ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ನಡೆಯಿತೆನ್ನಲಾದ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಹಲವು ಸಂತ್ರಸ್ತೆಯರ ‘ಮನೆಗಳು ಮುರಿದಿವೆ’. ಅಸಂಖ್ಯಾತ ಮಹಿಳೆಯರು ಮತ್ತು ಅವರ ಮಕ್ಕಳ ಭವಿಷ್ಯ ಗಂಡಾಂತರಕ್ಕೆ ಸಿಲುಕಿದೆ. ಮನೆಯಿಂದ ಹೊರಬಂದು ತಲೆ ಎತ್ತಿ ಓಡಾಡುವ ಸ್ಥಿತಿಯಲ್ಲೂ ಸಂತ್ರಸ್ತೆಯರು ಇಲ್ಲ.

‘ನನ್ನ ಕುಟುಂಬದವರೇ ನನ್ನನ್ನು ಅಣಕಿಸುತ್ತಾರೆ. ತಿರಸ್ಕಾರದಿಂದ ನೋಡುತ್ತಿದ್ದಾರೆ’ ಎಂದು ದೌರ್ಜನ್ಯಕ್ಕೆ ಒಳಗಾದ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

‘ವ್ಯಕ್ತಿಗತ ನೆಲೆಯಲ್ಲಿ ಮಾನಹಾನಿ ಒಂದು ಕಡೆಯಾದರೆ, ಮತ್ತೊಂದು ಕಡೆ ಸಹೋದ್ಯೋಗಿಗಳೇ ‘ವೃತ್ತಿ ಸಾಮರ್ಥ್ಯ’ವನ್ನೂ ಪ್ರಶ್ನಿಸಲಾರಂಭಿಸಿದ್ದಾರೆ. ಅಷ್ಟೇ ಅಲ್ಲ; ವೃತ್ತಿಗೆ ಸಂಬಂಧಿಸಿದ ಸಂಘಟನೆಯ ಪದಾಧಿಕಾರಿ ಹುದ್ದೆಗೂ ರಾಜೀನಾಮೆ ನೀಡುವಂತೆ ಮಹಿಳಾ ಸಹೋದ್ಯೋಗಿಗಳೇ ಸಂದೇಶ ಕಳುಹಿಸಿದ್ದಾರೆ’ ಎಂದು ತಮಗೆ ಬಂದ ಸಂದೇಶವನ್ನು ತೋರಿಸಿ, ಸಿಟ್ಟು ಮತ್ತು ಅಸಹಾಯಕತೆಯಿಂದ ಅವುಡುಗಚ್ಚಿದ ಅವರು ಕೋಪದಿಂದ ಕಂಪಿಸಿದರು.

‘ಕುಟುಂಬದ ಸದಸ್ಯರು ಮತ್ತು ಬಂಧು– ಬಳಗದವರೂ ಈಗ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ತಾಯಿ ಮತ್ತು ಸಹೋದರಿಯ ಮೂಲಕ ಎಚ್ಚರಿಕೆಯ ಹಾಗೂ ಕುಹಕದ ಮಾತುಗಳನ್ನು ಹೇಳಿಸುತ್ತಿದ್ದಾರೆ. ನನಗೆ ಮಾತ್ರವಲ್ಲ, ನನ್ನ ಮನೆಯವರಿಗೂ ಕಾರ್ಯಕ್ರಮಗಳಿಗೆ ಆಹ್ವಾನ ನೀಡುವುದನ್ನೂ ನಿಲ್ಲಿಸಿ ಬಿಟ್ಟಿದ್ದಾರೆ’ ಎಂದು ಸಂತ್ರಸ್ತೆ ನಿಡುಸುಯ್ದರು.

‘ಈ ಹಗರಣ ಹೊರಬಂದಾಗ ಆದ ಅವಮಾನ ಮತ್ತು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿತ್ತು. ಆದರೆ, ಮಕ್ಕಳ ಮುಖ ನೋಡಿಕೊಂಡು ಆ ಮನಃಸ್ಥಿತಿಯಿಂದ ಹೊರಬಂದೆ. ಅಗ್ನಿಪರೀಕ್ಷೆಯ ಈ ಸಂದರ್ಭದಲ್ಲಿ ಕೆಲ ಹಿತೈಷಿಗಳು ನನ್ನ ಜತೆಗೆ ಗಟ್ಟಿಯಾಗಿ ನಿಂತರು’ ಎಂದು ಅವರು ಸ್ಮರಿಸಿಕೊಂಡರು.

ಏ. 22 ರಂದು ಅಶ್ಲೀಲ ವಿಡಿಯೊ ಕ್ಲಿಪಿಂಗ್, ಚಿತ್ರಗಳು ಮತ್ತು ವಿಡಿಯೊ ಕರೆಗಳ ಸ್ಕ್ರೀನ್ ಶಾಟ್ಗಳು ಬಹಿರಂಗಗೊಂಡ ಬಳಿಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹಲವು ಮಹಿಳೆಯರು ಇನ್ನೂ ಆಘಾತದ ಸ್ಥಿತಿಯಲ್ಲೇ ಇದ್ದಾರೆ. ಈ ಘೋರ ಕೃತ್ಯ ಮಾನವೀಯತೆ ಮತ್ತು ಸಮಾಜದ ಅಡಿಪಾಯವನ್ನೇ ಅಲುಗಾಡಿಸಿದೆ.

