ನವದೆಹಲಿ:ಕೇರಳದ ವಯನಾಡ್ಗೆಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಟೀಕಿಸಿದ್ದಾರೆ. ಕೇರಳದಲ್ಲಿ ರಾಜಕೀಯ ಪ್ರವಾಸೋದ್ಯಮ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ನಡ್ಡಾ ಅವರು ಕೋಯಿಕ್ಕೋಡ್ನಲ್ಲಿಹೊಸದಾಗಿ ನಿರ್ಮಿಸಲಾಗಿರುವ ಪಕ್ಷದ ಜಿಲ್ಲಾ ಸಮಿತಿ ಕಚೇರಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ʼಕೇರಳದಲ್ಲಿ ರಾಹುಲ್ ಗಾಂಧಿ ಅವರ ರಾಜಕೀಯ ಪ್ರವಾಸೋದ್ಯಮ ನಡೆಯುತ್ತಿದೆ. ಅವರು (ರಾಹುಲ್) ಅಮೇಥಿಯಲ್ಲಿ ಸೋಲು ಕಂಡು ವಯನಾಡ್ಗೆ ಓಡಿ ಹೋದರು. ರಾಜ್ಯ ಬದಲಿಸುವುದರಿಂದ ಯಾರೊಬ್ಬರ ನಡವಳಿಕೆ, ಉದ್ದೇಶಗಳು ಮತ್ತು ಜನರಿಗೆ ಸೇವೆ ಸಲ್ಲಿಸುವ ಸಮರ್ಪಣಾ ಭಾವದಲ್ಲಿ ಬದಲಾವಣೆಗಳಾಗುವುದಿಲ್ಲʼ ಎಂದು ಹೇಳಿದ್ದಾರೆ.

ಮುಂದುವರಿದು, ʼಕೇರಳದ ಬಗ್ಗೆ ಮಾತನಾಡುವಾಗ ನನಗೆ ತುಂಬಾ ನೋವು ಮತ್ತು ದುಃಖವಾಗುತ್ತದೆ. ಪ್ರಧಾನಿ ಮೋದಿಯವರು ಎಲ್ಲರೀತಿಯ ನೆರವು ನೀಡುತ್ತಿದ್ದಾರಾದರೂ, ಅವು ಸರಿಯಾದ ರೀತಿಯಲ್ಲಿಕಾರ್ಯಾಚರಣೆಗೆ ಬರುತ್ತಿಲ್ಲ. ಕಳೆದಮೂರ್ನಾಲ್ಕು ದಶಕಗಳಿಂದ ಚಾಲ್ತಿಯಲ್ಲಿರುವ ರಾಜಕೀಯ ಸಂಸ್ಕೃತಿಯಿಂದಾಗಿ ಕೇರಳದ ಅಭಿವೃದ್ಧಿಗೆ ತೊಡಕಾಗಿದೆʼ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಮೂರು ದಿನಗಳ(ಆಗಸ್ಟ್16ರಿಂದ 18ರ ವರೆಗೆ) ಭೇಟಿ ಸಲುವಾಗಿ ಇಲ್ಲಿಗೆಅಗಮಿಸಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿರುವ ರಾಹುಲ್, ಕುಡಿಯುವ ನೀರಿನ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.