ನವದೆಹಲಿ: ಏರ್ ಇಂಡಿಯಾ ವಿಮಾನವೊಂದು ದೆಹಲಿ ವಿಮಾನ ನಿಲ್ದಾಣದ ಸಮೀಪದ ರಸ್ತೆಯೊಂದರ ಸೇತುವೆ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ರನ್ವೇನಲ್ಲಿ ಚಲಿಸುತ್ತ ನಿಯಂತ್ರಣ ತಪ್ಪಿ ಸೇತುವೆಯ ಕೆಳಗೆ ನುಗ್ಗಿರುವ ಸಾಧ್ಯತೆ ಇದೆ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ವಿಮಾನದ ರೆಕ್ಕೆಗಳು ಕಾಣಿಸದಿರುವುದರ ಬಗ್ಗೆ ಅನುಮಾನಗೊಂಡಿದ್ದರು.

ಭಾರಿ ವೈರಲ್ ಆಗಿದ್ದ ಈ ವಿಡಿಯೊದ ನೈಜತೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ಕೊನೆಗೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದಾರೆ.

ವಿದ್ಯಾರ್ಥಿಗಳ ಕುಚೇಷ್ಟೆಯ ಪರಮಾವಧಿ; ಕ್ಲಾಸ್ ರೂಂನಲ್ಲೇ ಅಂಧ ಶಿಕ್ಷಕನಿಗೆ ಅವಮಾನ

'ಪ್ರಸ್ತುತ ಈ ವಿಮಾನ ನಮ್ಮ ಸಂಸ್ಥೆಯಲ್ಲಿ ಕಾರ್ಯಾಚರಿಸುತ್ತಿಲ್ಲ. ಇದು ಗುಜರಿ ವಿಮಾನ. ಹಿಂದೆಯೇ ಇದನ್ನು ಮಾರಲಾಗಿದೆ ಮತ್ತು ನೋಂದಣಿರದ್ದು ಪಡಿಸಲಾಗಿದೆ. ಶನಿವಾರ ರಾತ್ರಿ ಖರೀದಿದಾರರು ಗುಜರಿ ವಿಮಾನವನ್ನು ಸಾಗಿಸುವ ಸಂದರ್ಭ ಸೇತುವೆ ಕೆಳಗೆ ಸಿಕ್ಕಿಹಾಕಿಕೊಂಡಿದೆ. ಈ ಘಟನೆಗೂ ಏರ್ ಇಂಡಿಯಾಗೂ ಸಂಬಂಧವಿಲ್ಲ' ಎಂದು ಏರ್ ಇಂಡಿಯಾ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

2019ರಲ್ಲಿ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಇಂತಹದ್ದೇ ಘಟನೆ ಸಂಭವಿಸಿತ್ತು. ಟ್ರಕ್ ಒಂದರಲ್ಲಿ ಗುಜರಿ ವಿಮಾನ ಸಾಗಿಸುವ ವೇಳೆ ಸೇತುವೆಯ ಕೆಳಗೆ ಸಿಕ್ಕಿಹಾಕಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.