‘ಒಪ್ಪಿಕೊಂಡೇ ಆತನ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂಬ ಕಳಂಕವನ್ನೂ ದೌರ್ಜನ್ಯಕ್ಕೆ ಒಳಗಾದವರಿಗೆ ಅಂಟಿಸಲಾಗಿದೆ. ಕಳಂಕ ತೊಡೆದುಕೊಂಡು ಮುಖ್ಯವಾಹಿನಿಗೆ ಬರುವುದಕ್ಕೆ ಸಹಾಯ ಹಸ್ತವನ್ನು ಚಾಚುವವರೂ ಇಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಮಮತಾ ಶಿವು.

‘ಕೆಲವೇ ಸೆಕೆಂಡುಗಳ ವಿಡಿಯೊ ದೃಶ್ಯವನ್ನು ನೋಡಿ ಒಪ್ಪಿತ ಕ್ರಿಯೆ ಎಂದು ಹೇಗೆ ತೀರ್ಮಾನಕ್ಕೆ ಬರಲು ಸಾಧ್ಯ? ಕೆಲವು ವಿಡಿಯೊಗಳಲ್ಲಿ ದೃಶ್ಯವನ್ನು ಚಿತ್ರೀಕರಿಸದಂತೆ ಪರಿಪರಿಯಾಗಿ ಬೇಡಿಕೊಳ್ಳುವ ದೃಶ್ಯಗಳೂ ಇವೆ. ಆದರೂ ಆತ ಬಿಡುವುದಿಲ್ಲ. ದೃಶ್ಯವನ್ನು ನಂತರ ಡಿಲಿಟ್ ಮಾಡುವುದಾಗಿ ಆತ ಹೇಳುತ್ತಾನೆ’ ಎಂದು ಮಮತಾ ವಿವರಿಸುತ್ತಾರೆ.

‘ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ತಮ್ಮ ಪತಿ ಮತ್ತು ಮನೆಯ ಇತರರ ಸದಸ್ಯರಿಗಿಂತ ತಮ್ಮ ಮಕ್ಕಳಿಗೆ ವಿವರಿಸುವುದು ಕಷ್ಟವಾಗಿದೆ. ಯಾವ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗಿದ್ದು ಮತ್ತು ಸನ್ನಿವೇಶ ಎಂತಹದ್ದು ಎಂಬುದನ್ನು ಹೇಳುವುದು ಕಷ್ಟ. ಅಷ್ಟು ಮಾತ್ರವಲ್ಲ, ಪರಿಣಾಮಗಳನ್ನೂ ಎದುರಿಸಬೇಕಾಗಿದೆ. ಕೆಲವು ಮಹಿಳೆಯರು ತಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೂರು ನೀಡಲು ಮುಂದೆ ಬರುತ್ತಿಲ್ಲ. ಇಡೀ ಜಗತ್ತನ್ನಾದರೂ ಎದುರಿಸಬಹುದು. ಆದರೆ, ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯಾಗಿ ತಮ್ಮ ಮಕ್ಕಳನ್ನು ಎದುರಿಸಲು ಅವರು ತಯಾರಿಲ್ಲ’ ಎಂದು ಲೇಖಕಿ ರೂಪಾ ಹಾಸನ ಹೇಳುತ್ತಾರೆ.

‘ಇದೊಂದು ಅತ್ಯಂತ ಸಂಕೀರ್ಣ ಸನ್ನಿವೇಶ. ಸಂತ್ರಸ್ತೆಯರಿಗೆ ಮಾನಸಿಕ ಶಾಂತಿ ಮತ್ತು ದೈಹಿಕ ಸುರಕ್ಷತೆ ಸಿಗಲಿ ಎಂಬುದನ್ನು ಹಾರೈಸುತ್ತೇವೆ. ಧೈರ್ಯದಿಂದ ಸತ್ಯವನ್ನು ಹೇಳುವ ಆತ್ಮವಿಶ್ವಾಸ ಅವರಲ್ಲಿ ಬರಲಿ. ಆರೋಪಿಗಳ ಬಂಧನವಾಗಿ, ಶಿಕ್ಷೆಯಾದರೆ ಸಂತ್ರಸ್ತೆಯರಲ್ಲಿ ಆತ್ಮವಿಶ್ವಾಸ ಮೂಡಲು ಸಾಧ್ಯ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಮುರಿದುಬಿದ್ದ ನಿಶ್ಚಿತಾರ್ಥ’

ದೌರ್ಜನ್ಯಕ್ಕೆ ಒಳಗಾದ ಮೂವರು ವಿದ್ಯಾರ್ಥಿನಿಯರು ತಮ್ಮ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕೆಲವು ನಿಶ್ಚಿತಾರ್ಥಗಳು ಮುರಿದುಹೋಗಿವೆ.

ಇಡೀ ಹಾಸನದ ಸಾಮಾಜಿಕ ನೈತಿಕತೆಗೆ ಆಳವಾದ ಪೆಟ್ಟುಬಿದ್ದಿದೆ. ವಿಡಿಯೊಗಳಲ್ಲಿ ಮಹಿಳೆಯರ ಗುರುತನ್ನು ಮರೆಮಾಚಿಲ್ಲ. ಚಿಕ್ಕಪ್ರಾಯದ ಮತ್ತು ವಯಸ್ಸಾದ ಮಹಿಳೆಯರ ದೃಶ್ಯಗಳು ಹರಿದಾಡಿವೆ. ಇವರಲ್ಲಿ ಬಹುತೇಕರು ಹಾಸನದಲ್ಲಿ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಪರಿಚಿತರು. ರಾಜಕೀಯ ಪಕ್ಷಗಳ ಕಾರ್ಯಕರ್ತೆಯರು, ಮನೆಗೆಲಸದವರು, ಅಧಿಕಾರಿಗಳು ಮತ್ತು ವೃತ್ತಿಪರರೂ ಇದ್ದಾರೆ. ಇವರ ಸ್ಥಿತಿಯಂತೂ ಹೇಳ ತೀರದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.