರ ನೋವು ಕಣ್ಣೀರ ಧಾರೆಯಾಗಿದೆ. ಅಜ್ಞಾತದ ಕತ್ತಲು ಅವರನ್ನು ಇನ್ನಷ್ಟು ಭಯಭೀತರನ್ನಾಗಿ ಮಾಡಿದೆ. ಕುಟುಂಬದವರಿಂದಲೂ ತಾತ್ಸಾರಕ್ಕೊಳಗಾಗಿರುವ ಹಲವಾರು ಸಂತ್ರಸ್ತೆಯರ ಪಾಲಿಗೆ ಮೊಬೈಲ್ ಫೋನ್ ಸಾಂತ್ವನದ ಸಂಗಾತಿಯಾಗಿತ್ತು. ಆದರೆ, ಕರೆ ಮಾಡುವವರ ಕಾಟ, ಉತ್ತರಿಸಲಾಗದ ಸಂಕಟ, ಎಸ್‌ಐಟಿಯಿಂದ ಕರೆ ಬರುವ ಭೀತಿ, ಅನಿವಾರ್ಯವಾಗಿ ಅವರು ಮೊಬೈಲ್ ಫೋನ್‌ಗಳನ್ನು ಸ್ವಿಚ್ಡ್ ಆಫ್ ಮಾಡಿ, ಯಾರ ಸಂಪರ್ಕದ ಗೋಜಿಲ್ಲದ ಸ್ಥಳಕ್ಕೆ ತಲುಪಿದ್ದಾರೆ ಎನ್ನುತ್ತಾರೆ ಕೌನ್ಸಿಲಿಂಗ್ ನಡೆಸುವ ವೈದ್ಯೆಯೊಬ್ಬರು.