ನವದೆಹಲಿ: ‘ಪ್ರತಿಯೊಂದು ದೇಶದ ಸ್ಥಳೀಯ ಕಾನೂನುಗಳನ್ನು ಪಾಲಿಸಲು ಬದ್ಧರಾಗಿದ್ದೇವೆ ಮತ್ತು ಸರ್ಕಾರಗಳ ಜತೆ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಗುರುವಾರ ತಿಳಿಸಿದ್ದಾರೆ.

‘ಕಂಪನಿಯು ಸ್ಪಷ್ಟವಾದ ಪಾರದರ್ಶಕ ವರದಿಗಳನ್ನು ಹೊಂದಿದೆ ಮತ್ತು ಸರ್ಕಾರದ ಕೋರಿಕೆಗಳನ್ನು ಪರಿಗಣಿಸುತ್ತೇವೆ’ ಎಂದು ಏಷ್ಯಾ ಪೆಸಿಫಿಕ್ನ ಆಯ್ದ ವರದಿಗಾರರ ಜತೆ ನಡೆದ ವರ್ಚುವಲ್ ಕಾನ್ಫೆರೆನ್ಸ್ನಲ್ಲಿ ಅವರು ತಿಳಿಸಿದ್ದಾರೆ.

‘ಉಚಿತ ಮತ್ತು ಮುಕ್ತ ಇಂಟರ್ನೆಟ್ ಮೌಲ್ಯವನ್ನು ನಾವು ಅರಿತಿದ್ದೇವೆ. ಜತೆಗೆ, ಇದರ ಪ್ರಯೋಜನಗಳ ಅರಿವು ಇದೆ. ಇದೇ ನೀತಿ ಅನುಸರಿಸಬೇಕು ಎಂದು ಪ್ರತಿಪಾದಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಕಂಪನಿಯು ಶಾಸನಾತ್ಮಕ ಪ್ರಕ್ರಿಯೆಗಳನ್ನು ಗೌರವಿಸುತ್ತದೆ. ಸರ್ಕಾರಗಳು ಪರಿಶೀಲನೆ ವ್ಯವಸ್ಥೆ ಮತ್ತು ನಿಯಂತ್ರಣ ಚೌಕಟ್ಟುಗಳನ್ನು ಅಳವಡಿಸಿಕೊಳ್ಳುವುದು ನಿರೀಕ್ಷಿತವಾಗಿವೆ. ತಂತ್ರಜ್ಞಾನವು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಹೀಗಾಗಿ, ಇಂದಿನ ತಂತ್ರಜ್ಞಾನದ ಜಗತ್ತಿನಲ್ಲಿ ಆಡಳಿತದಲ್ಲಿ ಬದಲಾವಣೆಗಳು ಸಹಜ ಪ್ರಕ್ರಿಯೆಯಾಗಿದೆ’ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು ಬುಧವಾರದಿಂದ ಜಾರಿಯಾಗಿವೆ. ಡಿಜಿಟಲ್ ವೇದಿಕೆಗಳಾದ ಫೇಸ್ಬುಕ್, ವಾಟ್ಸ್ಆ್ಯಪ್, ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತು ಗೂಗಲ್ ಹೆಚ್ಚು ಉತ್ತರದಾಯಿತ್ವವಾಗಿರಬೇಕು ಮತ್ತು ಜವಾಬ್ದಾರಿ ಹೊಂದಿರಬೇಕು ಎಂದು ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.