ಅಹಮದಾಬಾದ್: ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳ (ಜಿಸಿಎಂಎಂಎಫ್) ತನ್ನ ಜನಪ್ರಿಯ ಅಮುಲ್ ಹಾಲಿನ ಬೆಲೆ ಹೆಚ್ಚಳ ಮಾಡುವ ತೀರ್ಮಾನ ಕೈಗೊಂಡಿದೆ.

ಪ್ರತಿ ಲೀಟರ್ ಹಾಲಿನ ದರವನ್ನು ₹2ಗೆ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ. 2022ರ ಗುಜರಾತ್ ವಿಧಾನಸಭೆ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಅಮುಲ್ ಹಾಲಿನ ಬೆಲೆ ಹೆಚ್ಚಳ ಆಗಿದೆ.

ಸಾರಿಗೆ ವೆಚ್ಚದಲ್ಲಿನ ಗಣನೀಯ ಹೆಚ್ಚಳದಿಂದ ಈ ಬೆಲೆ ಹೆಚ್ಚಳ ಅನಿವಾರ್ಯವಾಗಿ ಮಾಡಲಾಗಿದೆ ಎಂದು ಜಿಸಿಎಂಎಂಎಫ್ ಮೂಲಗಳು ಹೇಳಿವೆ.

ಹೊಸ ದರದೊಂದಿಗೆ ಮಾರುಕಟ್ಟೆಯಲ್ಲಿ ಅಮುಲ್ ಎಮ್ಮೆ ಹಾಲು ಪ್ರತಿ ಲೀಟರ್‌ಗೆ ₹68, ಅಮುಲ್ ಗೋಲ್ಡ್ ₹64, ಅಮುಲ್ ಹಸುವಿನ ಹಾಲು ₹54 ಹಾಗೂ ಅಮುಲ್ ತಾಜಾ ಹಾಲು ₹52ರಂತೆ ಮಾರಾಟವಾಗಲಿದೆ ಎಂದು ಹೇಳಿದೆ.

ಈ ಬೆಲೆ ಹೆಚ್ಚಳ ಗುಜರಾತ್‌ನಲ್ಲಿ ಮಾತ್ರ ಅನ್ವಯವಾಗಲಿದ್ದು, ಕಳೆದ ಆರು ತಿಂಗಳ ಹಿಂದೆ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಇದ್ದಿದ್ದರಿಂದ ಅಲ್ಲಿ ಬಿಟ್ಟು ದೇಶದ ಉಳಿದ ಕಡೆ ₹5 ಹೆಚ್ಚಳ ಮಾಡಲಾಗಿತ್ತು.

ಟೋಲ್, ವಾಹನ, ಗ್ಯಾಸ್ ದರ ಹೆಚ್ಚಳ: ಇಂದಿನಿಂದ ಆಗುವ ಬದಲಾವಣೆಗಳಿವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.