ಹರಾರೆ: ಜಿಂಬಾಬ್ಬೆ ತಂಡದ ಉತ್ಸಾಹಿ ಆಟಗಾರರು ಶನಿವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಪ್ರತಿಭಾನ್ವಿತ ಆಟಗಾರರ ಪಡೆಯನ್ನು ಮಣಿಸಿದರು.

ಭಾರತ ತಂಡವು ಈಚೆಗಷ್ಟೇ ಟಿ20 ವಿಶ್ವಕಪ್ ಜಯಿಸಿತ್ತು. ಆದರೆ ಆ ತಂಡದಲ್ಲಿ ಆಡಿದವರು ವಿಶ್ರಾಂತಿ ಪಡೆದಿದ್ದರಿಂದ ಉದಯೋನ್ಮುಖ ಆಟಗಾರರ ಬಳಗವನ್ನು ಜಿಂಬಾಬ್ವೆ ಪ್ರವಾಸಕ್ಕೆ ಕಳಿಸಲಾಗಿದೆ. ಆದರೆ ಅನುಭವದ ಕೊರತೆ ಇರುವ ಜಿಂಬಾಬ್ವೆ ತಂಡದ ಎದುರು ಶುಭಮನ್ ಗಿಲ್ ನಾಯಕತ್ವದ ತಂಡವು ಪರದಾಡಿತು. 13 ರನ್ಗಳಿಂದ ಸೋತಿತು.

ಆತಿಥೇಯ ತಂಡವು ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು. ಭಾರತ ತಂಡವು 2024ರಲ್ಲಿ ಟಿ20 ಮಾದರಿಯಲ್ಲಿ ಸೋತ ಮೊದಲ ಪಂದ್ಯ ಇದಾಗಿದೆ. ಜಿಂಬಾಬ್ವೆ ಎದುರು ಎಂಟು ವರ್ಷಗಳಿಂದ ಇದ್ದ ಅಜೇಯ ದಾಖಲೆಯೂ ಇದರೊಂದಿಗೆ ಮುರಿದುಬಿತ್ತು.

116 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವನ್ನು 102 ರನ್ಗಳಿಗೆ ಕಟ್ಟಿಹಾಕುವಲ್ಲಿ ಜಿಂಬಾಬ್ವೆಯ ನಾಯಕ, ಸ್ಪಿನ್ನರ್ ಸಿಕಂದರ್ ರಝಾ (25ಕ್ಕೆ3) ಮತ್ತು ವೇಗಿ ತೆಂದೈ ಚತಾರಾ (16ಕ್ಕೆ3) ಯಶಸ್ವಿಯಾದರು.

ಗುರಿ ಬೆನ್ನಟ್ಟಿದ ಭಾರತ ತಂಡ ಮೊದಲ ಓವರ್ನಲ್ಲಿಯೇ ಆಘಾತ ಅನುಭವಿಸಿತು. ಪದಾರ್ಪಣೆ ಪಂದ್ಯ ಆಡಿದ ಅಭಿಷೇಕ್ ಶರ್ಮಾ ಖಾತೆಯನ್ನು ತರೆಯದೇ ನಿರ್ಗಮಿಸಿದರು. ಬ್ರಯನ್ ಬೆನೆಟ್ ಬೌಲಿಂಗ್ನಲ್ಲಿ ಅಭಿಷೇಕ್ ಕ್ರಾಸ್ ಬ್ಯಾಟ್ ಶಾಟ್ ಆಡಿದರು. ಆದರೆ, ಮಸಕಜಾ ಪಡೆದ ಕ್ಯಾಚ್ಗೆ ಔಟಾದರು. ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಪದಾರ್ಪಣೆ ಮಾಡಿದ ರಿಯಾನ್ ಪರಾಗ್ ಮತ್ತು ಧ್ರುವ ಜುರೇಲ್ ಕೂಡ ಎರಡಂಕಿ ಮುಟ್ಟಲಿಲ್ಲ. ರಿಂಕು ಸಿಂಗ್ ಅವರೂ ಸೊನ್ನೆ ಸುತ್ತಿದರು.

