ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಜ್ಬುಲ್ಲಾ ಕಮಾಂಡರ್ ಸುಹೇಲ್ ಹುಸೇನ್ ಹುಸೇನಿ ಹತ್ಯೆ : ಇಸ್ರೇಲ್ ಸೇನೆ

Published : 8 ಅಕ್ಟೋಬರ್ 2024, 7:45 IST
Last Updated : 8 ಅಕ್ಟೋಬರ್ 2024, 7:45 IST
ಫಾಲೋ ಮಾಡಿ
Comments

ದುಬೈ: ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಸುಹೇಲ್ ಹುಸೇನ್ ಹುಸೇನಿ ಹತನಾಗಿದ್ದಾನೆ.

ಲೆಬನಾನ್‌ ರಾಜಧಾನಿ ಬೈರೂತ್‌ ಪ್ರದೇಶದಲ್ಲಿ ದಾಳಿ ನಡೆಸಿದ್ದು, ಹಿಜ್ಬುಲ್ಲಾ ಪ್ರಧಾನ ಕಚೇರಿಯ ಕಮಾಂಡರ್ ಸುಹೇಲ್ ಹುಸೇನ್ ಹುಸೇನಿಯನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಗಾಜಾಪಟ್ಟಿಯಲ್ಲಿ ಇಸ್ರೇಲ್‌ ಸೇನೆಯು ಮಸೀದಿ ಮತ್ತು ಶಾಲಾ ಕಟ್ಟಡವನ್ನು ಗುರಿಯಾಗಿಸಿ ನಡೆಸಿದ ಪ್ರತ್ಯೇಕ ದಾಳಿಯಲ್ಲಿ 23 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇಸ್ರೇಲ್‌ ಸೇನೆ, ಹಮಾಸ್ ಗುರಿಯಾಗಿಸಿ ಗಾಜಾಪಟ್ಟಿಯಲ್ಲಿ ದಾಳಿ ಮುಂದುವರಿಸಿದೆ. ಜೊತೆಗೆ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ವಿರುದ್ಧವೂ ದಾಳಿ ತೀವ್ರಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT