ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಈ ವರ್ಷದ ಐದನೇ ಪೋಲಿಯೊ ಪ್ರಕರಣ ದೃಢಪಟ್ಟಿದ್ದು, ಪೋಲಿಯೊ ಪೀಡಿತ ಮಗುವೊಂದು ಮೃತಪಟ್ಟ ಹದಿನೈದು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಸೋಂಕು ನಿರ್ಮೂಲನೆಗೆ ಪಾಕಿಸ್ತಾನ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಇದರಿಂದ ಹಿನ್ನಡೆ ಉಂಟಾದಂತಾಗಿದೆ.

ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಎರಡು ವರ್ಷದ ಮಗುವೊಂದು ಮೇ 22 ರಂದು ಮೃತಪಟ್ಟಿತ್ತು. ಪೋಲಿಯೊ ಸೋಂಕಿನಿಂದ ಮಗು ಮೃತಪಟ್ಟಿದೆ ಎಂಬುದು ದೃಢಪಟ್ಟಿರುವುದಾಗಿ ಡಾನ್ ದಿನಪತ್ರಿಕೆ ವರದಿ ಮಾಡಿದೆ.

ಏಪ್ರಿಲ್ 29 ರಂದು ಇದ್ದಕ್ಕಿದ್ದಂತೆ ಮಗುವಿನ ಕಾಲುಗಳ ಶಕ್ತಿ ಕುಂದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕರಾಚಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸೋಂಕು ಉಲ್ಬಣಗೊಂಡು, ಕೈಗಳಿಗೂ ಹಬ್ಬಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೆಲ ದಿನಗಳ ಬಳಿಕ ಮೃತಪಟ್ಟಿದೆ ಎಂದು ವರದಿ ತಿಳಿಸಿದೆ.

ಪೋಲಿಯೊ ಲಸಿಕೆ ಅಭಿಯಾನದ ಅವಧಿಯಲ್ಲಿ ಮಗು ಲಸಿಕೆ ಪಡೆದುಕೊಂಡಿರಲಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಈ ವರ್ಷ ನಾಲ್ಕು ಪೋಲಿಯೊ ಪ್ರಕರಣಗಳು ದೃಢಪಟ್ಟಿವೆ. ಜೂನ್ 1 ರಂದು ಸಿಂಧ್ ಪ್ರಾಂತ್ಯದ ಮಗುವಿನಲ್ಲಿ ಪೋಲಿಯೊ ಸೋಂಕು ಕಂಡುಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.