ಋತುರಾಜ್ ಗಾಯಕವಾಡ್ (7) ಆಟವೂ ನಡೆಯಲಿಲ್ಲ. ನಾಯಕ ಶುಭಮನ್ ಗಿಲ್ (31; 29ಎ) ಮತ್ತು ವಾಷಿಂಗ್ಟನ್ ಸುಂದರ್ (27; 34ಎ) ಅವರು ಹೋರಾಟ ತೋರಿದರು. ಆದರೆ ಶಿಸ್ತಿನ ದಾಳಿ ನಡೆಸಿದ ಬೌಲರ್ಗಳು ಭಾರತದ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು. ಜಿಂಬಾಬ್ವೆ ಆಟಗಾರರ ಫೀಲ್ಡಿಂಗ್ ಕೂಡ ಗಮನ ಸೆಳೆಯಿತು.

ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಸ್ಪಿನ್ನರ್ ರವಿ ಬಿಷ್ಣೋಯಿ (13ಕ್ಕೆ4) ಮತ್ತು ವಾಷಿಂಗ್ಟನ್ ಸುಂದರ್ (11ಕ್ಕೆ2) ಅವರ ದಾಳಿಯ ಮುಂದೆ ಜಿಂಬಾಬ್ವೆ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 115 ರನ್ ಗಳಿಸಿತು. ಆತಿಥೇಯ ತಂಡದ ಕ್ಲೈವ್ ಮೆದಾಂದೆ (ಔಟಾಗದೆ 29; 25ಎ) ಅವರು ಕೊನೆಯ ಹಂತದಲ್ಲಿ ದಿಟ್ಟ ಆಟವಾಡಿದರು. ಇದರಿಂದಾಗಿ ತಂಡದ ಮೊತ್ತವು 100ರ ಗಡಿ ದಾಟುವಂತಾಯಿತು.

ಸಂಕ್ಷಿಪ್ತ ಸ್ಕೋರು

ಜಿಂಬಾಬ್ವೆ: 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 115 (ವೆಸ್ಲಿ ಮದವೆರೆ 21, ಬ್ರಯನ್ ಬೆನೆಟ್ 22, ಡಿಯಾನ್ ಮೆಯರ್ಸ್ 23, ಕ್ಲೈವ್ ಮೆದಾಂದೆ ಔಟಾಗದೆ 29, ರವಿ ಬಿಷ್ಣೋಯಿ 13ಕ್ಕೆ4, ವಾಷಿಂಗ್ಟನ್ ಸುಂದರ್ 11ಕ್ಕೆ2)

ಭಾರತ: 19.5 ಓವರ್ಗಳಲ್ಲಿ 102 (ಶುಭಮನ್ ಗಿಲ್ 31, ವಾಷಿಂಗ್ಟನ್ ಸುಂದರ್ 27, ಆವೇಶ್ ಖಾನ್ 16, ತೆಂದೈ ಚತಾರಾ 16ಕ್ಕೆ3, ಸಿಕಂದರ್ ರಝಾ 25ಕ್ಕೆ3) ಫಲಿತಾಂಶ: ಜಿಂಬಾಬ್ವೆ ತಂಡಕ್ಕೆ 13 ರನ್ಗಳ ಜಯ ಹಾಗೂ ಸರಣಿಯಲ್ಲಿ 1–0 ಮುನ್ನಡೆ.

ಪಂದ್ಯಶ್ರೇಷ್ಠ: ಸಿಕಂದರ್ ರಝಾ.

ಎರಡನೇ ಪಂದ್ಯ ಇಂದು ಸಂಜೆ 4.30ಕ್ಕೆ; ಸೋನಿ ಸ್ಪೋರ್ಟ್ಸ್ನಲ್ಲಿ ನೇರಪ್ರಸಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.