ಢಾಕಾ: ಪ್ರಧಾನಿಯಾಗಿದ್ದ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದರಿಂದ, ಬಾಂಗ್ಲಾದೇಶದಲ್ಲಿ ಒಂದು ತಿಂಗಳಿನಿಂದ ಮುಚ್ಚಿದ್ದ ಶಾಲಾ–ಕಾಲೇಜುಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಭಾನುವಾರದಿಂದ ಪುನರಾರಂಭಗೊಂಡವು.

ಉದ್ಯೋಗದಲ್ಲಿನ ಮೀಸಲಾತಿ ವಿರೋಧಿಸಿ ಈಚೆಗೆ ನಡೆದ ಚಳವಳಿ ಸಂದರ್ಭದಲ್ಲಿ ಹಿಂಸಾಚಾರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ದೇಶದಾದ್ಯಂತ ಜುಲೈ 17ರಿಂದ ಅನಿರ್ದಿಷ್ಟ ಅವಧಿಗೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು.

ತನ್ನ ವ್ಯಾಪ್ತಿಯಲ್ಲಿನ ಸಂಸ್ಥೆಗಳನ್ನು ಪುನರಾರಂಭಿಸಲು ಶಿಕ್ಷಣ ಸಚಿವಾಲಯವು ಗುರುವಾರ ಆದೇಶ ಹೊರಡಿಸಿತ್ತು. ಒಂದು ತಿಂಗಳ ನಂತರ ಎಲ್ಲಾ ಶಿಕ್ಷಣ ಸಂಸ್ಥೆಗಳು ಭಾನುವಾರ ಮತ್ತೆ ಬಾಗಿಲು ತೆರೆದವು.

‘ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಸೂಚನೆಯ ಮೇರೆಗೆ, ಆ.18ರಿಂದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ’ ಎಂದು ಉಪ ಕಾರ್ಯದರ್ಶಿ ಮೊಸಮ್ಮತ್ ರಹಿಮಾ ಅಖ್ತರ್ ಆ.15ರಂದು ಸಹಿ ಮಾಡಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಢಾಕಾ ಮೂಲದ ಬೆಂಗಾಲಿ ನ್ಯೂಸ್ ಚಾನೆಲ್ ವರದಿ ಮಾಡಿದೆ.
.ಬಾಂಗ್ಲಾ ನಾಶ ಮಾಡಿದ ಹಸೀನಾ: ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಕಿಡಿ.ಅಲ್ಪಸಂಖ್ಯಾತರ ಮೇಲಿನ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ: ಬಾಂಗ್ಲಾದೇಶ.ಬಾಂಗ್ಲಾದೇಶ | ಮಾಜಿ ಪ್ರಧಾನಿ ಹಸೀನಾ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲು.ಬಾಂಗ್ಲಾದೇಶ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲು.ಬಾಂಗ್ಲಾದೇಶ | ನಗದು ಕೊರತೆಯಿಂದ ಉದ್ಯಮಕ್ಕೆ ಹೊಡೆತ: ವರದಿ .ಬಾಂಗ್ಲಾ ಸರ್ಕಾರದ ಸಲಹೆಗಾರರಾಗಲು ನೊಬೆಲ್ ಪುರಸ್ಕೃತ ಯೂನುಸ್ ಒಪ್ಪಿಗೆ.. ಯಾರಿವರು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.