ಚೆನ್ನೈ: ಮುಂದಿನ ತಿಂಗಳ ಪೊಂಗಲ್ ಹಬ್ಬದ ನಿಮಿತ್ತ ಪಡಿತರ ಚೀಟಿ ಹೊಂದಿರುವವರಿಗೆ ₹1,000 ಉಡುಗೊರೆ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ.

‘ಅಕ್ಕಿ ಪಡಿತರ ಚೀಟಿ ಹೊಂದಿರುವವರು ಪೊಂಗಲ್ ಉಡುಗೊರೆ ಪಡೆಯಲು ಅರ್ಹರು. ಶ್ರೀಲಂಕಾ ಪುನರ್ವಸತಿ ಕೇಂದ್ರದಲ್ಲಿ ಇರುವವರಿಗೂ ಈ ಉಡುಗೊರೆ ಸಿಗಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಫಲಾನುಭವಿಗಳಿಗೆ ಪೊಂಗಲ್ ಪ್ರಯುಕ್ತ 1 ಕೆ.ಜಿ ಅಕ್ಕಿ ಮತ್ತು ಸಕ್ಕರೆಯನ್ನೂ ಸರ್ಕಾರ ನೀಡಲಿದೆ. ಪಡಿತರ ಚೀಟಿ ಹೊಂದಿರುವ 2.19 ಕೋಟಿ ಜನ ಇದರ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕಾಗಿ ₹2,356.67 ಕೋಟಿ ವ್ಯಯಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.
ಜ.15ರಂದು ರಾಜ್ಯದಲ್ಲಿ ಪೊಂಗಲ್ ಹಬ್ಬ ನಡೆಯಲಿದೆ. ಜ.2ರಂದು ಮುಖ್ಯಮಂತ್ರಿ ಸ್ಟಾಲಿನ್ ಉಡುಗೊರೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.