ಶ್ರೀನಗರ:ಇಂಡೊ–ಟಿಬೆಟ್ ಗಡಿ ಪೊಲೀಸ್ ಪಡೆಯ 37 ಸಿಬ್ಬಂದಿ ಮತ್ತು ಇಬ್ಬರು ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಮಂಗಳವಾರ ಬ್ರೇಕ್ ವೈಫಲ್ಯದಿಂದ ನದಿಗೆ ಉರುಳಿಬಿದ್ದಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ.

ಇದರಲ್ಲಿ ಆರು ಮಂದಿ ಐಟಿಬಿಪಿ ಸಿಬ್ಬಂದಿಯಾದರೆ, ಒಬ್ಬರು ಪೊಲೀಸ್ ಇಲಾಖೆಯವರಾಗಿದ್ದಾರೆ. ಇನ್ನುಳಿದ 32 ಮಂದಿಗೂ ಗಾಯಗಳಾಗಿವೆ.

ಎಲ್ಲರೂ ಅಮರನಾಥದಲ್ಲಿ ಕರ್ತವ್ಯ ಮುಗಿಸಿಕೊಂಡು ಪೊಲೀಸ್ ಬಸ್‌ನಲ್ಲಿ ಪಾಲ್ಗಾಮ್‌ಗೆ ಮರಳುತ್ತಿದ್ಗರು. ಈ ವೇಳೆ ದುರಂತ ನಡೆದಿದೆ.

ಇಬ್ಬರು ಐಟಿಬಿಪಿ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಐವರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಐಟಿಬಿಪಿ ಸಿಬ್ಬಂದಿ ತಿಳಿಸಿದ್ದಾರೆ.

6 ಮಂದಿ ಐಟಿಬಿಪಿ ಸಿಬ್ಬಂದಿಯ ಪರಿಸ್ಥಿತಿಗಂಭೀರವಾಗಿದೆ.ವಿಶೇಷ ಚಿಕಿತ್ಸೆಗಾಗಿ ಅವರನ್ನು ಶ್ರೀನಗರಕ್ಕೆ ವಿಮಾನದಲ್ಲಿ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.